ಭಾನುವಾರ, ಜೂನ್ 26, 2022
29 °C

ಮಾಸ ಭವಿಷ್ಯ: 2021ರ ಜೂನ್ 1 ರಿಂದ 30ರವರೆಗೆ

ಮಾಸ ಭವಿಷ್ಯ Updated:

ಅಕ್ಷರ ಗಾತ್ರ : | |

ಮೇಷ

ಬುದ್ಧಿಬಲದಿಂದ ಪದೋನ್ನತಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಚಿಂತನೆ. ವಿರೋಧಿಗಳ ಟೀಕೆಗಳಿಗೆ ಕಿವಿಗೊಡದಿರಿ. ಉದ್ಯಮಿಗಳಿಗೆ ಲಾಭ ತಕ್ಷಣವೇ ದೊರಕದಿದ್ದರೂ ಸ್ಥಿರವಾಗಿ ಬರುತ್ತದೆ. ಹಣ ಹೂಡಿಕೆಗೆ ಮುನ್ನ ಯೋಚಿಸಿ.

ಶುಭ: 13, 22, 27

ಅಶುಭ: 04, 08, 20

ವೃಷಭ

ಮಾತು ಬಲ್ಲವನಿಗೆ ಜಗಳವಿಲ್ಲ. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು. ಅನ್ಯರ ಬಗ್ಗೆ ತಕ್ಷಣದ ತೀರ್ಮಾನ ಬೇಡ. ಆರೋಗ್ಯದ ಕಡೆ ಗಮನ ಇರಲಿ.

ಶುಭ: 02, 07, 18

ಅಶುಭ: 21, 27, 29

ಮಿಥುನ

ಸಂಗಾತಿಯ ಜೊತೆ ಬಾಂಧವ್ಯ ವೃದ್ಧಿಸುವುದು. ಜೊತೆಯಾಗಿ ಸಮಯ ಕಳೆಯಲು ಸಾಧ್ಯವಾಗುವುದು. ಇದರಿಂದ ಚೈತನ್ಯ ಇಮ್ಮಡಿಗೊಳ್ಳಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬರಬೇಕಿರುವ ಬಾಕಿ ಹಣ ಕೈ ಸೇರಲಿದೆ.

ಶುಭ: 09, 18, 26

ಅಶುಭ: 12, 21, 28

ಕರ್ಕಾಟಕ

ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್‌ ಚಾತುರ್ಯದಿಂದ ಇತರರನ್ನು ಗೆಲ್ಲುವಿರಿ. ಹೊಸ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಲಾಭ.

ಶುಭ: 06, 08, 09

ಅಶುಭ: 03, 05, 07

ಸಿಂಹ

ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ತಿಳಿದುಕೊಳ್ಳಿ.

ಶುಭ: 14, 20, 2

ಶುಭ: 10, 18, 22

ಕನ್ಯಾ

ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ಇದನ್ನು ತಡೆಯಲು ಸಂಗಾತಿಯೊಂದಿಗೆ ಚರ್ಚಿಸಿ. ನಿಮ್ಮ ನಾಯಕತ್ವದ ಗುಣಗಳನ್ನು ಮತ್ತು ಕೌಶಲ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವ್ಯಕ್ತಿಸಿ.

ಶುಭ: 03, 05, 08

ಅಶುಭ: 04, 06, 09

ತುಲಾ

ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲ. ನಿಮ್ಮ ಸೇವೆ ಅಥವಾ ಕೆಲಸಕ್ಕೆ ಪುರಸ್ಕಾರ ಸಿಗಲಿದೆ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.

ಶುಭ: 01, 06, 08

ಅಶುಭ: 02, 07, 09

ವೃಶ್ಚಿಕ

ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಅದಕ್ಕಾಗಿ ಈಗ ಹಣ ಖರ್ಚಾದರೂ ಆತಂಕ ಬೇಡ. ಮುಂದೆ ಒಳಿತಾಗುವುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಯಶಸ್ಸಿನ ದಾರಿ ಗುಟ್ಟಾಗಿರಲಿ.

ಶುಭ: 03, 06, 07

ಅಶುಭ: 02, 05, 09

ಧನಸ್ಸು

ದೊಡ್ಡ ಯೋಜನೆಯೊಂದು ನಿಮ್ಮ ಕೌಶಲ್ಯಕ್ಕೆ ಸವಾಲಾಗುವುದು. ಮೇಲಧಿಕಾರಿಗಳ ಸಹಾಯದಿಂದ ಅದನ್ನು ಯಶಸ್ವಿಯಾಗಿ ಪೂರೈಸುವಿರಿ. ಇದರಿಂದ ಪ್ರಶಂಸೆಗೆ ಒಳಗಾಗುವಿರಿ. ಉದ್ಯೋಗದಲ್ಲಿ ಬಡ್ತಿ.

ಶುಭ: 06, 15, 26

ಅಶುಭ: 11, 23, 29

ಮಕರ

ನಿಮ್ಮ ಸಮೀಪದ ಜನರು ಅಥವಾ ಬಂಧುಗಳು ನಿಮ್ಮ ಕಾರ್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ತಾಳ್ಮೆಯಿಂದಿರಿ.

ಶುಭ: 02, 05, 07

ಅಶುಭ: 06, 08, 09 

ಕುಂಭ

ಆಲಸ್ಯದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ. ಮೊದಲು ಅದರಿಂದ ಹೊರಗೆ ಬನ್ನಿ. ಸಂಬಂಧಗಳಲ್ಲಿ ಸಂತಸ ಇರುತ್ತದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿರಿ. ಇದರಿಂದ ನೆಮ್ಮದಿ.

ಶುಭ: 14, 26, 28

ಅಶುಭ: 11, 13, 26

ಮೀನ

ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಆ ಮೂಲಕ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಯತ್ನಿಸಿ. ಇದರಿಂದ ಯಶಸ್ಸು ನಿಮ್ಮದಾಗಲಿದೆ. ಸಂಬಂಧಿಕರ ಜತೆ ತಾಳ್ಮೆಯಿಂದ ವರ್ತಿಸಿ.

ಶುಭ: 11, 18, 24

ಅಶುಭ: 13, 27, 29

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.