ನವದೆಹಲಿ (ಪಿಟಿಐ): ಚಿನ್ನಾಭರಣಗಳಿಗೆ `ಹಾಲ್‌ಮಾರ್ಕ್~ ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.

`ಹಾರ್ಲ್‌ಮಾರ್ಕ್~, ಚಿನ್ನಾಭರಣಗಳ ಶುದ್ಧತೆ ಮತ್ತು ಉತ್ಕೃಷ್ಟತೆ ಸಂಕೇತಿಸುತ್ತದೆ. ಆದರೆ, ಸದ್ಯ `ಬಿಐಎಸ್~ ಹಾಲ್‌ಮಾರ್ಕ್ ಗುರುತು ಹಾಕುವುದು ಕಡ್ಡಾಯವಲ್ಲ. ಕೆಲವು ಚಿನ್ನಾಭರಣ ವ್ಯಾಪಾರಿಗಳು ಇದನ್ನು ಸ್ವಯಂಪ್ರೇರಿತವಾಗಿ ಹಾಕುತ್ತಿದ್ದಾರೆ. ಇದನ್ನು ಕಡ್ಡಾಯಗೊಳಿಸಬೇಕೇ ಬೇಡವೇ ಎನ್ನುವುದಕ್ಕೆ ಸಂಬಂಧಿಸಿದಂತೆ `ಭಾರತೀಯ ಮಾನದಂಡ ಮಂಡಳಿ~ಯ (ಬಿಐಎಸ್) ಸಲಹೆ ಕೇಳಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕೇಂದ್ರ ಸಚಿವ ಕೆ.ವಿ ಥಾಮಸ್ ಶುಕ್ರವಾರ ಇಲ್ಲಿ ತಿಳಿಸಿದರು.

`ಸದ್ಯ ಹಾಲಿನ ಉತ್ಪನ್ನಗಳು, ಶುದ್ಧೀಕರಿಸಿದ ನೀರು, ಸಿಮೆಂಟ್ ಸೇರಿದಂತೆ ಸುಮಾರು 77 ಸರಕುಗಳಿಗೆ ಗುಣಮಟ್ಟ ಖಾತರಿಗೊಳಿಸಿಲು `ಬಿಐಎಸ್~ ಹಾಲ್‌ಮಾರ್ಕ್ ಕಡ್ಡಾಯಗೊಳಿಸಲಾಗಿದೆ. `ಬಿಐಎಸ್ ಹಾಲ್‌ಮಾರ್ಕ್~ ತಿದ್ದುಪಡಿ ಮಸೂದೆ-2011ರಲ್ಲಿ ಚಿನ್ನವೂ ಸೇರಿದಂತೆ ಇನ್ನೂ ಹೆಚ್ಚಿನ ಸರಕುಗಳಿಗೆ `ಹಾಲ್‌ಮಾರ್ಕ್~ ಕಡ್ಡಾಯಗೊಳಿಸಬೇಕು ಎನ್ನುವ ಪ್ರಸ್ತಾವ ಇದೆ.

ಆದರೆ, ಯಾವ ಸರಕುಗಳಿಗೆ `ಬಿಐಎಸ್~ ಹಾಲ್‌ಮಾರ್ಕ್ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿತ್ತು. ಇದಕ್ಕೆ ಅಂತರ್-ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಈ ಮಸೂದೆ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ಗ್ರಾಹಕ ವ್ಯವಹಾರಗಳ ಸಚಿವಾಲಯ (ಎಂಒಸಿಎ) ಇದನ್ನು ಇತ್ಯರ್ಥಪಡಿಸಿದ್ದು, ಸಂಸತ್ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.