ಸೋಮವಾರ, ಜೂನ್ 1, 2020
27 °C

ದೈನಂದಿನ ರಾಶಿ ಭವಿಷ್ಯ ‌‌|‌‌‌‌‌‌ ಭಾನುವಾರ, ಮೇ 10, 2020

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ

ವ್ಯವಹಾರದಲ್ಲಿ ಕೌಶಲದಿಂದಾಗಿ ಹೆಚ್ಚಿನ ಲಾಭ. ಭೂ ವ್ಯವಹಾರದಲ್ಲಿ ನಿಮ್ಮ ಹಟಮಾರಿತನಕ್ಕೆ ಜಯವಾಗುವುದರಲ್ಲಿ ಅನುಮಾನವಿಲ್ಲ. ಇಚ್ಛೆಯಂತೆ ಭೂಮಿ ಅಥವಾ ಮನೆ ಖರೀದಿ ಭಾಗ್ಯ ನಿಮ್ಮದಾಗಲಿದೆ.

ವೃಷಭ 

ನಿಮ್ಮ ಒಳ್ಳೆಯ ನಡತೆಯಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವಿರಿ. ಸಮಾಜಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಕೆಲಸ–ಕಾರ್ಯಗಳೊಂದಿಗೆ ಗೌರವ ಸಿಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ 

ಬೃಹತ್ ಯೋಜನೆಗಳಿಗೆ ಎಲ್ಲ ಸನ್ನಿವೇಶಗಳು ಅನುಕೂಲಕರವಾಗಿ ಪರಿಣಮಿಸಲಿವೆ. ಹೊಸ ಹೊಸ ಅವಕಾಶಗಳು ಅರಸಿ ಬರಲಿವೆ. ವಿವಾಹಾಕಾಂಕ್ಷಿಗಳಿಗೆ ವೈವಾಹಿಕ ಮಾತುಕತೆಯಿಂದ ತೃಪ್ತಿಕರ ಸಮಾಚಾರ ಕೇಳಿಬರಲಿದೆ

ಕಟಕ 

ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಕೊಂಡಿರುವವರಿಗೆ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಉನ್ನತ ಅಧಿಕಾರಿಗಳಿಗೆ ಅಚ್ಚರಿ ಮೂಡಿಸುವ ಕಾರ್ಯ ಮಾಡಲಿದ್ದೀರಿ.

ಸಿಂಹ 

ಕರಕುಶಲ ಕರ್ಮಿಗಳಿಗೆ ಪ್ರತಿಭಾ ಪ್ರದರ್ಶನದ ಅವಕಾಶದೊಂದಿಗೆ ಮಾರಾಟದಿಂದ ಉತ್ತಮ ಅನುಕೂಲ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ. ಪ್ರಯಾಣದಲ್ಲಿ ಅಡಚಣೆಗಳ ನಡುವೆ ಕಿರಿಕಿರಿ ಉಂಟಾಗುವುದು.

ಕನ್ಯಾ 

ಮೇಲಧಿಕಾರಿಗಳು ನಿಮ್ಮ ನಿರ್ಧಾರಕ್ಕೆ ನಿಮ್ಮೊಂದಿಗಿದ್ದಾರೆಂಬ ಭರವಸೆಯಿಂದ ಕೆಲಸ ನಿರ್ವಹಿಸಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಲೋಚನೆ ಮಾಡುವುದು ಉತ್ತಮ.

ತುಲಾ 

ಪಾಲುದಾರಿಕೆಯಿಂದ ಅಪೂರ್ಣವಾಗಿದ್ದ ನಿಮ್ಮ ವ್ಯಾಪಾರದ ಲಾಭಾಂಶದಲ್ಲಿ ಹೆಚ್ಚಿನ ಭಾಗ ನಿಮ್ಮದಾಗಲಿದೆ. ನಡೆಸಲಿಚ್ಛಿಸುವ ವ್ಯವಹಾರಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಮೂಡಿಬರಲಿದೆ.

ವೃಶ್ಚಿಕ 

ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಾಧ್ಯವಾದ ಸಹಾಯಹಸ್ತ ಚಾಚುವಿರಿ. ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ಹಿನ್ನಡೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಿತೈಷಿಗಳಿಂದ ಸಹಕಾರ ಸಿಗಲಿದೆ.

ಧನು 

ಮನೆಗೆ ಸೋದರ ಸಂಬಂಧಿಗಳ ಆಗಮನದಿಂದ ಹಬ್ಬದ ವಾತಾವರಣ ಮೂಡಲಿದೆ. ಮಕ್ಕಳ ಮದುವೆ ಕಾರ್ಯಕ್ಕೆ ಹೊಸ ತಿರುವು ಉಂಟಾಗಲಿದೆ. ಅಚ್ಚರಿಯಿಂದ ಕೂಡಿದ ದಿನವಾಗಿ ಪರಿಣಮಿಸುವುದು.

ಮಕರ 

ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆಯಿಂದ ಲಾಭ. ಪಿತ್ರಾರ್ಜಿತವಾದ ಆಸ್ತಿ ನಿಮ್ಮ ಪಾಲಿಗೆ ದೊರಕುವುದು. ಬಂಧುಗಳೊಂದಿಗಿನ ವಿರಸ ಶಮನವಾಗಿ ತಿಳಿ ವಾತಾವರಣ ಮೂಡುವುದು.

ಕುಂಭ 

ಹೊಸ ಉದ್ಯಮಕ್ಕೆ ಕಾಲಿಡುವ ಧಾವಂತದಿಂದ ಕೆಲಸ ಕಾರ್ಯಗಳನ್ನು ಮಾಡಲಿದ್ದೀರಿ. ಗುರಿ ತಲುಪುವ ಹಾದಿಯಲ್ಲಿ ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ. ಯಶಸ್ಸಿನ ದಿನ ಪ್ರಾರಂಭವಾಗಲಿದೆ.

ಮೀನ 

ವೈಯಕ್ತಿಕ ಜೀವನದಲ್ಲಿನ ವಿಚಾರಗಳ ಕುರಿತು ಸಂಬಂಧಿಕರೊಂದಿಗೆ ಮಾತನಾಡಲಿದ್ದೀರಿ. ದುಡುಕು ಸ್ವಭಾವದಿಂದಾಗಿ ತೊಂದರೆ ಎದುರಿಸಬೇಕಾದೀತು. ವಾತ ಸಂಬಂಧಿ ಕಾಯಿಲೆ ಉಲ್ಬಣವಾದೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.