ಚಿಂತನ ಚಿಲುಮೆ ಉಕ್ಕುವಂತೆ ಮಾಡಿದ ವ್ಯಂಗ್ಯಚಿತ್ರ ಪ್ರದರ್ಶನದ ನೆನಪು ತೀರ ಇತ್ತೀಚಿನದು. ಫೆಬ್ರುವರಿ 26ರಂದು ಆ ಪ್ರದರ್ಶನ ನಡೆದಿದ್ದು. ಸೂಕ್ಷ್ಮ ದೃಷ್ಟಿಯ ಮನೋಭಾವದ ಅಬು ಅಬ್ರಹಾಮ್ ಅವರ ಕುಂಚದಿಂದ ಅರಳಿದ ವ್ಯಂಗ್ಯಚಿತ್ರಗಳು ಅಲ್ಲಿ ಅನಾವರಣಗೊಂಡಿದ್ದವು.

ಈ ಪ್ರತಿಭಾವಂತ ಮಲೆಯಾಳಿ ಕಲಾವಿದ ಹಲವಾರು ವರ್ಷ ಲಂಡನ್ನಲ್ಲಿ ಇದ್ದವರು. ಕೇರಳಕ್ಕೆ ಹಿಂದಿರುಗುವ ಮುನ್ನ ಕೆಲವು ಕಾಲ ನವದೆಹಲಿಯಲ್ಲಿಯೂ ನೆಲೆಸಿದ್ದರು. ಅನುಭವದ ಪಕ್ವತೆಯಿಂದ ಅಬು ಅವರು ಐವತ್ತು ವರ್ಷಗಳ ಅವಧಿಯಲ್ಲಿ ಚಿತ್ರಿಸಿದ ಕಲಾಕೃತಿಗಳನ್ನು ಒಟ್ಟಿಗೆ ನೋಡುವ ಅವಕಾಶ ಸಿಕ್ಕಿತೆನ್ನುವ ಸಂತಸ. ಅವುಗಳಲ್ಲಿ ಆಕರ್ಷಣೆಯ ಕೇಂದ್ರ ಎನಿಸಿದ್ದು 1970ರ ದಶಕದಲ್ಲಿನ ವ್ಯಂಗ್ಯಚಿತ್ರಗಳು.

ಹಲವು ವಿಶ್ಲೇಷಣೆಗಳು ಅಲ್ಲಿ. ವಸ್ತು ಸಂಬಂಧ, ಕಾರಣ, ಹೂರಣ ಎಲ್ಲವನ್ನೂ ಅಡಕವಾಗಿಸಿದ ಕೃತಿಗಳು. ಚಿತ್ರಗಳಲ್ಲಿನ ಪಾತ್ರವೊಂದು ‘ಅಭ್ಯರ್ಥಿಗಳ ಸಾಮರ್ಥ್ಯವನ್ನು ತೂಗಿ ನೋಡಬೇಕು’ ಎಂದು. ಇದಕ್ಕೆ ಇನ್ನೊಬ್ಬ ‘ಹೌದು, ಅದಕ್ಕಿಂತ ಮುಖ್ಯವಾಗಿ ಸಂಬಂಧಿಗಳ ಸಾಮರ್ಥ್ಯವನ್ನು’ ಎಂದು. ಇನ್ನೊಂದರಲ್ಲಿ ರಾಜಕಾರಣಿ ‘ಎ’ ಜೊತೆಗಿರುವ ರಾಜಕಾರಣಿ ‘ಬಿ’ಗೆ ಹೇಳುತ್ತಾನೆ ‘ಪೋಖ್ರಾನ್ನಲ್ಲಿ ಗಳಿಸಿದ್ದೆಲ್ಲವೂ ಲಾರ್ಡ್ಸ್ನಲ್ಲಿ ಕಳೆದು ಹೋಯಿತು’. ಅದೊಂದು ಸೂಕ್ಷ್ಮ ವ್ಯಂಗ್ಯ.

ನನಗಿಂತ ಕಿರಿಯ ವೀಕ್ಷಕರಿಗೆ ಅಲ್ಲಿ ಅಡಗಿರುವ ಸೂಕ್ಷ್ಮ ಅಂಶಕ್ಕೆ ವಿವರಣೆ ಹಾಗೂ ನಿದರ್ಶನ ನೀಡುವಂಥ ಕಾರಣದ ಅರಿವಿರಲಿಕ್ಕಿಲ್ಲ.ಆದರೆ ನನಗೆ ಎಲ್ಲವೂ ಸ್ಪಷ್ಟವಾಗಿತ್ತು. 1974ರಲ್ಲಿ ನಾನು ಹದಿನಾರು ವರ್ಷ ವಯಸ್ಸಿನ ಯುವಕ. ಅದು ಪ್ರೇಮವೆನ್ನುವ ಸಂಶೋಧನೆಯಲ್ಲಿ ತೊಡಗುವ ಕಾಲ. ಒಬ್ಬರ ಬಗ್ಗೆ ಹಾಗೂ ಒಂದು ದೇಶದ ಬಗ್ಗೆ ಪ್ರೀತಿ ಹುಟ್ಟುವ ಸಮಯ.

ಆ ವರ್ಷದ ಮೇ ತಿಂಗಳಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ ನನಗೂ ಹೆಮ್ಮೆ. ರಾಷ್ಟ್ರಾಭಿಮಾನ ಉಕ್ಕಿಹರಿಯಿತು. ಆದರೆ ಅದೇ ಕಾಲದಲ್ಲಿ ಭಾರತ ಕ್ರಿಕೆಟ್ ತಂಡವು ಲಾರ್ಡ್ಸ್ನಲ್ಲಿ ಮುಖಭಂಗ ಅನುಭವಿಸಿತ್ತು. ಸುನಿಲ್ ಗಾವಸ್ಕರ್, ಜಿ.ಆರ್.ವಿಶ್ವನಾಥ್, ಫಾರೂಕ್ ಎಂಜಿನೀಯರ್...ಹೀಗೆ ಮಹಾಮಹಿಮ ಬ್ಯಾಟ್ಸ್ಮನ್ಗಳಿದ್ದ ಪಡೆ ಇಂಗ್ಲೆಂಡ್ ಎದುರು 42 ರನ್ಗಳಿಗೆ ಆಲ್ಔಟ್ ಆಗಿತ್ತು.

ತಿಂಗಳ ಕಾಲದಲ್ಲಿ ಅನೇಕ ಮುಖಭಂಗಗಳನ್ನು ಎದುರಿಸಬೇಕಾಯಿತು. ನನ್ನಂಥ ರಾಷ್ಟ್ರಪ್ರೇಮಿಗಳಿಗೆ ಅದೊಂದು ಸಹನೀಯವಲ್ಲದ ಕಾಲ. ಆ ಕಾಲದಲ್ಲಿನ ಚಡಪಡಿಕೆಯನ್ನು ಅಬು ಅವರು ವಿಭಿನ್ನವಾದ ದೃಷ್ಟಿಯಲ್ಲಿ ನೋಡಿದ್ದರು. 1974ರಲ್ಲಿ ಪತ್ರಿಕೆಗಳನ್ನು ಓದುತ್ತಿದ್ದವರಿಗೆ ಈ ಮಲೆಯಾಳಿ ವ್ಯಂಗ್ಯ ಚಿತ್ರಕಾರ ಹೇಳಿದ್ದು, ಈ ಕಾಲದಲ್ಲಿಯೂ ನನ್ನ ಮನಕ್ಕೆ ತಟ್ಟಿತು.

ಆದರೂ ಅಣ್ವಸ್ತ್ರ ಪರೀಕ್ಷೆ ಹಾಗೂ ಕ್ರಿಕೆಟ್ ಅಂಗಳದಲ್ಲಿನ ನಿರಾಸೆಯನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದ್ದನ್ನು ದಶಕಗಳ ನಂತರ ನೋಡಿದಾಗ ಇದೇನು ಮೂರ್ಖತನವೆಂದು ಅನಿಸಿದರೂ ಅಚ್ಚರಿಯಿಲ್ಲ. ದೇಶದ ಎರಡು ವಿಭಿನ್ನವಾದ ಘಟನೆಗಳನ್ನು ಒಂದೇ ನೋಟದಲ್ಲಿ ನೋಡಿದ್ದು ವಿಚಿತ್ರವೆಂದು ಕೂಡ ಅನಿಸುತ್ತದೆ.

ವ್ಯಂಗ್ಯಚಿತ್ರ ಪ್ರದರ್ಶನ ಮುಗಿದ ಮರುದಿನ ಅಂದರೆ ಫೆಬ್ರುವರಿ 27ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಬೇಕಿತ್ತು. ಭಾರತ ತಂಡವು ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯ ಆಡುವುದನ್ನು ನೋಡಲು. ಸಹಜವಾಗಿಯೇ ನಾನೂ ಭಾರತ ಗೆಲ್ಲಬೇಕು ಎಂದೇ ಬಯಸಬೇಕಾಗಿತ್ತು.

ಆದರೆ ಹಿಂದಿನ ದಿನ ಅಬು ಅವರ ವ್ಯಂಗ್ಯಚಿತ್ರಗಳನ್ನು ನೋಡಿದ್ದರಿಂದ ನಾನೂ ಗೊಂದಲದ ಸುಳಿಯಲ್ಲಿ ಸಿಲುಕಿದ್ದೆ. ಆಗ ನನ್ನ ಮಿತ್ರರೊಬ್ಬರ ಮುಂದೆ ವ್ಯಂಗ್ಯಚಿತ್ರ ಪ್ರದರ್ಶನದ ಬಗ್ಗೆ ಹೇಳಿದೆ. ಅದೇ ವೇಳೆ ಕ್ರೀಡಾ ದೇಶಪ್ರೇಮ ಎನ್ನುವ ಅಂಶದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಇಂಥ ಮನಸ್ಥಿತಿಯ ನಡುವೆ ನಾನು ನಾಳೆ ಇಂಗ್ಲೆಂಡ್ಅನ್ನು ಬೆಂಬಲಿಸಬೇಕೆ ಎನ್ನುವ ಯೋಚನೆಯೂ ಮೊಳಕೆಯೊಡೆಯಿತು.

ಬಾಲ್ಯದಲ್ಲಿ ನಾನು ‘ಕ್ರಿಕೆಟ್ ರಾಷ್ಟ್ರೀಯ ಮನೋಭಾವ’ ಬೆಳೆಸಿಕೊಂಡಿದ್ದೆ. ಆದರೆ ಕಾಲ ಉರುಳಿದಂತೆ ಕ್ರಿಕೆಟ್ ಅಭಿಮಾನದ ನನ್ನ ಭಾವನೆಗಳೂ ಬದಲಾದವು. 1980ರ ದಶಕದಲ್ಲಿನ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಬಗ್ಗೆ ಅಪಾರ ಗೌರವ ಎಂದು ಒಪ್ಪಿಕೊಳ್ಳುತ್ತೇನೆ.

ವಿಶೇಷವಾಗಿ ವಿವಿಯನ್ ರಿಚರ್ಡ್ಸ್, ಗೋರ್ಡಾನ್ ಗ್ರಿನಿಜ್ ಮತ್ತು ಮಾಲ್ಕಮ್ ಮಾರ್ಷಲ್ ಮೇಲಿನ ಅಭಿಮಾನ ಹೆಚ್ಚು. ನಂತರದ ದಶಕಗಳಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಕಾಣಿಸಿಕೊಂಡ ಕ್ರಿಕೆಟಿಗರ ಮೇಲೆ ಪ್ರೀತಿ. ಶೇನ್ ವಾರ್ನ್, ಸ್ಟೀವ್ ವಾ ಹಾಗೂ ಗ್ಲೇನ್ ಮೆಕ್ಗ್ರಾ ನನ್ನ ನೆಚ್ಚಿನವರು. ಈ ಅಭಿಮಾನ ಏನೇ ಇರಲಿ; ಈಗಲೂ ನಾನು ಪ್ರತಿಯೊಂದು ಬಾರಿ ಭಾರತವೇ ಗೆಲ್ಲಬೇಕೆಂದು ಬಯಸುತ್ತೇನೆ.

ಇಂಥ ಯೋಚನೆ ಇದ್ದರೂ, ಭಾರತ ಸೋಲನುಭವಿಸಿದರೆ ಬೇಸರಗೊಳ್ಳುವುದಿಲ್ಲ. ಅದರಲ್ಲಿಯೂ ಉತ್ತಮ ಆಟವಾಡುವ ತಂಡದ ಎದುರು ಪರಾಭವಗೊಂಡರೆ ನೋವೆನಿಸದು. ಆದರೆ ಪಾಕಿಸ್ತಾನ ಹಾಗೂ ಭಾರತ ಎದುರಾದಾಗ ಯೋಚನೆಯೇ ಬೇರೆ. ಕ್ರಿಕೆಟ್ ಟೆಲಿವಿಷನ್ ನೇರ ಪ್ರಸಾರ ಯುಗಾರಂಭವಾದ ನಂತರದ ಕಾಲದಲ್ಲಿ ಒಂದು ಪಂದ್ಯ ಅತ್ಯಂತ ಸ್ಮರಣೀಯ.

1996ರಲ್ಲಿ ನಡೆದಿದ್ದ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ ನೆನಪಿನ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ವಿಶೇಷವೆಂದರೆ ಆ ಪಂದ್ಯ ನಡೆದಿದ್ದು ಬೆಂಗಳೂರಿನಲ್ಲಿ. ಆಗ ನಾನೂ ಕ್ರೀಡಾಂಗಣದಲ್ಲಿದ್ದೆ. ನಾನಿದ್ದ ಸ್ಟ್ಯಾಂಡ್ನಲ್ಲಿ (ಪೂರ್ಣ ಕ್ರೀಡಾಂಗಣದಲ್ಲಿ) ಬಹುಶಃ ನಾನೊಬ್ಬನೇ ಜಾವೇದ್ ಮಿಯಾಂದಾದ್ಗಾಗಿ ಕೂಗುಹಾಕಿದ್ದು. ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಾಗಿ ಅವರು ಕೊನೆಯ ಬಾರಿಗೆ ಹೊರ ನಡೆದಾಗ ನನ್ನ ಭಾರಿ ಬೆಂಬಲದ ಚಪ್ಪಾಳೆ.

ಅದೇ ಕ್ಷಣಕ್ಕೆ ಭಾರತ ತಂಡದ ಆಟಗಾರರಿಗಾಗಿ ಮನನೊಂದು ಸ್ಪಂದಿಸಿತು. ಅವರ ಮೇಲಿನ ಹೊರೆ ಹಾಗೂ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ. ದೇಶದ ಹೆಮ್ಮೆಗಾಗಿ ಗೆಲ್ಲಲೇಬೇಕು ಎನ್ನುವ ಒತ್ತಾಸೆ. ಆ ಪಂದ್ಯದ ನಂತರ ಕ್ರೀಡಾಂಗಣದ ಹೊರಗೆ ನಡೆದ ಘಟನೆಗಳು ಕರಾಳ ನೆನಪು. ಪಾಕ್ ಎದುರು ಭಾರತ ಏಕದಿನ ಪಂದ್ಯವನ್ನು ಸೋತಾಗ ಕೆಲವು ಖ್ಯಾತ ಕ್ರಿಕೆಟಿಗರ (ಅವರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು) ಮನೆಯ ಮೇಲೆ ಅಸಮಾಧಾನಗೊಂಡ ಕ್ರಿಕೆಟ್ ಪ್ರೇಮಿಗಳು ಕಲ್ಲೆಸೆದರು.

ಹಿತವೆನ್ನಿಸುವ ಕ್ರಿಕೆಟ್ ಪ್ರೇಮಿಗಳ ವರ್ತನೆಯನ್ನೂ ಕಂಡಿದ್ದೇನೆ. 1990ರ ದಶಕದಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡಗಳು ಟೆಸ್ಟ್ ಪಂದ್ಯದಲ್ಲಿ ಎದುರಾದವು. ಭಾರತವನ್ನು ಪಾಕ್ ಸೋಲಿಸಿದ ಆ ಪಂದ್ಯಕ್ಕೆ ನಾನೂ ಸಾಕ್ಷಿಯಾಗಿದ್ದೆ. ಆದರೆ ಆಗ ಸಂಭಾವಿತ ಪ್ರೇಕ್ಷಕರು ಎದುರಾಳಿಗಳ ಆಟವನ್ನು ಮೆಚ್ಚಿಕೊಂಡು ಚಪ್ಪಾಳೆ ತಟ್ಟಿದರು. ಅಲ್ಲಿನ ವಿಶಿಷ್ಟ ಸಂವೇದನೆ ಕ್ರಿಕೆಟ್-ರಾಜಕೀಯ ಮತ್ತು ಆರ್ಥಿಕ ವಿಷಯಗಳ ಚೌಕಟ್ಟು ಮೀರಿದ್ದು.

ಎಲ್ಲ ಸಂಕಷ್ಟಗಳ ನಡುವೆ ಇಂಜಮಾಮ್ ಉಲ್ ಹಕ್ ಪಡೆಯು ತನ್ನ ದೇಶಕ್ಕಾಗಿ ಮಾಡುತ್ತಿರುವ ಒಳಿತಿನ ಬಗೆಗಿನ ಯೋಚನೆಯದು. ಅದೇನೇ ಇರಲಿ, ಫೆಬ್ರುವರಿ 26- 27ರಂದು ನನ್ನ ಮನದಲ್ಲಿ ಹಲವಾರು ಯೋಚನೆಗಳ ಸುಳಿದಾಟ. ಒಂದೆಡೆ ಅಬು ಅವರ ವ್ಯಂಗ್ಯಚಿತ್ರಗಳು ಹುಟ್ಟಿಸಿದ ಚಿಂತನೆ. ಇನ್ನೊಂದೆಡೆ ಭಾರತ ಕ್ರಿಕೆಟ್ ತಂಡವು ಎಂದೂ ಸೋಲಬಾರದೆಂದು ಹಿಂದಿನಿಂದ ಬೆಳೆಸಿಕೊಂಡ ಮನೋಭಾವ.

ಇವೆರಡರ ನಡುವೆ ಸಂಘರ್ಷ. ನನಗೆ ನೇವಿಲ್ಲೆ ಕಾರ್ಡಸ್ ಲೇಖನಿಯಿಂದ ಹೊಮ್ಮಿದ ಸಾಲುಗಳು ನೆನಪಿನಲ್ಲಿ ಸುಳಿದಾಡಿದವು. ಇಂಗ್ಲೆಂಡ್ ಗೆಲುವಿನ ಆಶಯವಿದ್ದರೂ ಬಾಲಕನೊಬ್ಬ ಆಸ್ಟ್ರೇಲಿಯಾದ ವಿಕ್ಟರ್ ಟ್ರಂಪರ್ ಬ್ಯಾಟಿಂಗ್ ಶಕ್ತಿಯನ್ನು ಇಷ್ಟಪಟ್ಟ ಎನ್ನುವುದು ನೆನಪಾಯಿತು.

ಪ್ರತಿಯೊಂದು ಆ್ಯಷಸ್ ಟೆಸ್ಟ್ಗೆ ಮುನ್ನ ಬಾಲಕ ದೇವರನ್ನು ಕೇಳಿಕೊಳ್ಳುತ್ತಿದ್ದ; ನನ್ನ ಹೀರೋ ವಿಕ್ಟರ್ ಶತಕ ಗಳಿಸಲಿ, ಆದರೆ ಆಸ್ಟ್ರೇಲಿಯಾ 127ಕ್ಕೆ ಆಲ್ಔಟ್ ಆಗಲಿ. ಕಾರ್ಡಸ್ ಬರಹದ ನೆನಪಿನೊಂದಿಗೆ ನನ್ನ ಗೊಂದಲಕ್ಕೂ ಪರಿಹಾರ ಸಿಕ್ಕಂತಾಯಿತು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಚಿನ್ ತೆಂಡೂಲ್ಕರ್ ಶತಕ ಗಳಿಸಬೇಕು, ಆದರೆ ಇಂಗ್ಲೆಂಡ್ ಗೆಲ್ಲಬೇಕು ಎಂದು ಅಂದುಕೊಂಡೆ.

ಆದರೆ ಪಂದ್ಯವು ಟೈ ಆಗುವ ಮೂಲಕ ಇತಿಹಾಸದ ಪುಟ ಸೇರಿತು. ನಾನು ಭಾರತ ಸೋಲಬೇಕೆಂದು ಬಯಸುತ್ತೇನೆ ಎಂದಲ್ಲ. ಆದರೂ ಆ ಪಂದ್ಯದಲ್ಲಿ ನಾನಂದುಕೊಂಡಿದ್ದೊಂದು ನಡೆಯಿತು. ಸಚಿನ್ ಅದ್ಭುತವಾದ ರೀತಿಯಲ್ಲಿ ಶತಕ ಗಳಿಸಿದರು. ತನ್ನ ಜೊತೆಗಾರ ವೀರೇಂದ್ರ ಸೆಹ್ವಾಗ್ ಔಟಾದ ನಂತರವೂ ಸಹನೆಯಿಂದ ಇನಿಂಗ್ಸ್ ಕಟ್ಟಿದರು. ಈ ಶತಕವನ್ನು ನಾನು ದೀರ್ಘ ಕಾಲ ನೆನಪಿಸಿಕೊಳ್ಳುತ್ತೇನೆ.

ಭಾರತದ ದೊಡ್ಡ ಮೊತ್ತಕ್ಕೆ ಪ್ರತಿಯಾಗಿ ಎದುರಾಳಿ ಪಡೆಯ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ರದು ಕೂಡ ಸೊಗಸಾದ ಶತಕ. ತೆಂಡೂಲ್ಕರ್ ಅವರಂತೆಯೇ ಅಪ್ಪಟ ಬ್ಯಾಟ್ಸ್ಮನ್ನಂತೆ ಡ್ರೈವ್, ಕಟ್, ಪುಲ್ ಹಾಗೂ ಗ್ಲೈಡ್ಸ್ಗಳಿಂದ ಇನಿಂಗ್ಸ್ ಅಲಂಕರಿಸಿದರು.ಬ್ಯಾಟಿಂಗ್ ಅಬ್ಬರವಿದ್ದರೂ ವೇಗದ ಬೌಲಿಂಗ್ ಗುಣಮಟ್ಟ ಉನ್ನತವಾಗಿತ್ತು. ಟಿಮ್ ಬ್ರೆಸ್ನನ್ ಅವರು ಸೆಹ್ವಾಗ್ಗೆ ಬೇಗ ಕಡಿವಾಣ ಹಾಕಲು ಆಗಲಿಲ್ಲ. ಆದರೆ ನಂತರ ಕೆಳ ಮಧ್ಯಮ ಕ್ರಮಾಂಕವನ್ನು ನಿಯಂತ್ರಿಸಿದರು. ಆ ಪಂದ್ಯದಲ್ಲಿ ಭಾರತವು 338ರ ಬದಲಿಗೆ 370 ಇಲ್ಲವೆ 380 ರನ್ಗಳನ್ನು ಗಳಿಸಿ ಸುಲಭವಾಗಿ ಜಯ ಸಾಧಿಸಬಹುದಿತ್ತು.

ಜಹೀರ್ ಖಾನ್ ವಿಭಿನ್ನ ರೀತಿಯಲ್ಲಿ ತಮ್ಮ ಮೊದಲ ಸ್ಪೆಲ್ನಲ್ಲಿ ಬೌಲಿಂಗ್ ಮಾಡಿದರು. ಆದರೆ ಇಂಗ್ಲೆಂಡ್ ಗೆಲುವಿನ ಕಡೆಗೆ ನಡೆದಿದ್ದಾಗ ಮತ್ತೆ ದಾಳಿ ನಡೆಸಿದ ಜಹೀರ್ ಚುರುಕಾಗಿ ಮೂರು ವಿಕೆಟ್ ಕೆಡವಿದರು. ಈ ಮೂರು ವಿಕೆಟ್ಗಳಲ್ಲಿ ಆ್ಯಂಡ್ರ್ಯೂ ಸ್ಟ್ರಾಸ್ ಅವರು ಲೆಗ್ ಬಿಫೋರ್ ಬಲೆಗೆ ಬಿದ್ದಿದ್ದೂ ಒಂದು. ಅದು ಪಂದ್ಯದ ಅತ್ಯಂತ ಶ್ರೇಷ್ಠ ಎಸೆತ. ಒಳಮುಖವಾಗಿ ಚೆಂಡು ತಿರುವು ಪಡೆದ ಅದ್ಭುತ ಯಾರ್ಕರ್.

ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್. ಐದು ದಿನಗಳ ಕಾಲ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲ. ಇದು ಬ್ಯಾಟಿಂಗ್ ಹಾಗೂ ಬೌಲಿಂಗ್ ಸತ್ವ ಪರೀಕ್ಷೆ ಮಾಡುತ್ತದೆ. ಟ್ವೆಂಟಿ-20 ಎನ್ನುವುದು ಕ್ರಿಕೆಟ್ನ ಅಸಹ್ಯಕರ ರೂಪ. ಏಕೆಂದರೆ ಬೌಲರ್ಗೆ ನಾಲ್ಕು ಓವರುಗಳ ಅವಕಾಶ ಮಾತ್ರ. ಆದರೆ 50-50 ಕ್ರಿಕೆಟ್ ಬ್ಯಾಟಿಂಗ್ ಪ್ರಾಧಾನ್ಯವಾಗಿದೆ.

ಆದರೂ ಇಲ್ಲಿ ಇನಿಂಗ್ಸ್ ಕಟ್ಟುವಂಥ ಸೊಗಸು. ಚುಟುಕು ಕ್ರಿಕೆಟ್ನಲ್ಲಿನಂತೆ 24 ಎಸೆತಗಳ ಬದಲು ಬೌಲರ್ಗೆ ಏಕದಿನ ಕ್ರಿಕೆಟ್ನಲ್ಲಿ 60 ಎಸೆತಗಳ ಅವಕಾಶ ಇರುತ್ತದೆ. ಆದ್ದರಿಂದ ಇದರಲ್ಲಿ ಬೌಲರ್ ವಿವಿಧ ಹಂತದಲ್ಲಿ ಚೆಂಡನ್ನು ಎಸೆಯುವ ರೀತಿಯಲ್ಲಿ ವ್ಯತ್ಯಾಸ ಮಾಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು.

ವಿಶ್ವಕಪ್ನ ಮೊದಲ ಕೆಲವು ಲೀಗ್ ಪಂದ್ಯಗಳು ಕೂಡ ಏಕದಿನ ಕ್ರಿಕೆಟ್ ಆಕರ್ಷಕ ಹಾಗೂ ಅರ್ಥಪೂರ್ಣ ಎನ್ನುವುದನ್ನು ಸಾಬೀತುಪಡಿಸಿವೆ. ಶಾಹಿದ್ ಅಫ್ರಿದಿ ಅವರು ಶ್ರೀಲಂಕಾ ಹಾಗೂ ಕೆನಡಾ ವಿರುದ್ಧದ ಪಂದ್ಯದಲ್ಲಿ ಜಯಕ್ಕೆ ಕಾರಣವಾಗುವಂಥ ಬೌಲಿಂಗ್ ಮಾಡಿದ್ದು. ಕೆವಿನ್ ಓಬ್ರಿಯನ್ ಅವರು ಇಂಗ್ಲೆಂಡ್ ಎದುರು ಐರ್ಲೆಂಡ್ ಗೆಲುವು ಪಡೆಯುವುದಕ್ಕೆ ಕಾರಣವಾಗುವಂಥ ಸೊಗಸಾದ ಇನಿಂಗ್ಸ್ ಕಟ್ಟಿದ್ದು. ಆದರೆ ಇಂಥ ಆಕರ್ಷಣೆಯನ್ನು ಟ್ವೆಂಟಿ-20ಯಲ್ಲಿ ಕಾಣಲು ಸಾಧ್ಯವಿಲ್ಲ.

ಏಕದಿನ ತನ್ನ ದೊಡ್ಡ ಹಾಗೂ ಸಣ್ಣ ಪ್ರಕಾರದ ಕ್ರಿಕೆಟ್ ಸಹೋದರರಿಗಿಂತ ಆಕರ್ಷಕ ಎನ್ನುವುದು ಈ ಬಾರಿಯ ವಿಶ್ವಕಪ್ನಲ್ಲಿ ಇಲ್ಲಿಯವರೆಗೆ ನಡೆದ ಪಂದ್ಯಗಳಿಂದ ಸ್ಪಷ್ಟವಾಗಿದೆ. ಈ ಚರ್ಚೆ ಏನೇ ಇರಲಿ; ಮತ್ತೆ ಮೂಲ ಯೋಚನೆಗೆ ಬಂದು ವಿಶ್ವಕಪ್ ಗೆಲ್ಲುವುದು ಯಾರು? ಎನ್ನುವ ಸವಾಲನ್ನು ಮನದಲ್ಲಿ ಕೆಣಕಿದ್ದೇನೆ.

ಈಗ ಎರಡು ಅಂಶಗಳು ನನ್ನನ್ನು ಉತ್ತೇಜಿಸುತ್ತಿವೆ. ಒಂದು ಅಬು ಅಬ್ರಹಾಮ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ಇನ್ನೊಂದು ಬೆಂಗಳೂರಿನಲ್ಲಿ ನಡೆದ ಪಂದ್ಯ. ಈ ಎಲ್ಲ ಚಿಂತನೆಯ ನಡುವೆ; ಭಾರತ ತಂಡವು ಮುಂಬೈನಲ್ಲಿ ನಡೆಯುವ ಫೈನಲ್ ತಲುಪುತ್ತದಾ, ಪಾಕಿಸ್ತಾನದ ವಿರುದ್ಧ ಮುಖಾಮುಖಿ ಸಾಧ್ಯವಾಗುತ್ತದಾ, ಸಚಿನ್ ತೆಂಡೂಲ್ಕರ್ ತಮ್ಮೂರಿನಲ್ಲಿ ಶತಕ ಗಳಿಸುತ್ತಾರಾ, ಅವರಾಡುವ ತಂಡ ಗೆಲ್ಲುತ್ತದಾ-ಸೋಲುತ್ತದಾ, ಹೀಗೆ ಹಲವು ಯೋಚನೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.