ನವರಾತ್ರಿಯಲ್ಲಿ ವಿಶೇಷವಾಗಿ ನವದುರ್ಗೆಯರನ್ನು ಆರಾಧಿಸಲಾಗುತ್ತದೆ. ಅದರಂತೆ ನವರಾತ್ರಿಯ ಮತ್ತೊಂದು ವಿಶೇಷವೆಂದರೆ ಗೊಂಬೆಗಳು. ಗೊಂಬೆಗಳನ್ನು ಕೂರಿಸುವ ಹಬ್ಬವು ವಿಶೇಷ ಆಚರಣೆಯಾಗಿದೆ. ನಾಡಿನಾದ್ಯಂತ ವಿವಿಧ ರೀತಿಯ ಗೊಂಬೆಗಳನ್ನು ಮನೆಯಲ್ಲಿ, ದೇವಸ್ಥಾನಗಳಲ್ಲಿ ಕೂರಿಸಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಈ ಗೊಂಬೆಗಳನ್ನು ಸಂಸ್ಕೃತಿಯ ಪ್ರತೀಕವೆಂದೇ ಹೇಳಬಹುದು.

ಹಿಂದೂ ಸಂಪ್ರದಾಯದ ಪ್ರಕಾರ ದೇವರನ್ನು ವಿಗ್ರಹದ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಗೊಂಬೆಗಳನ್ನು ಕೂರಿಸುವುದು ದೇವರ ಆರಾಧನೆಯ ಭಾಗವಾಗಿದೆ ಎಂದು ಜ್ಯೋತಿಷ ಹೇಳುತ್ತದೆ. ಗೊಂಬೆ ಕೂರಿಸುವ ಹಿಂದಿನ ಮಹತ್ವವೇನು? ಈ ಪದ್ದತಿಯ ಹಿನ್ನೆಲೆ ಏನು? ಎಂಬ ಮಾಹಿತಿ ಇಲ್ಲಿದೆ.
.ಕಂಪ್ಲಿ: ದಸರಾ ಗೊಂಬೆ ಹೊಳಪಿಗೆ ನಾಲ್ಕು ದಶಕ .
ಇತಿಹಾಸ:

18ನೇ ಶತಮಾನದಲ್ಲಿ ಗೊಂಬೆ ಕೂರಿಸುವುದನ್ನು ಆರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಜಂಬೂ ಸವಾರಿಯಲ್ಲಿ ಪ್ರತ್ಯೇಕವಾಗಿ ಗೊಂಬೆ ಕೂರಿಸುವ ಪದ್ಧತಿಯನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಗೊಂಬೆ ಕೂರಿಸುವ ಹಬ್ಬವನ್ನು ಮೊದಲಿಗೆ ಮೈಸೂರಿನ ಅರಮನೆಯಲ್ಲಿ ಪ್ರಾರಂಭಿಸಲಾಯಿತು. ನಂತರ ಮೈಸೂರಿನ ಜನತೆ ತಮ್ಮ ತಮ್ಮ ಮನೆಗಳಲ್ಲಿ ರಾಜ, ರಾಣಿ, ಪಟ್ಟದ ಆನೆ ಇಡಲು ಪ್ರಾರಂಭಿಸಿದರು. ಈ ಹಬ್ಬವು ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿಯೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಈ ಹಬ್ಬವು ಆರಂಭವಾದ ಮೇಲೆ ಚನ್ನಪಟ್ಟಣದ ಗೊಂಬೆ ತಯಾರಿಕ ಕುಶಲಕರ್ಮಿಗಳು ಮರದಿಂದ ಗೊಂಬೆಗಳನ್ನು ತಯಾರಿಸಲು ಆರಂಭಿಸಿದರು. ಇದನ್ನು ಕಂಡ ಮೈಸೂರಿನ ಒಡೆಯರು ಆ ಕುಶಲಕರ್ಮಿಗಳಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಗೊಂಬೆ ಕೂರಿಸುವುದನ್ನು ಮುನ್ನೆಲೆಗೆ ತಂದರು ಹಾಗೂ ಇನ್ನಷ್ಟು ಪ್ರಸಿದ್ಧಿ ಪಡಿಸಿದರು ಎಂದು ಹೇಳಲಾಗುತ್ತದೆ.
.ಗೊಂಬೆ ಕೂರಿಸಿ, ಪರಂಪರೆ ರಕ್ಷಣೆ: ರಘುರಾಮ್ ವಾಜಪೇಯಿ.
ಗೊಂಬೆ ಹಬ್ಬದ ಮಹತ್ವವೇನು?

ಸಮಸ್ತ ಸೃಷ್ಟಿಯ ಮೂಲ ಒಂದೇ ಎಂದು ಸಾರುವುದೇ ಗೊಂಬೆ ಹಬ್ಬದ ಸಂಕೇತವಾಗಿದೆ. ಜಗತ್ತಿನ ಪತ್ರಿಯೊಂದು ಪ್ರಾಣಿ ಪಕ್ಷಿಗಳಿಂದ ಹಿಡಿದು ಮನುಷ್ಯರವರೆಗೂ ಎಲ್ಲವೂ ದೇವರ ಅನುಗ್ರವಾಗಿದ್ದು, ಯಾವುದನ್ನು ಕೇವಲವಾಗಿ ನೋಡಬಾರದು. ಪ್ರಕೃತಿಯಲ್ಲಿರುವ ಸಕಲ ಚರಾಚರಗಳೂ ಮುಖ್ಯವೆಂದು ಗೊಂಬೆಗಳ ಮೂಲಕ ಸಾರಲಾಗುತ್ತದೆ. ಗೊಂಬೆಯನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಒಳಿತಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.

ಪುರಾಣ ಕಥೆ ಎನು ಹೇಳುತ್ತದೆ?

ರಾಮಾಯಣ, ಮಹಾಭಾರತ, ವಿಷ್ಣುಪುರಾಣಗಳಲ್ಲಿ ಗೊಂಬೆ ಆರಾಧನೆಯ ಉಲ್ಲೇಖಗಳಿವೆ. ಮೊದಲಿಗೆ ಮೈಸೂರಿನ ಅರಮನೆಯಲ್ಲಿ ಆರಂಭವಾದ ಹಬ್ಬವು ನಂತರದ ದಿನಗಳಲ್ಲಿ ಸಾಂಪ್ರದಾಯಿಕ ಹಬ್ಬವಾಗಿ ರೂಪ ಪಡೆಯಿತು. ನಮ್ಮ ರಾಜ್ಯದ ಹಾಗೂ ನಮ್ಮ ಇತಿಹಾಸದ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸುವ ಉದ್ದೇಶ ಮೈಸೂರು ಅರಸರಿಗಿತ್ತು ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.