ಬೆಂಗಳೂರು: ಕರ್ನಾಟಕದ ಈಜುಪಟುಗಳು ಅಹ್ಮದಾಬಾದ್ನಲ್ಲಿ ಭಾನುವಾರ ಆರಂಭಗೊಂಡ 51ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಆಕರ್ಷಕ ಪ್ರದರ್ಶನ ತೋರಿದರು.

ಬಾಲಕರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ದಕ್ಷಣ್ ಎಸ್. ಅವರು 3ನಿ.57.77 ಸೆ.ಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ದರ್ಶನ್ ಎಸ್. (4ನಿ.03.03ಸೆ.) ದ್ವಿತೀಯ ಸ್ಥಾನ ಪಡೆದರು.

ತನಿಷಿ ಗುಪ್ತಾ ಅವರು ಬಾಲಕಿಯರ 100 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಕೂಟ ದಾಖಲೆಯ (1ನಿ.00.93ಸೆ.) ಜೊತೆಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. 200 ಮೀ. ಫ್ರೀಸ್ಟೈಲ್ನಲ್ಲಿ ತ್ರಿಶಾ ಸಿಂಧು ಎಸ್. 2ನಿ.13.47ಸೆ.ಗಳಲ್ಲಿ ಗುರಿ ಮುಟ್ಟುವುದರೊಂದಿಗೆ ಚಿನ್ನದ ಪದಕ ಜಯಿಸಿದರು.

ಬಾಲಕರ 50 ಮೀ. ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಅದ್ವೈತ ವೆಂಕಟ ಮಧಿರ ಅವರು (28.54ಸೆ.) ಸ್ವರ್ಣಕ್ಕೆ ಮುತ್ತಿಕ್ಕಿದರು. ಬಾಲಕಿಯರ 50 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ವಿಹಿತಾ ನಯನ ಲೋಕನಾಥನ್ 29.84 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆಲ್ಲುವುದರೊಂದಿಗೆ ಕೂಟ ದಾಖಲೆಯನ್ನೂ ನಿರ್ಮಿಸಿದರು.

ವಿಹಿತಾ, ಶ್ರೀಚರಣಿ, ಮೀನಾಕ್ಷಿ ಮೆನನ್ ಹಾಗೂ ಹಾಷಿಕಾ ರಾಮಚಂದ್ರ ಅವರನ್ನೊಳಗೊಂಡ ತಂಡವು ಬಾಲಕಿಯರ 4x200 ಮೀ. ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಒಟ್ಟಾರೆ 7 ಚಿನ್ನ, 5 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಕರ್ನಾಟಕದ ಸ್ಪರ್ಧಿಗಳು ಟೂರ್ನಿಯಲ್ಲಿ ಪಾರಮ್ಯ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.