ಸೋಮವಾರ, ಜೂನ್ 1, 2020
27 °C

ದಿನ ಭವಿಷ್ಯ ಮೇ 14

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಮಳೆ ನಕ್ಷತ್ರ ಕೃತ್ತಿಕಾ ಸಪ್ತಮಿ ಗಂ. 8-31 (ಬೆ. 9-26) ಗುರುವಾರ ನಿತ್ಯ ನಕ್ಷತ್ರ ಶ್ರವಣ ಗಂ. 7-29 (ಬೆ. 9-01) ಬ್ರಹ್ಮ ನಾಮ ಯೋಗ ಗಂ 53-57 ಬವ ಕರಣ ಗಂ 8-31 ವಿಷ ಗಂ. 18-6 ಅಮೃತ ಗಂ 43-19 ರಾಹುಕಾಲ ಮ ಗಂ. 1-30 ರಿಂದ 3-00 ಗುಳಿಕ ಕಾಲ ಬೆ ಗಂ 9-00 ರಿಂದ 10-30 ಯಮಗಂಡ ಕಾಲ ಬೆ ಗಂ 6-00 ರಿಂದ 7-30 ಸೂರ್ಯೋದಯ: 5-59 ಸೂರ್ಯಾಸ್ತ: 6-33 ಅದೃಷ್ಟ ಸಂಖ್ಯೆ 2, 7

ಮೇಷ: ಕೆಲಸದ ಒತ್ತಡದಿಂದಾಗಿ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ. ವಿನಾಕಾರಣ ಉದ್ವೇಗಕ್ಕೆ ಒಳಗಾಗಿ ಮನೆಯವರ ಮೇಲೆ ಹರಿಹಾಯುವ ಸಾಧ್ಯತೆಯಿದ್ದು ಸಮಾಧಾನಚಿತ್ತರಾಗಿ ವ್ಯವಹರಿಸುವುದು ಉತ್ತಮ. 

ವೃಷಭ: ನಿರ್ಲಕ್ಷ್ಯದಿಂದಾಗಿ ಸಿಗುವ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಆಸಕ್ತಿ ವಹಿಸಿ ಕೆಲಸ ಮಾಡಿ. ಬಂಧುಗಳ ನೆರವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸಂತಸ ನಿರ್ಣಯವೊಂದನ್ನು ಕೇಳುವ ಅವಕಾಶ ಸಿಗಲಿದೆ.

ಮಿಥುನ: ನಿಮ್ಮ ಕಾರ್ಯದಕ್ಷತೆಗೆ ಪ್ರಶಂಸೆಯ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಪ್ರಸಂಗ ಬರಲಿದೆ. ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸನ್ನು ಸಾಧಿಸಲಿದ್ದೀರಿ. ಉದ್ಯೋಗದಲ್ಲಿ ಮುಂಬಡ್ತಿ.

ಕರ್ಕಾಟಕ: ಬಹುದಿನಗಳ ನಿಮ್ಮ ಕನಸಿನ ಯೋಜನೆಯೊಂದಕ್ಕೆ ಉತ್ಸಾಹದ ಚಾಲನೆ ದೊರೆಯಲಿದೆ. ಕಾರ್ಯನಿಮಿತ್ತ ದೂರದ ಪ್ರಯಾಣ ಅನಿವಾರ್ಯವಾದೀತು. ಸ್ವಯಂ ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ.

ಸಿಂಹ: ಬೇರೆಯವರ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಧ್ಯಸ್ಥಿಕೆ ವಹಿಸಿ ಯಶಸ್ಸನ್ನು ಸಾಧಿಸಲಿದ್ದೀರಿ. ಬಂಧುಗಳ ಭೇಟಿಯಿಂದ ಸಂತಸದ ಕ್ಷಣಗಳನ್ನು ಅನುಭವಿಸುವಿರಿ. ವಿಶೇಷ ಭೋಜನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ. 

ಕನ್ಯಾ: ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಂಡಬಂದರೂ ಬೇರೆಯವರ ಸಹಕಾರದಿಂದ ಎಲ್ಲವೂ ನಿರಾಳವಾಗಲಿದೆ. ಯೋಜನಾಬದ್ಧವಾದ ಕಾರ್ಯವೊಂದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ.  

ತುಲಾ: ದಿನದ ಮಟ್ಟಿಗೆ ನಿಮ್ಮ ಮಾತಿನಿಂದ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತ ಸಾಧಿಸಿವುದು ಉತ್ತಮ. ವಿನಾಕಾರಣ ನೆರೆಹೊರೆಯವರೊಂದಿಗೆ ಸಂಬಂಧಗಳನ್ನು ಕೆಡಿಸಿಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ: ಮಾಡಿದ ಕೆಲಸವನ್ನೇ ಪುನಃ ಪರಾಮರ್ಷಿಸಬೇಕಾದ ಅನಿವಾರ್ಯತೆ ಎದುರಾದೀತು. ತಾಳ್ಮೆಗೆಡದೆ ವ್ಯವಹರಿಸಿ. ಫಲ ನಿಮ್ಮದಾಗಲಿದೆ. ಮಂಗಳಕಾರ್ಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಬರಲಿದ್ದೀರಿ. 

ಧನು: ನಿಮ್ಮ ಕೆಲಸ–ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ಉದರ ಸಂಬಂಧಿ ಕಾಯಿಲೆಗಳ ಸಾಧ್ಯತೆ ಕಂಡುಬರುತ್ತಿದ್ದು ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ವ್ಯವಹಾರದಲ್ಲಿ ಶ್ರೇಯಸ್ಸು ನಿಮ್ಮದಾಗಲಿದೆ.

ಮಕರ: ನಿಮ್ಮ ಉನ್ನತಿಯ ವಿಷಯದಲ್ಲಿ ಸ್ವಜನರಿಂದ ಉತ್ತಮವಾದ ಸಲಹೆಗಳು ದೊರಕಲಿದ್ದು, ತಿರಸ್ಕರಿಸದೆ ಪರಶೀಲಿಸುವುದು ಉತ್ತಮ. ಸರ್ಕಾರದಿಂದ ನೆರವು ದೊರೆತು ನೆಮ್ಮದಿಯ ದಿನವನ್ನಾಗಿಸಲಿದೆ.  

ಕುಂಭ: ನಿಮ್ಮ ವಿರೋಧಿಗಳೂ ನಿಮ್ಮನ್ನು ಹಿಂಬಾಲಿಸುವ ಸಾಧ್ಯತೆ ಕಂಡುಬರುತ್ತಿದೆ. ಅನ್ಯರ ನಡೆ–ನುಡಿಯ ಬಗ್ಗೆ ಮಾತನಾಡುವುದಕ್ಕಿಂತ ಮೌನ ವಹಿಸುವುದೇ ಉತ್ತಮ. ಗಣ್ಯರ ದರ್ಶನದಿಂದ ಸಂತಸವನ್ನು ಕಾಣುವಿರಿ.

ಮೀನ: ನಿಮ್ಮ ನಡೆ–ನುಡಿ ಕೃತ್ಯಗಳು ಅತ್ಯಂತ ಪಾರದರ್ಶಕವಾಗಿರಲಿ. ಮೇಲಧಿಕಾರಿಗಳಿಂದ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾದೀತು. ಉದ್ಯೋಗಾಕಾಂಕ್ಷಿಗಳಿಗೆ ಅಷ್ಟೊಂದು ಅನುಕೂಲವಾಗಿಲ್ಲದ ದಿನವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.