ಸೋಮವಾರ, ಆಗಸ್ಟ್ 8, 2022
22 °C

ವಾರ ಭವಿಷ್ಯ: 3-7-2022ರಿಂದ 9-7-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಕೆಲವರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಿಡುಕುತನದ ಸ್ವಭಾವದಿಂದ ಹಿರಿಯ ನಾಯಕರುಗಳಿಂದ ದೂರವಾಗುವ ಸಾಧ್ಯತೆ ಇದೆ, ಎಚ್ಚರ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಅವರಿವರ ಮಾತು ಕೇಳಿ ಬೇರೆಯವರನ್ನು ನಿಂದಿಸುವುದರಿಂದ ನಿಮಗೇ ಹಾನಿ. ಉನ್ನತ ವ್ಯಾಸಾಂಗಕ್ಕೆ ವಿದೇಶಕ್ಕೆ ಹೋಗಬೇಕೆಂದು ಇರುವವರಿಗೆ ಅವಕಾಶ ದೊರೆತು ಸಂತಸವಾಗುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸ್ಪರ್ಧೆಯನ್ನು ಎದುರಿಸುವ ಅವಕಾಶ ದೊರೆಯುತ್ತದೆ. ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಅವರ ಬಾಕಿಹಣ ಬರಲಾರಂಭಿಸುತ್ತದೆ. ಆಹಾರಧಾನ್ಯಗಳನ್ನು ವಿದೇಶಕ್ಕೆ ರಫ್ತು  ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಮಕ್ಕಳ ಶ್ರೇಯಸ್ಸಿಗಾಗಿ ಅಧಿಕಾರಿಗಳ ಮೊರೆ ಹೋಗುವ ಸಾಧ್ಯತೆ ಇದೆ. ಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಹೊಸಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಡನೆ ಇದ್ದ ಮನಃಸ್ತಾಪ ದೂರವಾಗುತ್ತದೆ. ಉದ್ದಿಮೆದಾರರು ಯಂತ್ರೋಪಕರಣಗಳ ಖರೀದಿಗಾಗಿ ಹಣ ಹೂಡುವ ಸಂದರ್ಭವಿದೆ. ಹಿರಿಯ ಅಧಿಕಾರಿಗಳ ಸಹಕಾರ ದೊರೆತು ಉದ್ದಿಮೆಯಲ್ಲಿ ಯಶಸ್ಸನ್ನು ಕಾಣುವಿರಿ. ನಿರ್ಮಾಣದ ಕೆಲಸಗಳನ್ನು ಅತಿ ಆತುರದಿಂದ ಆರಂಭಿಸಬೇಡಿರಿ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಉದ್ದಿಮೆ ಯಶಸ್ಸಿಗಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಹಳೆಯ ಕೈಸಾಲಗಳನ್ನು ಸರ್ಕಾರಿ ಸಾಲಗಳ ಮೂಲಕ ತೀರಿಸಬಹುದು.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮನಸ್ಸಿನಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿ ಕೆಲಸ ಕಾರ್ಯ ಮಾಡಲು ಮುಂದಡಿ ಇಡುವಿರಿ. ಹೊಸ ವಸ್ತ್ರಗಳನ್ನು ಖರೀದಿ ಮಾಡಲು ಮುಂದಾಗುವಿರಿ. ಆಸ್ತಿ ವಿಚಾರಗಳ ಬಗ್ಗೆ ಬಂಧುಗಳಲ್ಲಿ ಒಮ್ಮತ ಮೂಡಿ ಆಸ್ತಿ ವಿಭಾಗವಾಗುವುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗಿ ನಿಮ್ಮ ವ್ಯವಹಾರದಲ್ಲಿ ಹೊಸ ರೀತಿಯ ತಿರುವನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಂದಗತಿಯನ್ನು ಕಾಣಬಹುದು. ಹಣಕಾಸಿನ ವ್ಯವಹಾರ ಮಾಡುವವರು ದೊಡ್ಡಮಟ್ಟದ ವ್ಯವಹಾರ ಮಾಡುವುದು ಬೇಡ. ಬರಹಗಾರರಿಗೆ ಸಾಮಾಜಿಕ ಗೌರವ ದೊರೆಯುವ ಸಾಧ್ಯತೆ ಇದೆ.  ಪುಷ್ಪೋದ್ಯಮದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಬೇಡಿಕೆ ಬಂದು ಆದಾಯ ಹೆಚ್ಚುತ್ತದೆ. ಕೃಷಿಗಾಗಿ ಹೆಚ್ಚು ಹಣ ವಿನಿಯೋಗಿಸುವಿರಿ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಕಟ್ಟಡ ನಿರ್ಮಾಣ ಕಾರ್ಯ ಮಾಡುವ ಎಂಜಿನಿಯರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚೇತರಿಕೆಯನ್ನು ಕಾಣಬಹುದು. ಖರ್ಚನ್ನು ಮಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಉತ್ತಮ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಸಂಶೋಧನಾ ವ್ಯಕ್ತಿಗಳಿಗೆ ಅವರ ಸಂಸ್ಥೆಗಳಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಧನಸಹಾಯ ದೊರೆಯುತ್ತದೆ. ನಿಯೋಜಿತ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ವಿದೇಶದಲ್ಲಿ ಸ್ಥಿರಾಸ್ತಿಗಾಗಿ ಯೋಚಿಸುತ್ತಿರುವವರು ಈಗ ಸ್ಥಿರಾಸ್ತಿಯನ್ನು ಆಯ್ಕೆ ಮಾಡಬಹುದು. ಕಾರ್ಯಬಾಹುಳ್ಯದಿಂದ ಆಯಾಸ ಎನಿಸಬಹುದು. ಚಿನ್ನಾಭರಣ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರ ನಡೆದು ಲಾಭ ಹೆಚ್ಚುತ್ತದೆ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಪ್ರೀತಿಪಾತ್ರರೊಂದಿಗೆ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಹೊಸ ಭಾಷೆಗಳನ್ನು ಕಲಿಯಲು ಹೊಸ ರೀತಿಯ ಆಸಕ್ತಿ ಮೂಡುತ್ತದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಅಲ್ಪಸ್ವಲ್ಪ ಕಾನೂನು ತೊಡಕುಗಳು ಎದುರಾಗಬಹುದು. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ಆದಾಯ ಹೆಚ್ಚಾಗಿ ಇರುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಅದರ ಬಗ್ಗೆ ತಿಳಿಯಿರಿ. ಆರಂಭಶೂರತ್ವ ಖಂಡಿತವಾಗಿ ಬೇಡ. ಆದಾಯದಷ್ಟೇ ಖರ್ಚು ಇರುತ್ತದೆ, ಸರಿಯಾಗಿ ಹಣ ನಿರ್ವಹಣೆಯನ್ನು ಮಾಡಿರಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಅಧಿಕಾರಿಗಳಿಂದ ನಿಮ್ಮ ವ್ಯಾವಹಾರಿಕ ಯೋಜನೆಗಳಿಗೆ ಸಾಲಸೌಲಭ್ಯ ದೊರೆಯುತ್ತದೆ. ದೈವ ದರ್ಶನಕ್ಕಾಗಿ ಹೋಗಿ ಬರಬೇಕೆಂಬ ಆಸೆ ಈಡೇರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಬಾಲ್ಯ ಸ್ನೇಹಿತರೊಂದಿಗೆ ಕೂಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಸಂದರ್ಭವಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಒದಗಿಬರುವ ಸಾಧ್ಯತೆ ಇದೆ. ಸರ್ಕಾರಿ ಸಂಸ್ಥೆಗಳೊಂದಿಗೆ ವ್ಯಾಪಾರ ವ್ಯವಹಾರ ಮಾಡುತ್ತಿರುವವರ ವ್ಯವಹಾರಗಳು ಹೆಚ್ಚುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಖರ್ಚನ್ನು ನಿಭಾಯಿಸದೇ ಹೋದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ತಾಯಿಯೊಡನೆ ಹಣದ ವಿಷಯಕ್ಕೆ ಮುನಿಸು ಹೆಚ್ಚಾಗಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ವ್ಯವಹಾರವಾಗಿ ನೆಮ್ಮದಿ ಇರುತ್ತದೆ. ಹಲ್ಲು ನೋವು ಕಾಡಬಹುದು. ನಿರುದ್ಯೋಗಿಗಳಿಗೆ ಜಾಹೀರಾತು ಕ್ಷೇತ್ರದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಸಂಗಾತಿಯ ಹಮ್ಮಿನ ಮಾತು ನಿಮ್ಮನ್ನು ನೋಯಿಸುವ ಲಕ್ಷಣಗಳಿವೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಹೆಚ್ಚಿನ ಜಾಗರೂಕತೆಯ ಅಗತ್ಯತೆ ಇದೆ. ಸಾಮಾಜಿಕವಾಗಿ ಗೌರವಗಳು ಕಡಿಮೆಯಾಗಬಹುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಇರುತ್ತದೆ. ಕೆಲವರಿಗೆ ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಂದ ಸಂಪಾದನೆ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಚರ್ಚೆ ಆಗಬಹುದು. ಸಂಗಾತಿಯ ಕಾಠಿಣ್ಯತೆ ಬೇಸರ ತರಿಸಬಹುದು. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ನಿರಾಳತೆ  ಮೂಡುತ್ತದೆ. ಮುದ್ರಣಕಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಚಿನ್ನಾಭರಣಗಳನ್ನು ಹೆಚ್ಚು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿರಿ. ದ್ರವರೂಪದ ವಸ್ತುಗಳ ವ್ಯಾಪಾರ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಕೆಲವೊಂದು ದಾಖಲೆಗಳನ್ನು ಪಡೆಯುವಾಗ ಹೆಚ್ಚು ಹಣ ಕೊಡಬೇಕಾದ ಸ್ಥಿತಿ ಇದೆ.

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ಕೈಬಿಟ್ಟು ಹೋಗಿದ್ದ ಹಿರಿಯರ ಆಸ್ತಿಯನ್ನು ಪುನಃ ಪಡೆಯಬಹುದು. ಯಾವುದೇ ವಿಷಯದಲ್ಲೂ ಅತಿಯಾದ ಉದ್ವೇಗವನ್ನು ಮಾಡಿಕೊಳ್ಳದಿರುವುದು ಬಹಳ ಉತ್ತಮ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಸಿಮೆಂಟು, ಮರಳು ಇತ್ಯಾದಿ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರಾಟ ಮಾಡುವವರ ಲಾಭ ಹೆಚ್ಚುತ್ತದೆ. ವಿದೇಶಿ ಕಂಪನಿಗಳ ಮೇಲೆ ಈಗ ಬಂಡವಾಳವನ್ನು ಹೂಡುವುದು ಹೆಚ್ಚಿನ ನಷ್ಟಕ್ಕೆ ಕಾರಣವಾಗಬಹುದು. ಪತ್ರಿಕಾರಂಗದವರಿಗೆ ಉತ್ತಮ ಹೆಸರು ಮಾಡಲು ಅವಕಾಶ  ದೊರೆಯುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ಪೂಜೆ-ಪುನಸ್ಕಾರಗಳನ್ನು ಮಾಡಲು ಮುಂದಾಗುವಿರಿ. ಹೆಣ್ಣು ಮಕ್ಕಳಿಗೆ ತವರುಮನೆಯಿಂದ ಉಡುಗೊರೆ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಹತ್ತಿರದ ಬಂಧುಗಳೊಡನೆ ಸುಧೀರ್ಘ ಸಮಾಲೋಚನೆಯಿಂದ ಕಾರ್ಯಸಿದ್ದಿ ಆಗುತ್ತದೆ. ಕೆಲವು ಮಹಿಳೆಯರ ಆಸೆ ಆಕಾಂಕ್ಷೆಗಳು ಈಡೇರಬಹುದು. ಬ್ಯಾಂಕ್‌ ಮತ್ತು  ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಯಿದೆ. ಹವ್ಯಾಸಿ ಬರಹಗಾರರಿಗೆ ಸೂಕ್ತ ಗೌರವ ದೊರೆಯುತ್ತದೆ. ಪ್ರಿಯ ವ್ಯಕ್ತಿಗಳ ಆಗಮನದಿಂದ ವೈಯಕ್ತಿಕ ಜೀವನದಲ್ಲಿ ಆಸಕ್ತಿಗಳು ಹೆಚ್ಚುತ್ತವೆ. ಬೆಂಕಿಯ ಸಮೀಪ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿರಿ. ಸರ್ಕಾರಿ ಕಚೇರಿಯ ಕೆಲಸಗಳು ಶೀಘ್ರವಾಗಿ ಆಗುತ್ತದೆ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)  

ವ್ಯಾಪಾರ-ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಲಾಭವನ್ನು ಕಾಣಬಹುದು. ಬಹಳ ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದ ಸಮಾಚಾರ ಕೇಳಿಬಂದು ಮನಸ್ಸಿನಲ್ಲಿ ಇದ್ದ ದುಗುಡಗಳು ಮರೆಯಾಗುತ್ತವೆ. ವೈದ್ಯರುಗಳಿಗೆ ಹೆಚ್ಚು ಸಂಪಾದನೆಯಾಗುವ ಕಾಲ. ಔಷಧಿಗಳನ್ನು ತಯಾರಿಸುವ ಕಂಪನಿಗಳಿಗೆ ಲಾಭ ಹೆಚ್ಚುತ್ತದೆ. ನಿಮ್ಮ ಕೆಲಸಗಳಿಗೆ ಸಹೋದರರಿಂದ ಸಹಾಯ ದೊರೆಯುವ ಸಾಧ್ಯತೆಗಳಿವೆ. ರಾಜಕೀಯಕ್ಕೆ ಸೇರ ಬೇಕೆನ್ನುವವರಿಗೆ ಅವಕಾಶಗಳು ದೊರೆಯುತ್ತವೆ. ಸಾಮಾಜಿಕ ಸೇವೆಯಲ್ಲಿ ನಿಮಗಿದ್ದ ಕಾಳಜಿಯನ್ನು ಜನರು ಗುರುತಿಸಿ ಗೌರವಿಸುವರು. ಕೆಲಸದಲ್ಲಿ ಭಿನ್ನಾಭಿಪ್ರಾಯಗಳು ಆದರೂ ಚಿಂತಿಸುವ ಅವಶ್ಯಕತೆ ಇಲ್ಲ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಾರಾಂತ್ಯಕ್ಕೆ ವಸ್ತ್ರಾಭರಣಗಳನ್ನು ಖರೀದಿ ಮಾಡುವ ಅವಕಾಶವಿದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಈ ರಾಶಿಯ ಮಕ್ಕಳು ಮತ್ತು ಯುವಕರು ವಿನಾಕಾರಣ ವಾದವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಆಸ್ತಿ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ಪ್ರವಚನಗಳನ್ನು ನೀಡಲು ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಹೋಗುವಿರಿ. ವಿದ್ಯಾರ್ಥಿಗಳಿಗೆ ಆಟಪಾಠಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಲೆಕ್ಕಪತ್ರಗಳಲ್ಲಿನ ತೊಡಕುಗಳು ಎದುರಾಗಬಹುದು. ಕಲಾವಿದರು ಮತ್ತು ಸಿನಿಮಾ ರಂಗದವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಇದೆ. ನೇಕಾರರಿಗೆ ಮತ್ತು ದರ್ಜಿಗಳಿಗೆ ಹೆಚ್ಚು ಲಾಭವಾಗುವ ಸಾಧ್ಯತೆಯಿದೆ. ಹಣದ ಒಳಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ಹೊರಗುತ್ತಿಗೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ತಾಯಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ವಿದೇಶಿ ಬಂಧುಗಳ ಆಗಮನವನ್ನು ನಿರೀಕ್ಷೆ ಮಾಡಬಹುದು. ನಿತ್ಯ ಕೆಲಸದ ಜೊತೆಗೆ ಸಂಸಾರದ ಕಡೆಗೂ ಗಮನ ಕೊಡುವುದು ಅತಿ ಅಗತ್ಯ. ಅನಿರೀಕ್ಷಿತ ಪ್ರಯಾಣ ಸಂಭವಿಸಿ ಹೆಚ್ಚು ಖರ್ಚಿಗೆ ನಾಂದಿಯಾಗಬಹುದು. ವ್ಯಾಪಾರ ವ್ಯವಹಾರಗಳು ಸಾಮಾನ್ಯ ಸ್ಥಿತಿಯಲ್ಲಿರುತ್ತವೆ. ಸಹೋದ್ಯೋಗಿಗಳೊಡನೆ ನಿಷ್ಠುರ ಎಂದಿಗೂ ಬೇಡ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಗುವ ಸಾಧ್ಯತೆ ಇದೆ. ಕಾರ್ಯಕ್ರಮ ನಿರೂಪಕರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.