ಭಾನುವಾರ, ಸೆಪ್ಟೆಂಬರ್ 22, 2019
22 °C

ಸರ್ವ ದೃಷ್ಟಿಯಿಂದ ಶಕ್ತಿ ಸಂಪನ್ನ ಭಾರತ: ಕೊಸಿಗಿನ್ ಇಚ್ಛೆ

Published:
Updated:

ನವದೆಹಲಿ, ಮೇ 6– ರಾಜಕೀಯ ದೃಷ್ಟಿಯಿಂದ, ಆರ್ಥಿಕ ದೃಷ್ಟಿಯಿಂದ, ಮಿಲಿಟರಿ ದೃಷ್ಟಿಯಿಂದ ಭಾರತ ಬಲವಾಗಿರಬೇಕೆಂಬುದು ನಮ್ಮ ಇಚ್ಛೆ ಎಂದು ರಷ್ಯದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಇಂದು ಇಲ್ಲಿ ಸುದ್ದಿಗಾರರಿಗೆ ಹೇಳಿದ ಮಾತಿದು.

ಸಂಜೆ ಪಾರ್ಲಿಮೆಂಟ್‌ ಭವನದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಜತೆ ಮಾತುಕತೆ ನಡೆಸಿದ ಕೊಸಿಗಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಡಾ. ಜಾಕಿರ್ ಹುಸೇನ್‌ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಕೊಸಿಗಿನ್‌ ನಿರ್ಧರಿಸಿದ್ದು ಕೊನೆ ಗಳಿಗೆಯಲ್ಲಿ. ಇದು ಇಲ್ಲಿನ ರಾಜಕೀಯ ವಲಯಗಳಲ್ಲಿ ಆಸಕ್ತಿ ಕೆರಳಿಸಿದೆ.

ರಾಜ್ಯದ ಬಹು ಭಾಗದಲ್ಲಿ ಮಳೆ ಇಲ್ಲ; ಕುಡಿಯುವ ನೀರಿಗೂ ಕಷ್ಟ

ಬೆಂಗಳೂರು, ಮೇ 6– ಈ ವೇಳೆಗೆ ಬರಬೇಕಾಗಿದ್ದ ಭರಣಿ ಮಳೆ ರಾಜ್ಯದ ಬಹು ಭಾಗಗಳಲ್ಲಿ ಬಾರದೆ ಕೃಷಿ ಕೆಲಸ ತಡವಾಗಿರುವುದು ಮಾತ್ರವಲ್ಲ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರ ತಾಳಿದೆ.

ಬಿತ್ತನೆ ಮುನ್ನ ಉಳಲು ಅಗತ್ಯವಾದ ಮಳೆಗಾಗಿ ಜೂನ್‌ ತಿಂಗಳ ಕೊನೆಯವರೆಗೆ ಕಾಯಬಹುದಾದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ತ್ವರಿತ ಗಮನ ಕೊಡಬೇಕಾಗಿದ್ದು ರಾಜ್ಯ ಸರಕಾರ ಇತ್ತ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.

 

Post Comments (+)