ಕವಯಿತ್ರಿ ಮಮತಾ ಸಾಗರ ಅವರ ಪುಟ್ಟ ಕವಿತೆಗೆ ಎದುರಾದ ಪ್ರತಿರೋಧ ಹಾಗೂ ಕಥೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಸಂದ ದೊಡ್ಡ ಪ್ರಶಸ್ತಿಗೆ ವ್ಯಕ್ತವಾದ ಕೆಲವು ಪ್ರತಿಕ್ರಿಯೆಗಳಲ್ಲಿ ಒಂದು ಸಾಮ್ಯತೆಯಿದೆ. ಈ ಎರಡು ವಿದ್ಯಮಾನಗಳು, ಮೇಲ್ನೋಟಕ್ಕೆ ಬದಲಾದಂತೆ ಕಾಣಿಸುವ ಸಮಾಜದ ಆಳದಲ್ಲಿ ಹೆಪ್ಪುಗಟ್ಟಿರುವ ಲಿಂಗಾಧಾರಿತ ಮನೋಧರ್ಮ ಹಾಗೂ ನಮ್ಮ ಮಾತು (ನುಡಿ) ಧ್ವನಿಶಕ್ತಿ ಕಳೆದುಕೊಳ್ಳುತ್ತಿರುವುದನ್ನು ಸಂಕೇತಿಸುವಂತಿವೆ.

ಮಮತಾ ಸಾಗರ ಅವರ ಕವಿತೆಗೆ ಉಂಟಾದ ಪ್ರತಿಕ್ರಿಯೆಗಳು ಮುಖ್ಯವಾಗಿ ಎರಡು ಬಗೆಯವು. ಹೆಣ್ಣಿನ
ಅಭಿವ್ಯಕ್ತಿಯನ್ನು ಆಕೆಯ ದೇಹದೊಂದಿಗೆ ನೋಡುವ ಗಂಡಿನ ಪೂರ್ವಗ್ರಹ ಮೊದಲನೆಯದು. ಕಾವ್ಯವನ್ನು ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ ಎರಡನೆಯದು. ಸಾಮಾನ್ಯರ ಮಾತಿರಲಿ, ಕೆಲವು ಕವಿಗಳು– ಕವಯಿತ್ರಿ ಯರು– ಕೂಡ ಮಮತಾರ ‘ನಾನು’ ಕವಿತೆಯನ್ನು ಗೇಲಿ ಮಾಡಿದರು; ಇದು ಕನ್ನಡ ಕಾವ್ಯ ತಲುಪಿರುವ ದುಃಸ್ಥಿತಿ ಎಂದು ಷರಾ ಬರೆದರು. ಹೀಗೆ ಮರುಗಿದ ಕೆಲವರು ಕನ್ನಡ ಕಾವ್ಯದ ದುಃಸ್ಥಿತಿಗೆ ತಾವೂ ಕೊಡುಗೆ ಸಲ್ಲಿಸಿದವರೇ.

ಮಮತಾ ಅವರ ರಚನೆ ಕವಿತೆಯೋ ಅಲ್ಲವೋ ಎನ್ನುವುದು ಬೇರೆಯದೇ ಚರ್ಚೆ. ಆದರೆ, ಅವರ ರಚನೆಗೆ ಓದುಗನಲ್ಲಿ ಗಾಢ ವಿಷಾದ ಹಾಗೂ ತಲ್ಲಣ ಉಂಟುಮಾಡುವ ಶಕ್ತಿಯಿದೆ. ‘ನಾನು ಎಂದರೆ, ಒಂದು ಜೊತೆ ಮೆತ್ತಗಿನ ಮೊಲೆ/ ತೊಡೆ ಸಂದಲ್ಲಿ ಅಡಗಿದ ಕತ್ತಲಕೋಶ’ ಎನ್ನುವ ಮಾತು ದುಗುಡದ ಬದಲು ಕೊಳಕು ವಿಚಾರಗಳಿಗೆ, ಕಿಡಿಗೇಡಿತನಕ್ಕೆ ಕಾರಣವಾಗಿದ್ದನ್ನು ನೋಡಿದರೆ, ಸಮುದಾಯದ ವಿವೇಕ ದಲ್ಲೇನೋ ಐಬಿದೆ ಎನ್ನಿಸುತ್ತದೆ. ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸದೆ, ಮೊಲೆ ಹಾಗೂ ಯೋನಿಯ ರೂಪದಲ್ಲಷ್ಟೇ ಹೆಣ್ಣನ್ನು ನೋಡುವ ಪುರುಷ ಪೂರ್ವಗ್ರಹದ ಬಗ್ಗೆ ಮಮತಾ ಅವರ ಕವನ ಮಾತನಾಡುತ್ತದೆ. ಯಾವ ಆತಂಕವನ್ನು ಮಮತಾ ಅವರ ಪುಟ್ಟ ರಚನೆ ನಮ್ಮ ಮುಂದಿಡುತ್ತದೆಯೋ, ಆ ದಿಗಿಲನ್ನು ನಿಜಗೊಳಿಸುವಂತೆ ಹಾಗೂ ಅದು ಸಹಜ ಎನ್ನುವಂತೆ ಪ್ರತಿಕ್ರಿಯೆಗಳು ವ್ಯಕ್ತವಾದವು. ಮಾಂಸದ ಮುದ್ದೆಯಾಗಿಯಷ್ಟೇ ಹೆಣ್ಣನ್ನು ನೋಡಬಯಸುವ ಮನೋಧರ್ಮ ಕೊಂಚವೂ ಲಜ್ಜೆಯಿಲ್ಲದೆ ಪ್ರಕಟಗೊಂಡಿತು.

‘ನಾನು’ ಕವಿತೆಯೊಂದಿಗೆ ಗಂಗಾಧರ ಚಿತ್ತಾಲರ ‘ಕಾಮಸೂತ್ರ’ ಕವಿತೆಯನ್ನು ನೆನಪಿಸಿಕೊಂಡವರಿದ್ದಾರೆ.
ಕಾಮಸೂತ್ರಕ್ಕೂ ತನ್ನನ್ನು ದೇಹದ ಮೂಲಕವಷ್ಟೇ ನೋಡುವುದನ್ನು ವಿರೋಧಿಸುವುದಕ್ಕೂ ವ್ಯತ್ಯಾಸ ತಿಳಿಯದೇ ಹೋದರೆ, ‘ನಾನು ಎಂದರೆ, ಒಂದು ಜೊತೆ ಮೆತ್ತಗಿನ ಮೊಲೆ/ ತೊಡೆ ಸಂದಲ್ಲಿ ಅಡಗಿದ ಕತ್ತಲಕೋಶ’ ಎನ್ನುವ ಸಾಲುಗಳು, ನಾನೆಂದರೆ ಇದಷ್ಟೇ ಅಲ್ಲ ಎಂದು ಧ್ವನಿಸುತ್ತಿರುವುದನ್ನು ಗ್ರಹಿಸಲಾಗದು. ಅತಿ ಓದು ಹಾಗೂ ಅಪಾರ್ಥ ಎರಡೂ ಅಪಾಯಕಾರಿಯೇ. ಸಾಮುದಾಯಿಕ ನೆಲೆಯಲ್ಲಿ ಕನ್ನಡನುಡಿ ತನ್ನ ವಿವೇಕ ಹಾಗೂ ಧ್ವನಿಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಆತಂಕ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇದೆ. ಆ ಆತಂಕವನ್ನು ಮಮತಾ ಅವರ ಕವಿತೆಗೆ ಎದುರಾದ ಪ್ರತಿಕ್ರಿಯೆಗಳು ಮತ್ತಷ್ಟು ಗಾಢವಾಗಿಸಿವೆ.

ಮಮತಾ ಅವರ ಕಾವ್ಯಕ್ಕೆ ವ್ಯಕ್ತವಾದ ಪೂರ್ವಗ್ರಹ ಪೀಡಿತ ಪ್ರತಿಕ್ರಿಯೆಗಳ ಜೊತೆಯಲ್ಲೇ ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಂದ ಸಂದರ್ಭದ ಪ್ರತಿಕ್ರಿಯೆಗಳನ್ನು ಗಮನಿಸಬೇಕು. ಬೂಕರ್ ಪ್ರಭೆಯಲ್ಲಿ ಕಂಗೊಳಿಸುತ್ತಿರುವ ಬಾನು ಅವರ ಸಾಧನೆಯನ್ನು ಹೆಣ್ಣಿನ ರೂಪದಲ್ಲಿ, ಅದರಲ್ಲೂ ಮುಸ್ಲಿಂ ಮಹಿಳೆಯ ರೂಪದಲ್ಲಿ ವಿಶ್ಲೇಷಿಸುತ್ತಿರುವ ಬಗ್ಗೆ ಕೆಲವರಿಗೆ ತಕರಾರು. ಮತ್ತೆ ಕೆಲವರಿಗೆ ಬಾನು ಅವರ ಯಶಸ್ಸನ್ನು ಲಂಕೇಶರಿಗೆ ಅರ್ಪಿಸುವ ಉತ್ಸಾಹ. ಈ ಎರಡೂ ಬಗೆಯ ಪ್ರತಿಕ್ರಿಯೆಗಳ ಹಿಂದಿರುವುದು, ಹೆಣ್ಣು ತನ್ನ ಅಂಕೆಯಲ್ಲಿರ ಬೇಕೆಂದು ಬಯಸುವ ಸಾಂಪ್ರದಾಯಿಕ ಮನಸ್ಸು.

ಬಾನು ಅವರ ಸಾಧನೆ ಆಧುನಿಕ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಪೂರ್ವವಾದುದು ಎನ್ನುವುದು ನಿಸ್ಸಂಶಯ. ಈ ಸಾಧನೆ ಓರ್ವ ಪುರುಷನ ದ್ದಾಗಿದ್ದರೂ ಅಷ್ಟೇ ಮುಖ್ಯವಾಗಿರುತ್ತಿತ್ತು ಎನ್ನುವುದೂ ನಿಜ. ಆದರೆ, ಹೆಣ್ಣು ಮತ್ತು ಗಂಡಿಗೆ ಸಮಾನ ಅವಕಾಶ ಗಳಿಲ್ಲದ ಹಾಗೂ ಸಮಾನ ಗೌರವವಿಲ್ಲದ ಸಮಾಜದಲ್ಲಿ ಮಹಿಳೆಯ ಸಾಧನೆಗೆ ಗುಲಗಂಜಿಯಷ್ಟು ಹೆಚ್ಚೇ ತೂಕ. ಧಾರ್ಮಿಕ ಕಟ್ಟುಪಾಡುಗಳು ಹೆಚ್ಚಾಗಿರುವ ಮುಸ್ಲಿಂ ಸಮುದಾಯದ ಮಹಿಳೆಯ ಜಿಗಿತಕ್ಕೆ ಮತ್ತಷ್ಟು ಮೌಲ್ಯವಿದೆ. ಧರ್ಮಾಧಾರಿತ ವಿಭಜಕ ರಾಜಕಾರಣದ ವರ್ತಮಾನದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಸಾಧನೆ–ಯಶಸ್ಸಿಗೆ ರಾಜಕೀಯ ಮಹತ್ವವೂ ಇದೆ. ಆ ಕಾರಣದಿಂದಲೇ ‘ಹೆಣ್ಣು’ ಹಾಗೂ ‘ಮುಸ್ಲಿಂ’ ಎನ್ನುವ ಗುರುತು, ಬಾನು ಅವರ ಸಾಧನೆಗೆ ಎಳೆಯುವ ಅಡಿಗೆರೆಯೇ ಹೊರತು, ಚೌಕಟ್ಟಿನ ಮಿತಿಯಲ್ಲ.

ಬಾನು ಅವರ ಸಾಧನೆಯಲ್ಲಿ ಲಂಕೇಶರಿಗೆ ಅಥವಾ ಬಾನು ಅವರ ಪತಿ ಮುಷ್ತಾಕ್ ಅವರಿಗೆ ಪಾಲು ಸಲ್ಲಬೇಕು ಎನ್ನುವ ಮಾತುಗಳು ಭಾವುಕವಾದವು. ಸ್ವತಃ ಬಾನು ಅವರು ತಮ್ಮ ಯಶಸ್ಸನ್ನು ಯಾರಿಗಾದರೂ ಅರ್ಪಿಸಿದಲ್ಲಿ ಅದರಲ್ಲಿ ಸಮಸ್ಯೆಯೇನೂ ಇಲ್ಲ. ಸಮಸ್ಯೆ ಇರುವುದು, ಮಹಿಳೆಯ ಯಶಸ್ಸಿಗೆ ಪಾಲುದಾರರನ್ನು ಹುಡುಕುವ ಸಾರ್ವಜನಿಕರ ಧೋರಣೆಯಲ್ಲಿ. ಈ ಹುಡುಕಾಟ ಮಹಿಳೆಯ ಯಶಸ್ಸನ್ನು ಹೇಗಾದರೂ ಮಾಡಿ ಗಂಡಿನ ತಲೆಗೆ ಕಟ್ಟುವ ಸುಪ್ತಪ್ರಜ್ಞೆಯ ಅಭಿವ್ಯಕ್ತಿಯಂತೆ ಕಾಣಿಸುತ್ತದೆ.

ಗಂಡಿನ ಯಶಸ್ಸಿನ ಹಿಂದೆ ಮಹಿಳೆಯನ್ನು ಕಾಣುವ ರೂಢಿಗತ ಮಾತೊಂದಿದೆ. ಗಂಡಿನ ಹಿಂಬಾಲಕಳಾಗಿ ಯಷ್ಟೇ ಹೆಣ್ಣನ್ನು ಉಳಿಸುವ ಅನುನಯದ ಮಾತದು. ಆ ಮಾತಿನ ಜಾಡಿನಲ್ಲಿಯೇ, ಬಾನು ಮುಷ್ತಾಕರ ಯಶಸ್ಸಿನ ಹಿಂದೆ ಗಂಡನ್ನು ಗುರುತಿಸುವ ಪ್ರಯತ್ನವನ್ನು ಕಾಣಬಹುದು. ಗಂಡಿನ ಸಾಧನೆಯ ಹಿನ್ನೆಲೆಯಲ್ಲಿ ಹೆಣ್ಣನ್ನು ಗುರುತಿಸುವ ಸಂದರ್ಭದಲ್ಲಿ, ತನ್ನ ಯಶಸ್ಸಿನಲ್ಲಿ ಹೆಣ್ಣಿಗೂ ಪಾಲು ಕೊಡುವ ಎತ್ತರದಲ್ಲಿ ಗಂಡನ್ನು ನಿಲ್ಲಿಸಲಾಗುತ್ತದೆ. ಆದರೆ, ಯಶಸ್ವೀ ಹೆಣ್ಣಿನ ಹಿಂದೆ ಗಂಡನ್ನು ಗುರುತಿಸುವ ಸಂದರ್ಭದಲ್ಲಿ ಮಹಿಳೆಯ ಗೆಲುವನ್ನು ಕುಗ್ಗಿಸುವ ಪ್ರಯತ್ನವೇ ಹೆಚ್ಚಾಗಿರುತ್ತದೆ. ಈ ಗಂಡು ಮನಃಸ್ಥಿತಿ ಯನ್ನು ‘ಆಪರೇಷನ್ ಸಿಂಧೂರ’ ಪರಿಕಲ್ಪನೆಯೂ ಪೋಷಿಸುವಂತಿದೆ. ಸಚಿವರೊಬ್ಬರ ಕಣ್ಣಿಗೆ, ಧರ್ಮದ ಕಾರಣದಿಂದಾಗಿ ನಮ್ಮ ಸೈನ್ಯದ ಅಧಿಕಾರಿಣಿ ಉಗ್ರರಿಗೆ ಸಹೋದರಿ. ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವವರ ಅಂತ್ಯ ಖಚಿತ ಎನ್ನುವುದು ಪ್ರಧಾನಿಯ ಮಾತು. ಇಂಥ ಮಾತುಗಳಲ್ಲಿ ಪ್ರಾಮಾಣಿಕತೆಗಿಂತಲೂ ರಾಜಕೀಯವೇ ಢಾಳಾಗಿ ಕಾಣಿಸುತ್ತದೆ. ಹಾಥರಸ್ನ ಅಮಾನುಷ ಘಟನೆಯೂ ಸೇರಿದಂತೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕ್ರೌರ್ಯವೆಸಗಿದ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ವರದಿಯಾಗು ತ್ತಿವೆ. ಲೈಂಗಿಕ ದೌರ್ಜನ್ಯಗಳಿಗೆ ಮಿಕವಾಗುವ ನತದೃಷ್ಟ ಸಹೋದರಿಯರಿಗೆ ದೊರೆತಿರುವ ನ್ಯಾಯವೇನು? ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಚಿವರು, ಜನಪ್ರತಿನಿಧಿಗಳುಭಾಗಿಯಾದ ಆರೋಪಗಳ ಸಂದರ್ಭದಲ್ಲಿ ಸರ್ಕಾರ ನಡೆಸುವವರು ತೆಗೆದುಕೊಂಡ ಕ್ರಮಗಳೇನು? ಕಾನೂನು ಸುವ್ಯವಸ್ಥೆಯ ವೈಫಲ್ಯದ ಜೊತೆಗೆ ಹೆಣ್ಣನ್ನು ಸರಕಿನಂತೆ ನೋಡುವ ಗಂಡಿನ ಮನಃಸ್ಥಿತಿಯ ಸಂಕೇತವೂ ಆಗಿರುವ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಸರ್ಕಾರ ಈವರೆಗೆ ಹೇಗೆ ಸ್ಪಂದಿಸಿದೆ? ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದನಿಯಿಲ್ಲದ ಜಾತಿಗಳ ಹೆಣ್ಣುಮಕ್ಕಳು ಮಿಕಗಳಾದ ಸಂದರ್ಭದಲ್ಲಿ ಸರ್ಕಾರಗಳು ದುರ್ಬಲವಾಗಿ ಕಾಣಿಸುವುದು ಹಾಗೂ ಸಮಾಜ ಮೌನವಾಗಿರುವುದು ಯಾಕೆ? ಮಮತಾ ಅವರು ಕಟ್ಟಿಕೊಡುವ ‘ನಾನು’ ಚಿತ್ರಣವೂ ಜಾತಿಯ ಆಧಾರದಲ್ಲಿ ಮೇಲು–ಕೀಳು ಎಂದಾಗುತ್ತದೆಯೆ?

ಕೂದಲರಾಶಿಯಿಂದ ಮೈಯನ್ನು ಮುಚ್ಚಿಕೊಂಡ ಅಕ್ಕಮಹಾದೇವಿಯನ್ನು, ‘ದೇಹದ ಮೇಲಿನ ಮೋಹ ಮರೆಯದ ನಿನ್ನದು ಎಂಥ ವಿರಕ್ತಿ’ ಎಂದು ಅಲ್ಲಮಪ್ರಭು ಪ್ರಶ್ನಿಸಿದಾಗ, ‘ಕಾಮನ ಮುದ್ರೆಯ ಕಂಡು ನಿಮಗೆ/ ನೋವಾದೀತೆಂದು/ ಆ ಭಾವದಿಂದ ಮುಚ್ಚಿದೆ/ ಇದಕೆ ನೋವೇಕೆ?’ ಎನ್ನುತ್ತಾಳೆ ಅಕ್ಕ. ಆ ಸಂದರ್ಭ ಈಗ ಮರುಕಳಿಸಿದರೆ, ಅಕ್ಕ ಏನೆಲ್ಲ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿತ್ತು?

ಮಮತಾ, ಬಾನು ಅವರ ನೆಪದಲ್ಲಿ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ‘ಕನ್ನಡ ವಿವೇಕ’ದ ಚಕ್ರ ಹಿಮ್ಮುಖವಾಗಿ ಚಲಿಸುತ್ತಿರುವುದರ ಸಂಕೇತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.