ಮುಂಬೈ:`ಕಲೆ ಕರಗತಗೊಳ್ಳಲು ಕುಟುಂಬದ ಹಿಂದಿನ ಪರಂಪರೆ ಅಗತ್ಯ~ ಎಂದು ಸಂಶೋಧಕ ಡಾ.ಎ.ವಿ. ಪ್ರಸನ್ನ ಅವರು ಇಲ್ಲಿನ ಕರ್ನಾಟಕ ಸಂಘದ ಸಭಾ ಭವನದಲ್ಲಿ ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಚೊಚ್ಚಲ ಕೃತಿ `ನಾದೋಪಾಸನ~ ಅಂಕಣ ಬರಹ ಲೋಕಾರ್ಪಣೆ ಮಾಡಿ ಹೇಳಿದರು.

ಶ್ಯಾಮಲಾ ಅವರು ಸಂಗೀತಕಾರರ ಜೀವನದ ಬಗ್ಗೆ ಅರಿತು ಬರೆದ ಅಂಕಣ ಬರಹಗಳನ್ನು ಒಳಗೊಂಡ ಕೃತಿಯನ್ನು ಮತ್ತು ಅವರ ಸಾಧನೆಯನ್ನು ಶ್ಲಾಘಿಸಿದರು.

`ದೊಡ್ಡ ಸಂಸ್ಕೃತಿ ಸಣ್ಣ ಸಂಸ್ಕೃತಿಯನ್ನು ನುಂಗಿ ಹಾಕುತ್ತದೆಯೋ ಎಂಬಂತೆ ಹಿಂದೂಸ್ತಾನಿ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಮರೆಯಾಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ ~ ಎಂದು ಹೇಳಿದರು.

ಸಂಗೀತವನ್ನು ಮೈಗೂಡಿಸಲು ಅಪಾರವಾದ ಆಸಕ್ತಿ ಬೇಕು. ಮುಖ್ಯವಾಗಿ ಇನ್ನೊಬ್ಬರ ಸಂಗೀತವನ್ನು ಕೇಳುವ ಆಸಕ್ತಿ ಇರಬೇಕು. ಇದರಿಂದ ಸಂಗೀತ ಕೇಳುವ ಜತೆಗೆ ತಾವು ಮಾಡಿದ ತಪ್ಪು ತಿದ್ದಲು ಸಾಧ್ಯ ಎಂದು ಮೈಸೂರು ಅಸೋಸಿಯೇಶನ್ ಕೆ.ಮಂಜುನಾಥಯ್ಯ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.