ಸಂವೇದಿ ಸೂಚ್ಯಂಕವು ಪ್ರತಿಭಾರಿ 20 ಸಾವಿರದ ಗಡಿದಾಟಿ ಮುನ್ನಡೆದಾಗ ಬೃಹತ್ ಪ್ರಮಾಣದ ಮಾರಾಟವನ್ನು ಎದುರಿಸುತ್ತಿದೆ. ಕಂಪೆನಿಗಳು ಆಕರ್ಷಕ ಲಾಭಾಂಶ ಪ್ರಕಟಿಸಿದರೂ ಬೆಂಬಲ ದೊರೆಯದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಮುಂದಿನ 3 ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ಹೂಡಿಕೆ ಮಾಡುವುದೆಂದು ಕಂಪೆನಿಯ ಅಧ್ಯಕ್ಷರ ಮಾತುಗಳು ಸಹ ಪೇಟೆಯನ್ನು ಹುರಿದುಂಬಿಸಲಾಗಲಿಲ್ಲ. ಆ ಕಂಪೆನಿಯ ಷೇರಿಗೂ ಬೆಂಬಲ ದೊರೆಯಲಿಲ್ಲ. ಲಾರ್ಸನ್ ಅಂಡ್ ಟ್ಯೂಬ್ರೊ ಕಂಪೆನಿಯು ಪ್ರತಿ ಷೇರಿಗೆ ರೂ18.50 ಯಂತೆ ಲಾಭಾಂಶ ಮತ್ತು 1:2ರ ಅನುಪಾತದ ಬೋನಸ್ ನೀಡಿದರೂ ಷೇರಿನ ಬೆಲೆಯು ಕುಸಿತ ಕಂಡಿತು.

ಕಂಪೆನಿಗಳಾದ ಟಾಟಾ ಕೆಮಿಕಲ್ಸ್ ಪ್ರತಿ ಷೇರಿಗೆ ರೂ10 ರಂತೆ, ಬ್ಯಾಂಕ್ ಆಫ್ ಇಂಡಿಯಾ ಸಹ ಪ್ರತಿ ಷೇರಿಗೆ ರೂ10 ರಂತೆ, ಯೂನಿಯನ್ ಬ್ಯಾಂಕ್ ಪ್ರತಿ ಷೇರಿಗೆ ರೂ8 ರಂತೆ ಲಾಭಾಂಶ ನೀಡಲಿದ್ದರೂ ಬೆಂಬಲ ದೊರೆಯದಾಗಿದೆ. ಈಗ ಎಲ್ಲರ ಗಮನವು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಆರ್ಥಿಕ ನೀತಿ ಮತ್ತು ಬ್ಯಾಂಕ್ ಬಡ್ಡಿದರ ಕಡಿತದತ್ತ ಹರಿದಿದೆ.

ಈ ವಾರದಲ್ಲಿನ ಚಟುವಟಿಕೆಯು ನೀರಸಮಯವಾಗಿದ್ದು ಚಟುವಟಿಕೆಯ ಗಾತ್ರ ಹೆಚ್ಚು ಕ್ಷೀಣಿತವಾಗಿರುವುದನ್ನು ಮಧ್ಯಮ ಶ್ರೇಣಿ ಸೂಚ್ಯಂಕ ಕೇವಲ 1.45 ಅಂಶಗಳಷ್ಟು ಇಳಿಕೆ ಕಂಡಿರುವುದರಿಂದ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ ಕೇವಲ 18 ಅಂಶಗಳಷ್ಟು ಏರಿಕೆ ಕಂಡಿರುವುದರಿಂದ ತಿಳಿಯಬಹುದು. ಈ ವಾರದಲ್ಲಿ ಹೊಸದಾಗಿ ಲೀಸ್ಟಿಂಗ್ ಆದ ಜಸ್ಟ್ ಡಯಲ್ ಕಂಪೆನಿಯ ವಹಿವಾಟು ಗಾತ್ರ ಹೆಚ್ಚಿಸಲು ಉತ್ತಮ ಕೊಡುಗೆ ನೀಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟಾರೆ ರೂ 25.95 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ 82 ಕೋಟಿ ಮೌಲ್ಯದ ಷೇರು ಖರೀದಿಸಿವೆ. ರೂಪಾಯಿಯ ಬೆಲೆಯು ಡಾಲರ್ ವಿರುದ್ಧ ಕುಸಿಯುತ್ತಿರುವುದು ಹೆಚ್ಚಿನ ಮಾರಾಟಕ್ಕೆ ಒತ್ತು ನೀಡುತ್ತಿದ್ದು, ಇದು ಹಿಂದಿನ ವರ್ಷದ ಕನಿಷ್ಠ ಬೆಲೆಗೆ ಇಳಿದಿರುವುದು ವಾತಾವರಣವನ್ನು ನೀರಸಮಯವಾಗಿಸಿದೆ. ಷೇರುಪೇಟೆ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ66.78 ಲಕ್ಷ ಕೋಟಿಯಿಂದ ರೂ66.09 ಲಕ್ಷ ಕೋಟಿಗೆ ಇಳಿದಿದೆ. ಈ ಮಧ್ಯೆ ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುವ ಪವನ್ಸುತ್ ಹೋಲ್ಡಿಂಗ್ಸ್ ಮತ್ತು ಅಹ್ಮದಾಬಾದ್ನ ಆಬ್ಜೆಕ್ಟ್ ಒನ್ ಇನ್ಫರ್ಮೇಷನ್ 11 ರಿಂದ ಬಿಎಸ್ಇಯಲ್ಲಿ ವಹಿವಾಟಾಗಲಿದೆ.

ಹೊಸ ಷೇರಿನ ವಿಚಾರ
ಸ್ಥಳೀಯ ಅವಶ್ಯಕತೆಗಳನ್ನು ಹುಡುಕುವ ಸೇವೆ ಒದಗಿಸುತ್ತಿರುವ ಜಸ್ಟ್ ಡೈಯರ್ ಲಿಮಿಟೆಡ್ ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ರೂ530 ರಂತೆ ಸಾರ್ವಜನಿಕ ವಿತರಣೆ ಮಾಡಿದೆ. ಈ ಕಂಪೆನಿಯ ಷೇರುಗಳು ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ 5ನೇ ಜೂನ್ನಿಂದ `ಬಿ' ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ಆರಂಭದ ದಿನ ಷೇರಿನ ಬೆಲೆಯು ರೂ 581.15 ರಿಂದ ರೂ631.9 ರವರೆಗೂ ಏರಿಳಿತ ಪ್ರದರ್ಶಿಸಿದೆ. ಈ ಕಂಪೆನಿಯು ಸಣ್ಣ ಹೂಡಿಕೆದಾರ ಷೇರುದಾರರಿಗೆ ಸುರಕ್ಷಾ ಚಕ್ರವನ್ನು ಒದಗಿಸಿರುವ ಮೊದಲ ಲೀಸ್ಟೆಡ್ ಕಂಪೆನಿಯಾಗಿದೆ. ರೂ647.40 ರಲ್ಲಿ ವಾರಾಂತ್ಯ ಕಂಡಿದೆ.

ಒನ್ಸೋರ್ಸ್ ಟೆಕ್ ಮೀಡಿಯಾ ಲಿಮಿಟೆಡ್ ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ರೂ14 ರಂತೆ ಸಾರ್ವಜನಿಕ ವಿತರಣೆ ಮಾಡಿದೆ. ಇದು ಎಸ್.ಎಂ.ಇ. ವಲಯದ ಕಂಪೆನಿಯಾಗಿದ್ದು ಜೂನ್ 5 ರಿಂದ `ಎಂ.ಟಿ.' ಗುಂಪಿನಲ್ಲಿ ವಹಿವಾಟಾಗುತ್ತಿದೆ. ಈ ಕಂಪೆನಿಯ ವಹಿವಾಟು ಗುಚ್ಚ ಹತ್ತು ಸಾವಿರ ಷೇರುಗಳಾಗಿದ್ದು, ವಹಿವಾಟು ನಡೆಸಬೇಕಾದರೆ 10 ಸಾವಿರದ ಗುಣಕಗಳಲ್ಲಿ ನಡೆಸಬೇಕು.

ಲಾಭಾಂಶ ವಿಚಾರ
ಚಾಲ್ಮರ್ ಅಂಡ್ ಲೌರಿ ಇನ್ವೆಸ್ಟ್ಮೆಂಟ್ಸ್ ಶೇ 110, ಎನ್.ಜಿ. ಇಂಡಸ್ಟ್ರೀಸ್ ಶೇ 35, ಹೆಸ್ಮರ್ ಬಯೋಸೈನ್ಸ್ ಶೇ 20, ಇಎಲ್ಎಫ್ ಟ್ರೇಡಿಂಗ್ ಅಂಡ್ ಕೆಮಿಕಲ್ಸ್ ಶೇ 20, ಜಿ.ಆರ್.ಎಂ. ಓವರ್ಸಿಸ್ ಶೇ 20, ಬ್ರೈಟ್ ಬ್ರದರ್ಸ್ ಶೇ 20.

ಬೋನಸ್ ಷೇರಿನ ವಿಚಾರ
ಮಿಡ್ಲ್ಯಾಂಡ್ ಪೊಲಿಮರ್ಸ್ ಕಂಪೆನಿಯು ಬೋನಸ್ ಷೇರು ಪರಿಶೀಲನೆಯನ್ನು 11ನೇ ಜೂನ್ಗೆ ಮುಂದೂಡಿದೆ.

ಪ್ಲೆಥಿಕೋ ಫಾರ್ಮಸ್ಯುಟಿಕಲ್ ಕಂಪೆನಿಯು ಪ್ರವರ್ತಕರನ್ನು ಹೊರತುಪಡಿಸಿ ಸಾರ್ವಜನಿಕ ಷೇರುದಾರರಿಗೆ 1:5ರ ಅನುಪಾತದ ಬೋನಸ್ ಪ್ರಕಟಿಸಿದೆ.

ಟ್ರಾನ್ಸ್ಫರ್ಮರ್ ಅಂಡ್ ರೆಕ್ಟಿಫೈಯರ್ಸ್ ವಿತರಿಸಲಿರುವ 1:9ರ ಬೋನಸ್ಗೆ 14ನೇ ಜೂನ್ ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ
ಹನಂಗ್ ಟಾಯ್ಸ ಅಂಡ್ ಟೆಕ್ಸ್ಟೈಲ್ಸ್ ಕಂಪೆನಿಯು 12 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

ಮಿಡ್ಲ್ಯಾಂಡ್ ಪೊಲಿಮರ್ಸ್ 11 ರಂದು ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ1ಕ್ಕೆ ಸೀಳಲು ನಿರ್ಧರಿಸಲಿದೆ.

ನಿಯಮ ಉಲ್ಲಂಘನೆ
ಪ್ರತಿಯೊಂದು ಕಂಪೆನಿಯು ಷೇರು ವಿನಿಮಯ ಕೇಂದ್ರದಲ್ಲಿ ಲೀಸ್ಟಿಂಗ್ ಆಗಿದ್ದರೆ, ಸಾರ್ವಜನಿಕ ವಲಯದ ಕಂಪೆನಿ ಹೊರತುಪಡಿಸಿ, ಅಂತಹ ಕಂಪೆನಿಯಲ್ಲಿ ಸಾರ್ವಜನಿಕರ ಭಾಗಿತ್ವವು ಕನಿಷ್ಠ ಶೇ 25 ರಷ್ಟಿರುವುದನ್ನು ಸೆಬಿ ಜಾರಿಗೊಳಿಸಿದ್ದು ಇದಕ್ಕೆ ಜೂನ್ 3ನ್ನು ಅಂತಿಮ ದಿನವೆಂದು ನಿಗದಿಪಡಿಸಿತ್ತು. ಹೆಚ್ಚಿನ ಕಂಪೆನಿಗಳು ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯ ಮೂಲಕ ಸಾರ್ವಜನಿಕ ಭಾಗಿತ್ವ ಹೆಚ್ಚಿಸಿಕೊಂಡವು. ಅಮಾನತ್ತಿನಲ್ಲಿರುವ ಕಂಪೆನಿಗಳೂ ಸೇರಿ ಒಟ್ಟು ಸುಮಾರು 105 ಕಂಪೆನಿಗಳು ಈ ನಿಯಮವನ್ನು ನಿಗದಿತ ದಿನದೊಳಗೆ ಜಾರಿಗೊಳಿಸಲು ತಪ್ಪಿವೆ.

ಅವುಗಳಲ್ಲಿ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕೊನಾಮಿಕ್ ಝೋನ್, ಬಾಟ್ಲಿಬಾಯ್, ಬಿಜಿಆರ್ ಎನರ್ಜಿ ಸಿಸ್ಟಮ್ಸ ಬಾಂಬೆ ರೆಯಾನ್ ಫ್ಯಾಷನ್ಸ್, ಚೆಟ್ಟಿನಾಡ್ ಸೀಮೆಂಟ್ಸ್ ಡಾಕ್ಟರ್ ಅಗರ್ವಾಲ್ ಐಹಾಸ್ಪಿಟಲ್, ಎಲಾಂಟಾ ಬೆಕ್ ಇಂಡಿಯಾ, ಎಸ್ಸಾರ್ ಪೋರ್ಟ್ಸ್, ಫೇರ್ಫೀಲ್ಡ್ ಅಟ್ಲಾಸ್, ಫೊಸೆಕೊ ಎಫ್.ಕೆ. ಆಂಕೋಲಜಿ, ಹಬ್ಟೌನ್, ಖೋಡೆ ಇಂಡಿಯಾ ಮರಾಥನ್ ನೆಕ್ಟ್ಸ್ಜೆನ್, ಮೊನೊಟೈಪ್ ಇಂಡಿಯಾ, ನಾಗಾರ್ಜುನ ಅಗ್ರಿಕೆಂ, ಓಮ್ಯಾಕ್ಸ್ ಲಿ., ಪ್ಲೆಥಿಕೋ ಫಾರ್ಮ ಸುಂದರಂ ಕ್ಲೇಟನ್, ಟಾಟಾ ಟೆಲಿ ಸರ್ವಿಸಸ್ (ಮಹಾರಾಷ್ಟ್ರ), ಟ್ರಾನ್ಸ್ಫಾರ್ಮರ್ ಅಂಡ್ ರೆಕ್ಟಿಫೈಯರ್ಸ್, ವಿಡಿಯೋಕಾನ್ ಇಂಡಸ್ಟ್ರೀಸ್ಗಳಿಲ್ಲದೆ ಇತರೆ 33 ಅಮಾನತ್ತಿನಲ್ಲಿರುವ ಕಂಪೆನಿಗಳು ಈ ನಿಯಮ ಪಾಲನೆಯಲ್ಲಿ ಎಡವಿದವಾಗಿವೆ.

ಈ ಕಂಪೆನಿಗಳು ಕನಿಷ್ಠ ಶೇ 25ರ ಸಾರ್ವಜನಿಕ ಭಾಗಿತ್ವ ನಿಯಮ ಪಾಲನೆಯವರೆಗೂ, ಪ್ರವರ್ತಕರಲ್ಲಿರುವ ಹೆಚ್ಚುವರಿ ಭಾಗಿತ್ವವನ್ನು ನಿಷ್ಕ್ರಿಯಗೊಳಿಸಲಾಗುವುದು. ಇದರಿಂದ ಹೆಚ್ಚುವರಿ ಭಾಗಿತ್ವದ ಷೇರುಗಳಿಗೆ ಮತದಾನದ ಹಕ್ಕು, ಲಾಭಾಂಶ, ಬೋನಸ್, ಹಕ್ಕಿನ ಷೇರು ಮುಂತಾದವುಗಳು ಲಭ್ಯವಿರುವುದಿಲ್ಲ.

ಹಾಗೂ ಪ್ರವರ್ತಕರು ಹೊಂದಿರುವ ಹೆಚ್ಚುವರಿ ಷೇರುಗಳ ಅನುಪಾತಕ್ಕೆ ಸರಿಯಾಗಿ ನಿಷ್ಕ್ರಿಯಗೊಳ್ಳುವ ಷೇರುಗಳನ್ನು ಹೊಂದಿಸಲಾಗುವುದು. ಈ ಲೋಪವೆಸಗಿರುವ ಕಂಪೆನಿಗಳ ಪ್ರವರ್ತಕರು ತಮ್ಮ ಕಂಪೆನಿಯ ಷೇರುಗಳನ್ನು ಈ ನಿಯಮ ಜಾರಿಗೊಳಿಸಲು ಮಾತ್ರ ಮಾರಾಟ ಮಾಡಬಹುದು. ಉಳಿದಂತೆ ಆ ಷೇರುಗಳಲ್ಲಿ ವಹಿವಾಟು ನಡೆಸದಂತೆ ನಿರ್ಬಂಧಿಸಲಾಗುವುದು. ಹಾಗೂ ಅಂತಹ ಪ್ರವರ್ತಕರು ಯಾವುದೇ ಲೀಸ್ಟೆಡ್ ಕಂಪೆನಿಗಳಲ್ಲಿ ನಿರ್ದೇಶಕರಾಗುವಂತಿಲ್ಲವೆಂದು ಸೆಬಿ ಘೋಷಿಸಿದೆ.

ಈ ರೀತಿಯ ನಿರ್ದಾಕ್ಷಿಣ್ಯ ಕ್ರಮಗಳು ಸೂಕ್ತವಾಗಿದೆ ಇದರೊಂದಿಗೆ ಲೋಪವೆಸಗಿದ ಕಂಪೆನಿಗಳನ್ನು ಸಹಜ ಚಟುವಟಿಕೆಯಿಂದ ಹೊರಹಾಕಿ `ಟಿ' ಗುಂಪಿಗೆ ವರ್ಗಾಯಿಸುವುದು ಮತ್ತಷ್ಟು ನ್ಯಾಯಸಮ್ಮತವಾದ ಕ್ರಮವಾಗುತ್ತದೆ.

ವಾರದ ವಿಶೇಷ
ಇನ್ಫೊಸಿಸ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್.ಆರ್. ನಾರಾಯಣಮೂರ್ತಿಯವರು ನೇಮಕಗೊಂಡಿರುವುದರಿಂದ ಇನ್ಫೊಸ್ ಷೇರನ್ನು ಈಗಿನ ಬೆಲೆಯಲ್ಲಿ ಕೊಳ್ಳಬಹುದೇ. ಮುಂದೆ ಷೇರಿನ ಬೆಲೆ ಏರಿಕೆ ಕಾಣಬಹುದೇ ದಯವಿಟ್ಟು ತಿಳಿಸಿರಿ.

ಉತ್ತರ: ಇನ್ಫೊಸಿಸ್ ಷೇರು ಸದ್ಯ ರೂ 2,446ರ ಬೆಲೆಯಲ್ಲಿ ವಹಿವಾಟಾಗುತ್ತಿದೆ. ಕಳೆದವಾರ ನಾರಾಯಣಮೂರ್ತಿಯವರು ಮರು ನೇಮಕಗೊಂಡ ಕಾರಣ ಷೇರಿನ ಬೆಲೆಯು ಸೋಮವಾರ 3 ರಂದು ರಭಸದ ಏರಿಕೆ ಕಂಡು ನಂತರ ಇಳಿಯಿತು. ಅಂದು ರೂ2,624ರ ಗರಿಷ್ಠಮಟ್ಟ ಮಧ್ಯಂತರದಲ್ಲಿ ತಲುಪಿ ನಂತರ ರೂ2,513 ರಲ್ಲಿ ಅಂತ್ಯಗೊಂಡಿತು. ನಂತರದ ದಿನಗಳಲ್ಲಿಯೂ ಇಳಿಕೆ ಪ್ರದರ್ಶಿಸಿದೆ. ಈಗಿನ ಷೇರುಪೇಟೆಗೆ ಯಾವುದೇ ಸುದ್ದಿಗಳು ದೀರ್ಘಕಾಲೀನ ಪ್ರಭಾವಿಯಾಗಿರದ ಅತ್ಯಲ್ಪ ಅವಧಿಯ ಪ್ರಭಾವವನ್ನು ಬೀರುತ್ತವೆ.

ಈ ಹಿಂದೆ ಸಿಟಿಬ್ಯಾಂಕ್ನ ಅಧ್ಯಕ್ಷರಾಗಿ ಭಾರತದ ವಿಕ್ರಂ ಪಂಡಿತ್ರವರು ಅಧಿಕಾರ ವಹಿಸಿಕೊಂಡಾಗ ಕೇವಲ ಒಂದು ಡಾಲರ್ ವೇತನವನ್ನು ಪಡೆದು, ಬ್ಯಾಂಕ್ ಉತ್ತಮ ಚೇತರಿಕೆ ಕಂಡ ನಂತರವಷ್ಟೆ ಪೂರ್ಣ ಪ್ರಮಾಣದ ವೇತನ ಪಡೆದರು.

ಹಾಗೆಯೇ ಇನ್ಫೊಸಿಸ್ಗೆ ಸಮರ್ಥ ನಾಯಕತ್ವ ಬೇಕೆಂದು ನಾರಾಯಣಮೂರ್ತಿಯವರನ್ನು ನೇಮಿಸಿರುವುದು ಮತ್ತು ಅವರು ಕೇವಲ ಒಂದು ರೂಪಾಯಿಯ ವೇತನ ಪಡೆಯುವುದು ಉತ್ತಮ ಬೆಳವಣಿಗೆಯಾದರೂ, ಈಗಾಗಲೇ ಬೆಳವಣಿಗೆಯಿಂದ ಕುಂಟಿತವಾಗಿ, ಉತ್ತಮ ಪ್ರಗತಿಯಿಂದ ಹಿಂದೆ ಸರಿದಿರುವ ಈ ಕಂಪೆನಿಯನ್ನು ಹಿಂದಿನ ಪ್ರಗತಿ ಪಥಕ್ಕೆ ತರುವುದು ಸುಲಭವಲ್ಲ. ನೌಕರ ವೃಂದದಲ್ಲೂ ಹೆಚ್ಚಿನ ಏರುಪೇರುಗಳಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಸ್ಪರ್ಧಾತ್ಮಕ ವಾತಾವರಣವನ್ನು ನಿಭಾಯಿಸಿಕೊಂಡು ಕಂಪೆನಿಯನ್ನು ಉಚ್ಚಾವಸ್ಥೆಗೆ ತರುವುದು ಸವಾಲಾಗಿರುತ್ತದೆ.

ನಾರಾಯಣಮೂರ್ತಿಯವರು ಈಗಿನ ವ್ಯವಸ್ಥೆಯನ್ನಾಧರಿಸಿ, ನೌಕರ ವೃಂದದ ವಿಶ್ವಾಸ ತೆಗೆದುಕೊಂಡು ಕಂಪೆನಿಯ ಪ್ರತಿಷ್ಠೆ ಬೆಳಸುವತ್ತ ಆದ್ಯತೆ ನೀಡುವರೆಂಬ ನಂಬಿಕೆ ಎಲ್ಲರಲ್ಲಿದೆ. ಹಾಗಾಗಿ ಕಂಪೆನಿಯ ಷೇರಿನ ಬೆಲೆಯು ಕುಸಿತದಲ್ಲಿದ್ದಾಗ ಕೊಳ್ಳುವುದಕ್ಕೆ ಉತ್ತಮ. ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳುವಾಗ ಹೂಡಿಕೆಯ ಸಮಯದಲ್ಲಿರುವ ಷೇರಿನ ಬೆಲೆಯು ಅತ್ಯಂತ ಪ್ರಮುಖವಾದ್ದು. ಪ್ರತಿ ಕುಸಿತವು ಹೂಡಿಕೆಗೆ ಅವಕಾಶವೇ ಸರಿ. ಇದರ ಜೊತೆಗೆ ಪೇಟೆಯ ವಾತಾವರಣ, ರೂಪಾಯಿಯ ಬೆಲೆ (ಡಾಲರ್ ವಿರುದ್ಧ), ಯಲ್ಲಾಗುವ ಏರುಪೇರುಗಳು, ಕಂಪೆನಿಯ ಬೆಳವಣಿಗೆಗಳು ಪ್ರಭಾವ ಬೀರುತ್ತವೆ.

ಯಾವುದಕ್ಕೂ ಅರಿತು ಹೂಡಿಕೆ ಮಾಡಿರಿ ಅನುಸರಿಸಬೇಡಿ. ಮುಖ್ಯವಾಗಿ ಷೇರುಪೇಟೆಯ ದೃಷ್ಟಿಯಿಂದ ಎಲ್ಲಾ ಬೆಳವಣಿಗೆಗಳು ಅಲ್ಪಕಾಲೀನವಾಗಿರುವುದನ್ನು ನೆನಪಿನಲ್ಲಿಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.