ವಾರ ಭವಿಷ್ಯ: 03-8-2025ರಿಂದ 9-8-2025 ರವರೆಗೆ
Published 2 ಆಗಸ್ಟ್ 2025, 23:37 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಎಲ್ಲಾ ವಿಚಾರಗಳನ್ನು ತಲೆಗೆ ತುಂಬಿಕೊಂಡು ಗೊಂದಲದ ಗೂಡಾಗಿರುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಆಸ್ತಿ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಧರ್ಮಪೀಠಾಧಿಪತಿಗಳಿಗೆ ಉತ್ತಮ ಗೌರವ ದೊರೆಯುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರದಿಂದಿರಿ. ಸಂಗಾತಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಆರ್ಥಿಕ ಸಹಕಾರ ಸಿಗುತ್ತದೆ.
02 ಆಗಸ್ಟ್ 2025, 23:37 IST
ವೃಷಭ
ಸಂಪಾದನೆ ಮಾಡುವ ಬಗ್ಗೆ ಸಾಕಷ್ಟು ವಿಚಾರವನ್ನು ಮಾಡುವಿರಿ. ಆದಾಯವು ಉತ್ತಮವಾಗಿರುತ್ತದೆ. ಆಸ್ತಿ ಖರೀದಿಯ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರುವುದಿಲ್ಲ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸುವವರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗುತ್ತದೆ. ಅತಿಯಾದ ಉಷ್ಣವು ದೇಹದಲ್ಲಿ ಆರೋಗ್ಯ ವ್ಯತ್ಯಾಸವನ್ನು ಉಂಟು ಮಾಡಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭ ಹೆಚ್ಚುತ್ತದೆ.
02 ಆಗಸ್ಟ್ 2025, 23:37 IST
ಮಿಥುನ
ನಿಮಗೆ ಸಮಾಜದಿಂದ ಬಹಳ ಗೌರವ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಬಂಧುಗಳ ಸಹಕಾರ ಸಿಗುವುದು ಬಹಳ ಕಡಿಮೆ. ಸ್ಥಿರಾಸ್ತಿಯ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಈಗ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಶೀತ ಸಂಬಂಧಿ ಕಾಯಿಲೆಗಳು ಕೆಲವರನ್ನು ಕಾಡಬಹುದು. ರಾಜಕಾರಣಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು.
02 ಆಗಸ್ಟ್ 2025, 23:37 IST
ಕರ್ಕಾಟಕ
ಬಹಳ ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಆದಾಯವು ಕಡಿಮೆ ಇರುತ್ತದೆ. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಬಂಧುಗಳ ಸಹಕಾರದ ಬದಲು ವಿರೋಧವು ಹೆಚ್ಚುತ್ತದೆ. ಚುರುಕಾಗಿ ಕೆಲಸ ಮಾಡುವಿರಿ. ಆಸ್ತಿ ವ್ಯವಹಾರಗಳಲ್ಲಿ ಹಣ ಬಂದರೂ, ಅದು ಉಳಿಯುವುದಿಲ್ಲ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಬರುವ ಸಾಧ್ಯತೆಗಳಿವೆ. ದೇಹದಲ್ಲಿ ಪಿತ್ತ ಹೆಚ್ಚಾಗಿ ಆರೋಗ್ಯ ಹದಗೆಡಬಹುದು. ಹಣಕಾಸಿನ ವ್ಯವಹಾರಗಳು ಖಂಡಿತ ಬೇಡ. ವೃತ್ತಿಯಲ್ಲಿ ಒತ್ತಡ ಹೆಚ್ಚಾಗುತ್ತದೆ.
02 ಆಗಸ್ಟ್ 2025, 23:37 IST
ಸಿಂಹ
ವೈರಾಗ್ಯದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವಿರಿ. ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಸ್ವಲ್ಪ ಆದಾಯವನ್ನು ನಿರೀಕ್ಷೆ ಮಾಡಬಹುದು. ಭೂಮಿ ಮಾರಾಟದಿಂದ ಆದಾಯ ಹೆಚ್ಚುತ್ತದೆ. ಪಶು ವ್ಯಾಪಾರ ಮಾಡುವವರಿಗೂ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ ಹಣದ ಮುಗ್ಗಟ್ಟು ಎದುರಾಗಿ, ಮುಜುಗರವಾಗಬಹುದು. ಸುಗಂಧ ದ್ರವ್ಯಗಳನ್ನು ಮಾರುವವರಿಗೆ ಲಾಭವಿದೆ.
02 ಆಗಸ್ಟ್ 2025, 23:37 IST
ಕನ್ಯಾ
ಬಹಳ ಧೈರ್ಯಶಾಲಿಗಳಾಗಿ ಎಲ್ಲಾ ಕೆಲಸಗಳಲ್ಲಿಯೂ ಮುನ್ನುಗ್ಗುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಚುರುಕಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆಯಲು ಪ್ರಯತ್ನ ಪಡುವಿರಿ. ತಾಯಿಯಿಂದ ಅತಿ ಹೆಚ್ಚು ಸಹಕಾರ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು ಕಡಿಮೆ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಸಂಗಾತಿಯು ನಿಮ್ಮ ವಿರುದ್ಧ ಮಾತನಾಡುವ ಸಾಧ್ಯತೆಗಳಿವೆ.
02 ಆಗಸ್ಟ್ 2025, 23:37 IST
ತುಲಾ
ಹಿರಿಯರನ್ನು ಓಲೈಸಲು ಪ್ರಯತ್ನಪಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬೀಜೋತ್ಪಾದನೆ ಮಾಡುವವರಿಗೆ ಲಾಭವಿದೆ. ವಿದೇಶದಲ್ಲಿ ಓದಬೇಕೆನ್ನುವ ಬಯಕೆ ಈಡೇರುತ್ತದೆ. ರಾಜಕಾರಣಿಗಳ ವ್ಯವಹಾರಗಳಿಂದ ಹಣ ಕಳೆದುಕೊಳ್ಳಬಹುದು. ಸಂಗಾತಿಯ ವೆಚ್ಚ ಏರಿಕೆಯಾಗುವ ಸಾಧ್ಯತೆಗಳಿವೆ. ಆಭರಣ ತಯಾರಕರಿಗೆ ಕುಸಿದಿದ್ದ ಬೇಡಿಕೆ ಮತ್ತೆ ಬರುತ್ತದೆ. ಹಿರಿಯರಿಂದ ಧನಸಹಾಯವನ್ನು ನಿರೀಕ್ಷೆ ಮಾಡಬಹುದು.
02 ಆಗಸ್ಟ್ 2025, 23:37 IST
ವೃಶ್ಚಿಕ
ವಾರದ ಆರಂಭದಲ್ಲಿ ಒಂದು ಸಂದೇಶ ದೊರೆತು ಮನಸ್ಸಿಗೆ ಬಹಳ ಆನಂದವಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ಶತ್ರುಗಳನ್ನು ಹುಡುಕಿ ನಿಗ್ರಹ ಮಾಡುವಿರಿ. ವಿದೇಶಗರಿಗೆ ಭೂಮಿಯನ್ನು ಕೊಡಿಸುವ ಕೆಲಸ ಮಾಡುತ್ತಿರುವವರಿಗೆ ಹೆಚ್ಚು ಲಾಭವಿದೆ. ರಾಜಕೀಯದಲ್ಲಿರುವವರಿಗೆ ಸ್ವಲ್ಪ ಅನುಕೂಲಗಳು ಹೆಚ್ಚಬಹುದು. ಸಂಗಾತಿಯಿಂದ ನಿರೀಕ್ಷಿತ ಪ್ರಮಾಣದ ಆರ್ಥಿಕ ಸಹಕಾರ ಸಿಗುವುದಿಲ್ಲ. ಮನೆಯಲ್ಲಿ ದೈವ ಕಾರ್ಯ ಮಾಡುವಿರಿ.
02 ಆಗಸ್ಟ್ 2025, 23:37 IST
ಧನು
ವಾರದ ಆರಂಭದಲ್ಲಿ ಸ್ವಲ್ಪ ಆಲಸ್ಯವಿದ್ದರೂ ನಂತರ ಚೇತರಿಕೆಯಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇದ್ದರೂ ಕೂಡ ತೊಂದರೆ ಇರುವುದಿಲ್ಲ. ನಿಮ್ಮ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಸಹಾಯ ಸಿಗುತ್ತದೆ. ಕೃಷಿ ಸಂಶೋಧಕರಿಗೆ ಉತ್ತಮ ಗೌರವ ಸಿಗುತ್ತದೆ. ಕೃಷಿ ಭೂಮಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಮೇಲ್ದರ್ಜೆಯನ್ನು ಪಡೆಯಬಹುದು. ಸಂಗಾತಿಯ ಸಹಕಾರದಿಂದ ಆರ್ಥಿಕ ಚೇತರಿಕೆಯನ್ನು ಕಾಣಬಹುದು. ಹಿರಿಯರ ಧರ್ಮಕಾರ್ಯಗಳನ್ನು ನೀವು ಮುಂದುವರಿಸಬಹುದು.
02 ಆಗಸ್ಟ್ 2025, 23:37 IST
ಮಕರ
ಹೆಚ್ಚು ಪರಾಕ್ರಮದಿಂದ ಹೋರಾಡುವಿರಿ. ಜನ ಸಮೂಹದ ನಡುವೆ ಮಾತನಾಡುವಾಗ ಹೆಚ್ಚು ಎಚ್ಚರದಿಂದಿರುವುದು ಒಳ್ಳೆಯದು. ನಿಮ್ಮ ಶತ್ರುಗಳು ಯಾರೆಂದು ಈಗ ನಿಮಗೆ ತಿಳಿಯುತ್ತದೆ. ಶ್ರದ್ಧೆಯಿಂದ ಕೆಲಸಮಾಡಿ ಉದ್ಯೋಗದಲ್ಲಿ ಹೆಸರು ಮಾಡುವಿರಿ. ಕೃಷಿಭೂಮಿ ಮಾರಾಟ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಫಲಿತಾಂಶ ಕಡಿಮೆಯಾಗಬಹುದು. ಲೇವಾದೇವಿ ಮಾಡುವವರಿಗೆ ಯಶಸ್ಸು ಇರುವುದಿಲ್ಲ. ಅನಿರೀಕ್ಷಿತವಾಗಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ವೃತ್ತಿಯಲ್ಲಿ ಒತ್ತಡಗಳಿರುತ್ತವೆ.
02 ಆಗಸ್ಟ್ 2025, 23:37 IST
ಕುಂಭ
ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಬೇಕಾದ ಸಮಯದಲ್ಲಿ ಬಂಧುಗಳು ಕೈಕೊಡುವ ಸಾಧ್ಯತೆಗಳಿವೆ. ಭೂಮಿ ವ್ಯವಹಾರ ಮಾಡುವವರಿಗೆ ನಿರೀಕ್ಷೆಗೆ ಮೀರಿದ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ದೊರೆಯುತ್ತದೆ. ಸರ್ಕಾರಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ದೈವ ದರ್ಶನಕ್ಕೆ ಹೋಗುವಿರಿ. ಕೃಷಿಯಿಂದ ನಿರೀಕ್ಷಿತ ಆದಾಯ ಬರುವುದಿಲ್ಲ. ವೃತ್ತಿಯಲ್ಲಿ ಅನುಕೂಲತೆಗಳು ಸಾಕಷ್ಟು ಹೆಚ್ಚುತ್ತವೆ.
02 ಆಗಸ್ಟ್ 2025, 23:37 IST
ಮೀನ
ಸಂಗಾತಿಯ ಸಹಕಾರದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಬಂಧುಗಳನ್ನು ಓಲೈಸಿಕೊಂಡು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಸಂಸಾರದಲ್ಲಿ ಸಂತೋಷವಿರುತ್ತದೆ. ಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಹೆಚ್ಚು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಸಂಗಾತಿಯು ನಿಮ್ಮ ವಿರುದ್ಧ ಸಿಡಿಮಿಡಿಗೊಳ್ಳಬಹುದು. ರೇಷ್ಮೆಬಟ್ಟೆಯ ತಯಾರಕರಿಗೆ ಅನಿರೀಕ್ಷಿತ ಲಾಭವಿರುತ್ತದೆ.
02 ಆಗಸ್ಟ್ 2025, 23:37 IST