ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟ್ವಾದ...

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಇವನಾರವ, ಇವನಾರವ’ ಎಂಬ ಬಸವಣ್ಣನವರ ವಚನವನ್ನು ಅಪಭ್ರಂಶ ಮಾಡಿ ಸಂತೋಷ ಪಟ್ಟ ರಾಹುಲ್ ಜಿಗೆ ಪಾಪ, ಗೊತ್ತಿಲ್ಲ. ಇಂದು ವಿಧಾನಸೌಧದಲ್ಲಿ ಟ್ರಾನ್ಸ್‌ಫರ್, ಪೋಸ್ಟಿಂಗ್, ಕಾಂಟ್ರಾಕ್ಟ್ ಎಲ್ಲಾ ವಿಚಾರದಲ್ಲಿಯೂ ಕೇಳುತ್ತಿರುವುದು ‘ಇವ ನಮ್ಮವನಾ, ಇವ ನಮ್ಮವನಾ’ ಎಂದು. ‘ನಮ್ಮವ’ನಾಗಿರದಿದ್ದರೆ ಅವನಿಗೆ ಸಿಗುವುದು ತಿರಸ್ಕಾರ ಮಾತ್ರ.

–ಸುರೇಶ್‌ ಕುಮಾರ್‌, ಬಿಜೆಪಿ ಶಾಸಕ

ಮನುಕುಲದ ಬದುಕಿಗೆ ಶ್ರೇಷ್ಟ ದಾರಿದೀಪ ಜಗತ್ ಜೋತಿ ಬಸವಣ್ಣರ ವಚನ.ಮಲೀನವಾಯಿತು ಮತಕ್ಕಾಗಿ ನುಡಿಯಲರಿಯದ ನಾಲಿಗೆಯಲ್ಲಿ! ನುಡಿದರೆ ಮುತ್ತಿನ ಸಲಾಖೆಯಂತೆ. ನುಡಿದರೆ ಸ್ಪಟಿಕದ ಲಿಂಗದಂತೆ. ನುಡಿದರೆ ಶಿವ ಮೆಚ್ಚುವಂತೆ ಇರಬೇಕು ಎಂದು ಬಸವಣ್ಣರು ಹೇಳಿರುವುದೆ.ಮಾತುಬರದೆ ವಾಮ ಉದ್ದೇಶದಿಂದ ನುಡುಯುವ ಇಂಥ ನಾಲಿಗೆಗೆ ಅಲ್ಲವೆ! ಮತಕ್ಕಾಗಿ ಅಪಭ್ರಂಷುಬೇಡ!

– ನವರಸನಾಯಕ ಜಗ್ಗೇಶ್‏

ರಾಹುಲ್ ಹಿಂದಿ ಭಾಷಿಗರು. ಹಾಗಾಗಿ ಅವರು ಕನ್ನಡದಲ್ಲಿ ಬಸವಣ್ಣನವರ ವಚನ ಹೇಳುವಾಗ ಮಾಡಿದ ತಪ್ಪನ್ನು ಮನ್ನಿಸಬಹುದು. ಆದರೆ ಈ ಮಹಾನುಭಾವರು (ಜಗ್ಗೇಶ್‌) ತಾನು ಕನ್ನಡಿಗನೆಂಬುದನ್ನೇ ಬಂಡವಾಳ ಮಾಡಿಕೊಂಡವರು. ಶ್ರೇಷ್ಟ, ಜೋತಿ, ಮಲೀನ, ಸಲಾಖೆ, ಸ್ಪಟಿಕ, ನುಡುಯುವ, ಅಪಭ್ರಂಷು!

–ಸುರೇಶ್‌ ಬಿರಾದಾರ್‌, @SureshB88836080

ದೆಹಲಿ ಇಂದ ಬಂದು ಇಲ್ಲಿ ವಚನ ಹೇಳಿದೆ, ಜನಪದ ಹಾಡಿದೆ ಅನ್ನೋದಲ್ಲ... ಅಧಿಕಾರಕ್ಕೆ ಬಂದರೆ ರಾಜ್ಯದಿಂದ ಹಿಂದಿಯನ್ನು ಹಿಂಪಡೆಯುತ್ತೇವೆ ಅನ್ನಿ. ರಾಜ್ಯಕ್ಕೆ ಸ್ವಾಯತ್ತೆ ನೀಡುತ್ತೇವೆ ಅನ್ನಿ. ವಲಸೆ ನೀತಿ ರೂಪಿಸುತ್ತೇವೆ ಅನ್ನಿ... ಆಗುತ್ತ ಮಾಡೋಕೆ?

–ಶ್ರೀಪತಿ ಗೋಗಡಿಗೆ‏ @pisumathu

ರಾಹುಲ್ ಹೇಳಿದ ತಪ್ಪು ವಚನವನ್ನು ಪರಿಗಣಿಸಿದಷ್ಟೇ ಗಂಭೀರವಾಗಿ ನಾವು ಬಸವಣ್ಣನವರು ಹೇಳಿದ್ದನ್ನು ಪರಿಗಣಿಸಿದ್ದರೆ ನಮ್ಮ ದೇಶ ಸ್ವರ್ಗವಾಗಿರುತ್ತಿತ್ತು!!

–ಬೀದರ್‌ ಬಾಬಾ @Bidarbaba

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT