ಇದೆಲ್ಲ ಇಷ್ಟು ಬೇಗ ಶುರುವಾಗುತ್ತದೆ ಎಂದು ಅನಿಸಿರಲಿಲ್ಲ. ಅವರೆಲ್ಲ ಮೊನ್ನೆ ಮೊನ್ನೆಯಷ್ಟೇ ಜಗಳವಾಡಿದ್ದರು. ಆರೋಪ ಪ್ರತ್ಯಾರೋಪ ಮಾಡಿದ್ದರು. ಕಣದಲ್ಲಿ ಎದುರು ಬದುರು ನಿಂತು ಹೋರಾಡಿದ್ದರು. ದಾಯಾದಿಗಳ ನಡುವೆ ಏನಾಗುತ್ತದೆಯೋ ಅದೇ ಇವರ ನಡುವೆಯೂ ಆಗಿತ್ತು. ಅಣ್ಣ ತಮ್ಮಂದಿರು ಜಗಳ ಆಡಿದರೆ ಮೂರನೆಯವರಿಗೆ ಲಾಭ ಆಗುತ್ತದೆ ಎಂದು ಯಾರು ಎಷ್ಟು ಹೇಳಿದರೂ ಅವರಿಗೆ ಅರ್ಥ ಆಗಿರಲಿಲ್ಲ.

ಕೌರವ ಪಾಂಡವರು ಕಾದಾಡಿ ಐದು ಸಾವಿರ ವರ್ಷಗಳೇ ಆದುವು. ಹಾಗೆಂದು ಯಾರಾದರೂ ದಾಯಾದಿಗಳು ಮತ್ತೆ ಜಗಳ ಮಾಡುವುದನ್ನು ಬಿಟ್ಟರೇ? ತಾವಿಬ್ಬರು ಕಾದಾಡಿದ್ದರಿಂದ ಮೂರನೆಯವರಿಗೆ ಲಾಭ ಆಯಿತು ಎಂದು ಈಗ ಒಬ್ಬರಿಗೆ ಗೊತ್ತಾಗಿದೆ. ಇನ್ನೊಬ್ಬರಿಗೆ ಹೀಗೆಯೇ ಆಗುವುದು ಬೇಕಿತ್ತು! ತನ್ನನ್ನು ಮನೆಯಿಂದ ಹೊರಗೆ ಹಾಕಿದರೆ ಆಗುವ ಪರಿಣಾಮವೇನು ಎಂದು ಅವರಿಗೆ ತೋರಿಸಿಕೊಡಬೇಕಿತ್ತು. ಈಗ ತೋರಿಸಿಕೊಟ್ಟಾಯಿತು. ಜತೆಗೆ ತನ್ನ ಶಕ್ತಿಯೇನು, ಎಂದೂ ಗೊತ್ತಾಯಿತು. ಈ ಶಕ್ತಿಯನ್ನು ಹೇಗೂ ಅರ್ಥ ಮಾಡಿಕೊಳ್ಳಬಹುದು.

ಈಗ ಎರಡೂ ಬಣಗಳ ಮುಂದೆ ಪ್ರಶ್ನೆಗಳು ಎದ್ದು ಕುಳಿತಿವೆ. ಮತ್ತೆ ಒಂದಾಗಬೇಕೇ? ಆಗಬೇಕಾದರೆ ಹೇಗೆ? ಈ ಪ್ರಶ್ನೆಗಳು ಇಷ್ಟು ಬೇಗ ಏಳುತ್ತಿರಲಿಲ್ಲ. ಇನ್ನು ಹನ್ನೆರಡು ತಿಂಗಳಲ್ಲಿ ಬರಬೇಕಿರುವ ಲೋಕಸಭೆ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಬಂದು ಬಿಡಬಹುದು ಎಂದು ಎಲ್ಲರಿಗೂ ಅನಿಸತೊಡಗಿದೆ. ಕೇಂದ್ರ ಸರ್ಕಾರದ ನಡೆಗಳು ಅಂಥ ಸೂಚನೆ ಕೊಡತೊಡಗಿವೆ.

ಮೊನ್ನೆ ಮುಗಿದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾರ ಶಕ್ತಿ ಎಷ್ಟು ಎಂದು ಎಲ್ಲರಿಗೂ ಗೊತ್ತಾಗಿದೆ. ಚುನಾವಣೆಗಿಂತ ಕೊಂಚ ಮುಂಚೆ ಹುಟ್ಟಿಕೊಂಡು, ಕಾರ್ಯಕರ್ತರ ಬೆಂಬಲ ಏನೇನೂ ಇಲ್ಲದ ಕರ್ನಾಟಕ ಜನತಾ ಪಕ್ಷ ಶೇಕಡಾ ಹತ್ತರಷ್ಟು ಮತ ಗಳಿಸಿದೆ. ಅರುವತ್ತು ವರ್ಷದ ಇತಿಹಾಸ ಇರುವ ಬಿಜೆಪಿಗೆ ಶೇಕಡಾ ಇಪ್ಪತ್ತರಷ್ಟು ಮತಗಳೂ ಸಿಕ್ಕಿಲ್ಲ. ಹಾಗೆಂದು ಕರ್ನಾಟಕ ಜನತಾ ಪಕ್ಷ ಬಿಜೆಪಿಯ ಮತಗಳನ್ನು ಕಿತ್ತುಕೊಂಡುದು ಮಾತ್ರ ಮರುಮೈತ್ರಿಗೆ ಧಾವಂತ ತಂದಿಲ್ಲ. ಚುನಾವಣೆ ಕಾಲದಲ್ಲಿ ನಡೆದ ವಿದ್ಯಮಾನಗಳೂ ಅದಕ್ಕೆ ಕಾರಣವಾದಂತಿದೆ.

ಚುನಾವಣೆಗಿಂತ ಮುಂಚೆಯೇ ಬಿ.ಎಸ್.ಯಡಿಯೂರಪ್ಪನವರ ಜಾಗದಲ್ಲಿ ಅದೇ ಸಮುದಾಯದ ಜಗದೀಶ ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಪ್ರತಿಷ್ಠಾಪನೆ ಮಾಡಿದರೂ ನಿಜವಾದ ನಾಯಕನ ಸ್ಥಾನ ಖಾಲಿಯೇ ಉಳಿದಿತ್ತು. ಕೆಲವರು ಮುಖಂಡರೇನೋ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು.

ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಸಮರ ಕಾಲದಲ್ಲಿ ಬೇಕಾದ ಸಮರ್ಥ ಸಾರಥಿಯೇ ಇಲ್ಲದೆ ಅನೇಕ ಅಭ್ಯರ್ಥಿಗಳಿಗೆ ಅನಾಥ ಪ್ರಜ್ಞೆ ಕಾಡಿತು. ತಮ್ಮನ್ನು ಕೇಳುವವರು ಇಲ್ಲ, ಹಣ ಕೊಡುವವರು ಇಲ್ಲ ಎಂದು ಅವರಿಗೆ ಅನಿಸಿತು. ಸರ್ಕಾರ ಇದ್ದಾಗ ಹಣ ಮಾಡಿಕೊಂಡಿದ್ದ ಮಂತ್ರಿಗಳು ತಮ್ಮ ಕ್ಷೇತ್ರವನ್ನು ಮಾತ್ರ ತಾವು ನೋಡಿಕೊಂಡರು. ಚುನಾವಣೆ ರಣತಂತ್ರ ರೂಪಿಸಲು ಬಂದಿದ್ದ ಅರುಣ್ ಜೇಟ್ಲಿ ಈ `ದೊಡ್ಡ ದೊಡ್ಡ ನಾಯಕರ' ಸಣ್ಣತನ ನೋಡಿ `ಹಾಳಾಗಿ ಹೋಗಿ' ಎಂದು ಹೇಳಿ ದೆಹಲಿಗೆ ಹೊರಟು ಹೋದರು. ಅವರು ಅಂದುಕೊಂಡಂತೆಯೇ ಹಾಳಾಗಿ ಹೋಯಿತು.

`ಯಡಿಯೂರಪ್ಪ ಪಕ್ಷದಲ್ಲಿ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ' ಎಂದು ಹಲವರಿಗಾದರೂ ಅನಿಸುತ್ತಿದೆ. ಮೊನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅದೇ ಮಾತು ಕೇಳಿಬಂದಿದೆ. ಬಹಿರಂಗವಾಗಿಯೇ ಈ ಮಾತು ಆಡಿದ ಶಾಸಕ ಗೋ.ಮಧುಸೂದನ್ ಅವರಿಗೆ ಪಕ್ಷದ ಅಧ್ಯಕ್ಷರು ಬಾಯಿ ಮುಚ್ಚುವಂತೆ ಫರ್ಮಾನು ಹೊರಡಿಸಿದ್ದಾರೆ. ಹಾಗೆ ಬಾಯಿ ಮುಚ್ಚಿಸುವುದು ಅಷ್ಟು ಸುಲಭ ಎಂದು ಅನಿಸುವುದಿಲ್ಲ. ಯಾರೋ ಒಬ್ಬಿಬ್ಬರು ಹೀಗೆ ಕರೆದುಬಿಟ್ಟರೆ ಯಡಿಯೂರಪ್ಪ ಬಂದು ಬಿಡುತ್ತಾರೆ ಎಂದೂ ಅಲ್ಲ. ಬಿಜೆಪಿಗೆ ಬರುವ ತರಾತುರಿ ಅವರಿಗೇನೂ ಇದ್ದಂತೆ ಇಲ್ಲ.

ಶೇಕಡಾ ಹತ್ತರಷ್ಟು ಮತ ಇಟ್ಟುಕೊಂಡಿರುವ ಅವರ ಮುಂದೆ ಅನೇಕ ಬಾಗಿಲುಗಳು ತೆರೆದುಕೊಂಡಿರುವಂತಿದೆ. ವಿಧಾನಸಭೆಯಲ್ಲಿ ಪಕ್ಕದಲ್ಲಿಯೇ ಕುಳಿತುಕೊಳ್ಳುವ, ಒಂದು ಕಾಲದಲ್ಲಿ ತಮ್ಮದೇ ಪಕ್ಷದ ಜಗದೀಶ ಶೆಟ್ಟರ್ ಅವರಿಗಿಂತ ಒಂದು ಸಾರಿ ಕೈ ಕೊಟ್ಟಿದ್ದ ಎಚ್.ಡಿ.ಕುಮಾರಸ್ವಾಮಿ ಜತೆಗೇ ಅವರು ಹೆಚ್ಚು ಸಲುಗೆಯಿಂದ ನಡೆದುಕೊಳ್ಳುತ್ತಿರುವಂತೆ ಕಾಣುತ್ತದೆ. ಅದು ಹೊಸ ಸಂಬಂಧ ಕುದುರುವ ಲಕ್ಷಣ ಇರಬಹುದು ಅಥವಾ ಹಳೆಯ ಸಂಬಂಧ ಚಿಗುರುವ ಲಕ್ಷಣವೂ ಇರಬಹುದು; ಇಲ್ಲವೇ ದಾಯಾದಿ ಬಿಜೆಪಿಯವರು ಹೊಟ್ಟೆ ಉರಿದುಕೊಳ್ಳಲಿ ಎಂದೂ ಇರಬಹುದು! ರಾಜಕೀಯದಲ್ಲಿ ಒಂದೊಂದು ನಡೆಯೂ ಒಂದೊಂದು ಅರ್ಥ ಹುಟ್ಟಿಸುವ ಕಾಲ ಇದು. ಅರ್ಥ ಇರುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ. ಸುದ್ದಿ ಹಸಿವಿನ ಕಾಲದಲ್ಲಿ ಅರ್ಥ ಹಚ್ಚುವವರು ಬೇಕಾದಷ್ಟು ಮಂದಿ ಇರುತ್ತಾರೆ.

ಯಡಿಯೂರಪ್ಪನವರು ಶುಕ್ರವಾರ ವಿಧಾನಸಭೆಯಲ್ಲಿ ತೃತೀಯ ರಂಗದ ಮಾತು ಆಡಿದ್ದಾರೆ. ಎಚ್.ಡಿ.ದೇವೇಗೌಡರೂ ತೃತೀಯ ರಂಗದ ಮಾತು ಆಡುವವರೇ. ಅದೇ ತೃತೀಯ ರಂಗಕ್ಕೆ ಸೇರಿದ ದೂರದ ಉತ್ತರಪ್ರದೇಶದ ಮುಲಾಯಂ ಸಿಂಗ್ ಮತ್ತು ಪಕ್ಕದ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರೂ ಯಡಿಯೂರಪ್ಪ ಜತೆಗೆ ಸಂಪರ್ಕದಲ್ಲಿ ಇದ್ದಂತೆ ಕಾಣುತ್ತದೆ. ಅವರಿಂದ ಯಡಿಯೂರಪ್ಪನವರಿಗೆ ಮೂರು ಕಾಸಿನ ಪ್ರಯೋಜನ ಆಗದೇ ಇರಬಹುದು. ಆದರೆ, ರಾಷ್ಟ್ರೀಯ ನಾಯಕರ ಜತೆಗೆ ತಾವೂ ಹೆಗಲೆಣೆಯಾಗಿ ನಿಲ್ಲುವ ಅವಕಾಶ ಅವರಿಗೆ ಅನಾಯಾಸವಾಗಿ ಒದಗಿ ಬರುತ್ತದೆ.

ಯಾರ ಜತೆಗೆ ಸೇರಿದರೂ ತಮ್ಮ ಶೇಕಡಾ ಹತ್ತರಷ್ಟು ಮತಗಳು ತಮ್ಮ ಶಕ್ತಿಯ ಜತೆಗೆ ಅವರ ಶಕ್ತಿಯನ್ನೂ ಹೆಚ್ಚಿಸುತ್ತವೆ ಎಂದು ಯಡಿಯೂರಪ್ಪ ಲೆಕ್ಕ ಹಾಕುತ್ತಿರಬಹುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ ಇಪ್ಪತ್ತರಷ್ಟು ಮತ ಗಳಿಸಿದ ಜೆ.ಡಿ (ಎಸ್) ಜತೆಗೆ ಮೈತ್ರಿ ಸಾಧ್ಯವಾದರೆ ಬಿಜೆಪಿಯ ಮಗ್ಗುಲನ್ನು ಇನ್ನಷ್ಟು ಮುರಿಯಬಹುದು ಎಂದೂ ಅವರು ಅಂದುಕೊಳ್ಳುತ್ತಿರಬಹುದು.

ಶೇಕಡಾ ಹತ್ತರಷ್ಟು ಮತಗಳ ಕೊರತೆ ಬಿಜೆಪಿಯನ್ನು ಮಾತ್ರವಲ್ಲ, ಜೆ.ಡಿ (ಎಸ್) ಅನ್ನೂ ಕಾಡುತ್ತಿದೆ. ಏನು ಮಾಡಿದರೂ ಏಕಾಂಗಿಯಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿಯವರಿಗೆ ಈಗ ಖಚಿತವಾಗಿದೆ. ಎಷ್ಟು ಕಾಲ ಎಂದು ಅವರಾದರೂ ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುತ್ತಾರೆ? ಅವರಿಗೂ ಅಧಿಕಾರ ಬೇಕಲ್ಲ? ಹಿಂದೆ ರಾಮಕೃಷ್ಣ ಹೆಗಡೆಯವರು ಮತ್ತು ಎಚ್.ಡಿ.ದೇವೇಗೌಡರು ಜತೆಯಾಗಿ ಹೋದಾಗಲೆಲ್ಲ ಅವರ ಪಕ್ಷ ಅಧಿಕಾರಕ್ಕೆ ಬಂದಿದೆ. ಹೆಗಡೆಯವರು ಇರುವ ಜಾಗದಲ್ಲಿಯೇ ಈಗ ಯಡಿಯೂರಪ್ಪ ಇದ್ದಾರೆ.

ಅಂದರೆ ಹೆಗಡೆಯವರು ಒಂದು ಕಾಲದಲ್ಲಿ ಹೇಗೆ ಪ್ರಶ್ನಾತೀತ ಲಿಂಗಾಯತ ನಾಯಕರಾಗಿದ್ದರೋ ಈಗ ಹಾಗೆ ಯಡಿಯೂರಪ್ಪ ಇದ್ದಾರೆ. ಹಾಗೆಂದು ಯಡಿಯೂರಪ್ಪ ಜತೆಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಹೆಜ್ಜೆ ಹಾಕುತ್ತಾರೆಯೇ? ಹಾಕಲು ಹೆಚ್ಚು ಅಡಚಣೆಗಳು ಇದ್ದಂತೆ ಇಲ್ಲ; ವಚನಭ್ರಷ್ಟತೆಯ ಕಹಿ ನೆನಪು ಒಂದನ್ನು ಬಿಟ್ಟರೆ! ಈಗ ಯಡಿಯೂರಪ್ಪ `ಕೋಮುವಾದಿ' ಬಿಜೆಪಿಯನ್ನು ಬಿಟ್ಟು ಬಂದಿದ್ದಾರೆ. ಈ ದೇಶದಲ್ಲಿ `ಭ್ರಷ್ಟಾಚಾರ' ಒಂದು ವಿಷಯವಲ್ಲ ಎಂದು ದೇವೇಗೌಡರು ಎಂದೋ ಹೇಳಿದ್ದಾರೆ. ಮೊನ್ನಿನ ಚುನಾವಣೆಯೂ ಅವರ ಮಾತನ್ನು ಮತ್ತೆ ಸಾಬೀತು ಮಾಡಿದಂತೆ ಕಾಣುತ್ತದೆ. ಭ್ರಷ್ಟಾಚಾರ ಒಂದು ವಿಷಯವಾಗಿದ್ದರೆ ಯಡಿಯೂರಪ್ಪನವರಿಗೆ ಶೇಕಡಾ ಹತ್ತರಷ್ಟು ಮತಗಳು ಬರಬಾರದಿತ್ತು. ಅವರ ಮೇಲೆ ಬರೀ ಭ್ರಷ್ಟಾಚಾರದ ಆರೋಪ ಮಾತ್ರ ಇರಲಿಲ್ಲ, ಅವರನ್ನು ಅದೇ ಆರೋಪದ ಮೇಲೆ ಜೈಲಿಗೇ ಕಳುಹಿಸಲಾಗಿತ್ತು.

ನಾಯಕನನ್ನು ಆರಾಧಿಸುವ ನಮ್ಮ ಮಂದಿಗೆ ಆತನ ಐಬುಗಳು ಕಾಣುವುದಿಲ್ಲ; ಕಾಡುವುದಿಲ್ಲ. ಈ ಸಾರಿಯ ಲೋಕಸಭೆ ಚುನಾವಣೆ ಕಾಂಗ್ರೆಸ್ಸು ಮತ್ತು ಬಿಜೆಪಿಗೆ ಮಾತ್ರವಲ್ಲ ಇತರ ವಿರೋಧ ಪಕ್ಷಗಳಿಗೂ ಬಹಳ ಮುಖ್ಯ. ಎಂಟು ಹತ್ತು ಸೀಟು ಗೆದ್ದು ಬಿಟ್ಟರೆ ಕೇಂದ್ರದಲ್ಲಿ ಅಧಿಕಾರ ಸ್ಥಾನ ಖಾತ್ರಿ ಆಗಿಬಿಡಬಹುದು. ಯಡಿಯೂರಪ್ಪನವರ ಮುಂದೆ ಆ ಚಿತ್ರಗಳೆಲ್ಲ ಬಂದು ಹೋಗುತ್ತಿರಬಹುದು.

ಅದಕ್ಕೇ ಅವರು ತಮ್ಮನ್ನು ತಮ್ಮ ಪಾಡಿಗೆ ಬಿಟ್ಟು ಬಿಡಬೇಕು ಎಂದು ಬಿಜೆಪಿ ನಾಯಕರಿಗೆ ಮೊರೆ ಇಡುತ್ತಿರುವುದು. ಆದರೆ, ಬಿಜೆಪಿಯಲ್ಲಿಯೂ ಅವರನ್ನು ದ್ವೇಷಿಸುವವರು ಇರುವ ಹಾಗೆ ಪ್ರೀತಿಸುವವರೂ ಇದ್ದಾರೆ. `ಬಿಜೆಪಿಯೊಳಗೇ ಇದ್ದುಕೊಂಡು ಅದನ್ನು ಹಾಳು ಮಾಡುತ್ತಿರುವ' ಇಬ್ಬರ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಕುದಿಯುತ್ತಿದೆ. ಅದು ಹೇಗೆ ಯಾವಾಗ ಸ್ಫೋಟ ಆಗುತ್ತದೆ ಗೊತ್ತಿಲ್ಲ. ಲೋಕಸಭೆ ಚುನಾವಣೆ ಹತ್ತಿರ ಬಂದಂತೆ ಅದು ಹೆಚ್ಚಾಗಬಹುದು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತರಾಗುವ ಸಾಧ್ಯತೆ ಬಹಳ ಕಡಿಮೆ.

ಒಂದು ವೇಳೆ ಅವರು ಬಿಂಬಿತರಾದರೆ ಯಡಿಯೂರಪ್ಪನವರು ಬಿಜೆಪಿ ಸೇರುವ ಕಾಲ ಹತ್ತಿರ ಬರಬಹುದು. ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಡುವೆ ಒಂದು ಸಮೀಕರಣ ಇದ್ದಂತೆ ಕಾಣುತ್ತದೆ. ಸಮೀಕರಣ ಇದೆ ಎಂದು ರಾಜ್ಯ ಬಿಜೆಪಿಯ ಅನೇಕ ನಾಯಕರಿಗೆ ಅನಿಸಿದೆ. ಇಬ್ಬರೂ ಎಲ್.ಕೆ.ಅಡ್ವಾಣಿ ವಿರೋಧಿ ಬಣದವರು ಎಂಬ ಕಾರಣಕ್ಕೂ ಇಂಥ ಅಭಿಪ್ರಾಯ ಮೂಡಿರಬಹುದು! ಅಥವಾ ಕರ್ನಾಟಕದಲ್ಲಿ ಈ ಸಾರಿಯ ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತರ ಆಸುಪಾಸಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕಾದರೆ ಯಡಿಯೂರಪ್ಪ ಮರಳಿ ಪಕ್ಷಕ್ಕೆ ಬರುವುದು ಅಗತ್ಯ ಎಂದು ಮೋದಿ ಅವರಿಗೆ ಅನಿಸುತ್ತಿರಬಹುದು.

ಯಡಿಯೂರಪ್ಪ ಅವರನ್ನು `ಕಳಂಕಿತ' ಎಂದು ದೂರವಿಟ್ಟ ಅಡ್ವಾಣಿಯವರ ಹೆಸರಿಗೆ `ಮಸಿ' ಹಚ್ಚುವ ಕೆಲಸವನ್ನು ಒಂದು ಸಾರಿ ವಿ.ಧನಂಜಯಕುಮಾರ್, ಇನ್ನೊಂದು ಸಾರಿ ಲೆಹರ್ಸಿಂಗ್ ಮಾಡುತ್ತಿರುವುದು ದೊಡ್ಡ ರಾಜಕೀಯ ಹುನ್ನಾರದ ಒಂದು ಭಾಗವಾಗಿರಬಹುದು. ರಾಜಕೀಯವೇ ಹಾಗೆ. ಒಂದಿಷ್ಟು ತಳಮಳ, ಒಂದಿಷ್ಟು ಒಳಗುದಿ, ಒಂದಿಷ್ಟು ಅಸಮಾಧಾನ. ಒಂದಿಷ್ಟು ಪಿತೂರಿ ಇಲ್ಲದೇ ಇದ್ದರೆ ಅದು ರಾಜಕೀಯ ಆಗುವುದಿಲ್ಲ. ಯಡಿಯೂರಪ್ಪ ಅವರ ಹಾಗೆ ಮಾತೃ ಪಕ್ಷ ಬಿಟ್ಟು ಹೋದವರು ಮರಳಿ ತವರಿಗೆ ಬಂದ ಅನೇಕ ನಿದರ್ಶನಗಳು ಇತಿಹಾಸದಲ್ಲಿ ಇವೆ. ಇತಿಹಾಸ ನೋಡುವುದಾದರೆ ಯಡಿಯೂರಪ್ಪ ಮರಳಿ ಬಿಜೆಪಿಗೇ ಬರಬೇಕು. ಆದರೆ, ಬರುತ್ತಾರೆಯೇ? `ರಾಜಕೀಯ ಕಾಯುವ ಆಟ' ಎಂದು ಸದಾ ಧಾವಂತದ ಯಡಿಯೂರಪ್ಪ ಮೊದಲ ಬಾರಿಗೆ ಮೊನ್ನೆ ಹೇಳಿದ್ದಾರೆ; ಕಾದು ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.