ಬೆಂಗಳೂರು–ಮೈಸೂರು ನಡುವೆ ಮತ್ತೊಂದು ರೈಲು

7
ಚೆನ್ನೈ– ಬೆಂಗಳೂರು ಎಕ್ಸ್‌ಪ್ರೆಸ್‌ ಮೈಸೂರುವರೆಗೆ ವಿಸ್ತರಣೆ

ಬೆಂಗಳೂರು–ಮೈಸೂರು ನಡುವೆ ಮತ್ತೊಂದು ರೈಲು

Published:
Updated:
Prajavani

ಮೈಸೂರು: ಮೈಸೂರಿನ ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ. ಈಚೆಗಷ್ಟೇ ‘ಮೆಮು’ ರೈಲು ಮೈಸೂರಿಗೆ ಸಿಕ್ಕ ಬೆನ್ನಲ್ಲೇ, ಚೆನ್ನೈ– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮೈಸೂರುವರೆಗೆ ವಿಸ್ತರಣೆಗೊಂಡಿದೆ.

ಈ ಮೂಲಕ ಹಗಲಿನ ವೇಳೆ ಚೆನ್ನೈಗೆ ಮೈಸೂರಿನಿಂದ ಪಯಣಿಸುವ ಅವಕಾಶ ಸಿಕ್ಕಂತಾಗಿದೆ. ಬೆಂಗಳೂರಿನ ವೈಟ್‌ ಫೀಲ್ಡ್‌, ಕೆ.ಆರ್.ಪುರಂ ಮೂಲಕ ಸಂಚರಿಸುವ ಕಾರಣ, ಆ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ರೈಲು ಸಂಖ್ಯೆ 12609 ಹಾಗೂ 12610 ಅನ್ನು ಮೈಸೂರಿಗೆ ವಿಸ್ತರಣೆ ಮಾಡುವಂತೆ ಕೋರಿದ್ದ ಪ್ರಸ್ತಾವಕ್ಕೆ ರೈಲ್ವೆ ಸಚಿವ ಪೀಯೂಷ್ ಗೋಯೆಲ್‌ ಮಂಗಳವಾರ ಸಹಿ ಹಾಕಿದ್ದಾರೆ.

ಮೈಸೂರಿನಿಂದ ಪ್ರತಿದಿನ ಬೆಳಿಗ್ಗೆ 4.45ಕ್ಕೆ ಹೊರಟು, ಬೆಂಗಳೂರನ್ನು ಬೆಳಿಗ್ಗೆ 8.02ಕ್ಕೆ ಸೇರಲಿದೆ. ಚೆನ್ನೈಗೆ ಮಧ್ಯಾಹ್ನ 2.30ಕ್ಕೆ ತಲುಪಲಿದೆ. ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಟು ಬೆಂಗಳೂರಿಗೆ ರಾತ್ರಿ 8.05ಕ್ಕೆ ಬರಲಿದೆ. ರಾತ್ರಿ 11ಕ್ಕೆ ಮೈಸೂರು ತಲುಪಲಿದೆ.

ರೈಲು ಸಂಚಾರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿಯಲ್ಲಿ ನಿಲುಗಡೆ ಮಾಡಲಿದೆ.

 

ಬರಹ ಇಷ್ಟವಾಯಿತೆ?

 • 42

  Happy
 • 4

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !