ಭಾರತದಲ್ಲಿ ಲಕ್ಷಾಂತರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯ ದೇವಾಲಯ ರಾಮಾಯಣ ಕಾಲದ ಜೊತೆ ಬೆಸೆದುಕೊಂಡಿದೆ. ಹಾಗಾದರೆ, ಆ ದೇವಾಲಯಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇನು? ಇದರ ಇತಿಹಾಸವೆನೆಂಬುದನ್ನು ತಿಳಿಯೋಣ.
.ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ.ಸುತ್ತಾಣ: ವಾರಾಂತ್ಯ ಭೇಟಿಗೆ ಉತ್ತಮ ತಾಣ ಲೇಪಾಕ್ಷಿ.
ಆಂಧ್ರದ ಪ್ರಸಿದ್ಧ ದೇವಾಲಯಗಳ ಪೈಕಿ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಾಲಯ ಒಂದು. ಈ ದೇವಾಲಯವು 16ನೇ ಶತಮಾನದಲ್ಲಿ ನಿರ್ಮಾಣವಾದ ವಿಜಯನಗರ ಶಿಲ್ಪ ಕಲೆಯುಳ್ಳ ದೇವಾಲಯವಾಗಿದೆ. ಇಲ್ಲಿನ ಶಿಲ್ಪಕಲೆ, ಕಂಬಗಳ ಕೆತ್ತನೆ, ವಿಗ್ರಹಗಳಂತಹ ಭವ್ಯ ರಚನೆಗಳಿವೆ. ಇಲ್ಲಿನ ಹಲವು ದಂತ ಕಥೆಗಳು ದೇವಾಲಯದ ಮಹತ್ವವನ್ನು ಇನ್ನಷ್ಟು ಹೆಚ್ಚು ಮಾಡುತ್ತವೆ.

ದೇವಾಲಯದ ನಿರ್ಮಾಣದ ಬಗ್ಗೆ ಹತ್ತು ಹಲವು ಉಪಕಥೆಗಳಿವೆ. ಈ ದೇವಾಲಯವು ಕೂರ್ಮಸೀಲಂ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ದೇವಾಲಯದ ರಚನೆ ಆಮೆಯನ್ನು ಹೋಲುತ್ತದೆ ಎಂಬ ನಂಬಿಕೆ ಇದೆ. 16ನೇ ಶತಮಾನದಲ್ಲಿ ವಿಜಯನಗರದ ರಾಜನೊಂದಿಗೆ ವಿರೂಪಣ್ಣ ಹಾಗೂ ವೀರಣ್ಣ ಇಬ್ಬರು ಗೆಳೆಯರು ದೇವಾಲಯದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಸ್ಥಳೀಯ ಕಥೆಗಳು ಹೇಳುತ್ತವೆ.

ದೇವಾಲಯದಲ್ಲಿ ಒಟ್ಟು 70 ಕಂಬಗಳಿವೆ. ಪ್ರತಿ ಕಂಬದಲ್ಲಿಯು ವಿಶೇಷವಾದ ರಚನೆಗಳನ್ನು ಕೆತ್ತಲಾಗಿದೆ. 70 ಕಂಬಗಳ ಪೈಕಿ 1 ಕಂಬಕ್ಕೆ ಆಕಾಶಕಂಬವೆಂದು ಕರೆಯಲಾಗುತ್ತದೆ. ಇತರೆ 69 ಕಂಬಗಳಿಗಿಂತ 1 ಕಂಬವು ವಿಭಿನ್ನವಾಗಿದೆ. ಆಕಾಶನ ಕಂಬವು ನೆಲದ ಮೇಲಿಂದ ಅರ್ಧ ಇಂಚು ಎತ್ತರದಲ್ಲಿದ್ದು, ನೆಲದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಇದರ ತಳಭಾಗದಲ್ಲಿ ಬಟ್ಟೆಯ ತುಂಡನ್ನು ಸರಾಗವಾಗಿ ಎಳೆಯಬಹುದಾಗಿದೆ.

ರಾಮಾಯಣಕ್ಕೂ ಈ ದೇವಾಲಯಕ್ಕೂ ಸಂಬಂಧ:

ಸೀತೆಯನ್ನು ರಾವಣ ಅಪಹರಿಸುವಾಗ ‘ಜಟಾಯು’ ಎಂಬ ದೈತ್ಯ ಪಕ್ಷಿ ರಾವಣನನ್ನು ಈ ಸ್ಥಳದಲ್ಲಿ ಅಡ್ಡಗಟ್ಟುತ್ತದೆ. ಆಗ ರಾವಣನು ಜಟಾಯು ಜೊತೆಗೆ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ ಜಟಾಯು ತನ್ನ ರೆಕ್ಕೆಗಳನ್ನು ಕತ್ತರಿಸಿಕೊಂಡು ನೆಲಕ್ಕೆ ಬೀಳುತ್ತದೆ. ಆಗ ಸೀತೆ ರಾಮ ಬರುವವರೆಗೂ ನಿನ್ನ ಪ್ರಾಣ ಹೋಗದಿರಲಿ ಎಂದು ಆಶೀರ್ವಾದಿಸುತ್ತಾಳೆ. ಆಗ ರಾಮ ಬಂದಾಗ ಜಟಾಯಿ ಸೀತಾ ಮಾತೆಯನ್ನು ರಾವಣ ಅಪಹರಿಸಿಕೊಂಡು ಹೋದ ದಿಕ್ಕನ್ನು ತೋರಿಸುತ್ತದೆ. ಆಗ ರಾಮ ‘ಲೇ ಪಕ್ಷಿ’ ಎಂದು ಕೂಗುತ್ತಾನೆ. ಇದೇ ಹೆಸರು ಮುಂದೆ ಲೇಪಾಕ್ಷಿಯಾಯಿತು ಎಂದು ಹೇಳಲಾಗುತ್ತದೆ.

ದೇವಾಲಯದ ಪ್ರಮುಖ ಆಕರ್ಷಣೆಗಳು:

ದೇವಾಲಯದ ಪೂರ್ವ ದಿಕ್ಕಿನಲ್ಲಿ ನಾಗಲಿಂಗವಿದೆ. ಏಳು ಎಡೆಯ ಸರ್ಪ ಲಿಂಗವನ್ನು ಸುತ್ತಿಕೊಂಡಂತೆ ಕಲ್ಲಿನಿಂದ ಕೆತ್ತಲಾಗಿದೆ. ಈ ನಾಗಲಿಂಗ 27 ಅಡಿ ಇದ್ದು ಏಕಶಿಲೆಯಲ್ಲಿ ಕೆತ್ತಲಾಗಿದೆ. ವೀರಣ್ಣ ಮತ್ತು ವಿರೂಪಣ್ಣ ಈ ಲಿಂಗವನ್ನು ಕೆತ್ತಿದರು ಎಂಬ ಪ್ರತೀತಿ ಇದೆ.

ಈ ದೇವಾಲಯದಲ್ಲಿ ಶಿವನ ಮತ್ತೊಂದು ರೂಪವಾಗಿರುವ ವೀರಭದ್ರಸ್ವಾಮಿಯ ವಿಗ್ರಹವಿದೆ. ಈ ಕಲ್ಲಿನ ವಿಗ್ರಹ 12 ಅಡಿ ಎತ್ತರವಿದೆ. ದೇವಾಲಯದ ವಿವಿಧ ಮೂಲೆಗಳಲ್ಲಿ ಒಂದೊಂದು ವಿಗ್ರಹಗಳಿವೆ. ದೇವಾಲಯವು ವಿವಿಧ ಹಂತಗಳನ್ನು ಹೊಂದಿದೆ. ಪಾಪವಿನೇಶ್ವರ, ರಾಮಲಿಂಗ, ಭದ್ರಕಾಳಿ ಮತ್ತು ಹನುಮಲಿಂಗ ದೇವಾಲಯಗಳನ್ನು ನೋಡಬಹುದು. ಅಲ್ಲದೇ ಭಾರತದಲ್ಲಿಯೇ ಅತಿ ದೊಡ್ಡ ನಂದಿ ಇರುವ ಸ್ಥಳ ಎಂಬ ಖ್ಯಾತಿಗೆ ಲೇಪಾಕ್ಷಿ ಸಾಕ್ಷಿಯಾಗಿದೆ. ಇಲ್ಲಿರುವ ನಂದಿ 15 ಅಡಿ ಎತ್ತರ, 27 ಅಡಿ ಉದ್ದವಿದೆ. ನಾಗಲಿಂಗಕ್ಕೆ ಅಭಿಮುಖವಾಗಿ ಈ ನಂದಿಯಿದೆ.

ದೇವಾಲಯದ ಬಂಡೆಯ ಮೇಲೆ ಸೀತಾಮಾತೆಯ ಹೆಚ್ಚೆಗುರು ಕಾಣಬಹುದು. ಇದು 9 ಇಂಚು ಉದ್ದ ಮತ್ತು 6 ಇಂಚು ಅಗಲವಿದೆ. ರಾವಣನು ಸೀತಾಮಾತೆಯನ್ನು ಅಪಹರಣ ಮಾಡುವಾಗ ಸೀತೆ ತನ್ನ ಕಾಲನ್ನು ನೆಲಕ್ಕೆ ಇಟ್ಟ ಜಾಗವಿದು ಎಂದು ಕಥೆಗಳು ಹೇಳುತ್ತವೆ.

ವರ್ಷದ ಎಲ್ಲ ದಿನಗಳಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ದೇವಾಲಯ ತೆರೆದಿರುತ್ತದೆ.

ತಲುಪುವುದು ಹೇಗೆ:

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲೇಪಾಕ್ಷಿ 120 ಕಿ.ಮೀ. ದೂರದಲ್ಲಿದೆ.

ಹಿಂದೂಪುರ ರೈಲು ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿದೆ.

ರಸ್ತೆಯ ಮೂಲಕ ಎಲ್ಲಾ ಭಾಗದಿಂದಲೂ ಇಲ್ಲಿಗೆ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.