ನವದೆಹಲಿ(ಪಿಟಿಐ): ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವ ಟಿಕೆ ಮತ್ತು ಡಾಲರ್ ವಿರುದ್ಧ ರೂಪಾಯಿ ಮೌಲ್ಯದಲ್ಲಿನ ಏರಿಳಿತ ಈ ವಾರ ಷೇರುಪೇಟೆ ವಹಿವಾಟಿನ ಗತಿ ನಿರ್ಧರಿಸ ಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ (ಡಬ್ಲ್ಯುಪಿಐ) ದರ ಫೆಬ್ರುವರಿಯಲ್ಲಿ 9 ತಿಂಗಳಲ್ಲೇ ಕನಿಷ್ಠ ಮಟ್ಟ ವಾದ ಶೇ 4.68ಕ್ಕೆ ಕುಸಿತ ಕಂಡಿದೆ. ಇದ ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಏ. 1ರಂದು ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಹೂಡಿಕೆದಾರರ ವಿಶ್ವಾಸವೂ ಇದರಿಂದ ಮರಳಿದ್ದು, ವಿಶೇಷವಾಗಿ ಐ.ಟಿ ಮತ್ತು ಔಷಧ ವಲಯದ ಕಂಪೆನಿಗಳ ಷೇರು ಗಳಲ್ಲಿ ಹೂಡಿಕೆ ಹೆಚ್ಚಿದೆ ಎಂದು ‘ಕೋಟಕ್ ಸೆಕ್ಯುರಿಟೀಸ್’ ಮುಖ್ಯಸ್ಥ ದಿಪಿನ್ ಷಾ ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದ ಬೆಳ ವಣಿಗೆಗಳು ಜಾಗತಿಕ ಷೇರುಪೇಟೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿದರೆ ಈ ವಾರ ನಕಾರಾತ್ಮಕ ಪ್ರಭಾವ ಬೀರುವ ಯಾವುದೇ ಸಂಗತಿ ಎಲ್ಲ ಎಂದೂ ಅವರು ಹೇಳಿದ್ದಾರೆ.

‘ಹಣದುಬ್ಬರ ತಗ್ಗಿರುವ ಹಿನ್ನೆಯಲ್ಲಿ ‘ಆರ್ಬಿಐ’ ಖಂಡಿತ ಬಡ್ಡಿ ದರ ಕಡಿತ ಮಾಡಲಿದೆ ಎಂಬ ಭಾರಿ ವಿಶ್ವಾಸದಲ್ಲಿ ಹೂಡಿಕೆದಾರರಿದ್ದಾರೆ’ ಎಂದು ‘ಬೊನಾಂಜಾ ಪೋರ್ಟ್ಫೋಲಿಯೊ’ ಸಂಸ್ಥೆ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.

ಜಾಗತಿಕ ಅಸ್ಥಿರತೆ ಹೊರತುಪಡಿಸಿ ದರೆ, ಇತ್ತೀಚಿನ ದೇಶೀಯ ಮಟ್ಟದ ಎಲ್ಲ ಬೆಳವಣಿಗೆಗಳು ಹೂಡಿಕೆದಾರರಿಗೆ ಅನುಕೂಲಕರವಾಗಿವೆ. ‘ಎಫ್ಐಐ’ ಹೂಡಿಕೆ ಮತ್ತು ಸಣ್ಣ ಹೂಡಿಕೆದಾರರ ಚಟುವ ಟಿಕೆ ಸೂಚ್ಯಂಕದ ಏರಿಳಿತ ನಿರ್ಧರಿಸಲಿದೆ ಎಂದು ರೆಲಿಗೇರ್ ಸೆಕ್ಯುರಿಟೀಸ್ನ ಮುಖ್ಯಸ್ಥ ಜಯಂತ್ ಮಂಗ್ಲಿಕ್ ಅಭಿಪ್ರಾ ಯಪಟ್ಟಿದ್ದಾರೆ.

ಅಮೆರಿಕದ ಸೆಂಟ್ರಲ್ ಬ್ಯಾಂಕ್ನ ಮುಕ್ತ ಮಾರುಕಟ್ಟೆ ಸಮಿತಿ (ಎಫ್ಒ ಎಂಸಿ) ಸಭೆ ಮಾ.18 ಮತ್ತು 19ರಂದು ನಡೆಯಲಿದೆ. ಈ ಸಭೆಯಲ್ಲಿ ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಕಡಿತ ಮಾಡಬೇಕೇ ಬೇಡವೇ ಎನ್ನುವುದರ ಕುರಿತು ನಿರ್ಧಾರ ಹೊರಬೀಳಲಿದೆ. ಫೆಡ ರಲ್ ರಿಸರ್ವ್ನ ಈ ಸಭೆ ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿ ರುವ ದೇಶಗಳ ಷೇರುಪೇಟೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಮಾರು ಕಟ್ಟೆ ತಜ್ಞರು ಹೇಳಿದ್ದಾರೆ.

ಕಳೆದ ವಾರದಲ್ಲಿ ಸೂಚ್ಯಂಕ ಒಟ್ಟಾರೆ 110 ಅಂಶಗಳಷ್ಟು ಹಾನಿ ಅನುಭವಿಸಿದ್ದು 21,809 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ. ಹೋಳಿ ನಿಮಿತ್ತ ಮಾ. 17ರಂದು ಷೇರುಪೇಟೆಗೆ ರಜೆ. ವಹಿ ವಾಟು ನಡೆಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.