ಸೋಮವಾರ, ಏಪ್ರಿಲ್ 12, 2021
31 °C

ಮಕರ ರಾಶಿಗೆ ಶನಿ ಪ್ರವೇಶ: ನಿಮ್ಮ ರಾಶಿಗೆ ಶುಭವೇ, ಅಶುಭವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಜ್ಯೋತಿಷ ಶಾಸ್ತ್ರದಲ್ಲಿ ಶನಿಗೆ ಪ್ರಧಾನ ಸ್ಥಾನ. 30 ವರ್ಷಗಳ ನಂತರ ಇಡೀ ರಾಶಿ ಚಕ್ರದ ಪಯಣ ಮುಗಿಸಿ ಶನಿ ಮತ್ತೆ ತನ್ನ ಸ್ವಕ್ಷೇತ್ರ ಮಕರಕ್ಕೆ ಆಗಮಿಸುತ್ತಿದ್ದಾನೆ. 24–02–2020ರ ಶುಕ್ರವಾರ ಮಧ್ಯಾಹ್ನ 12.05 ಗಂಟೆಗೆ ಸೂರ್ಯಪುತ್ರನೂ ಆದ ಶನಿ ಮಕರ ಪ್ರವೇಶಿಸುತ್ತಿದ್ದಾನೆ. 

ಶನಿ ಕೆಡುಕುಂಟು ಮಾಡುವ ಗ್ರಹ ಎಂಬ ಭಾವನೆ ವ್ಯಾಪಕವಾಗಿದೆ. ಆದರೆ, ಕರ್ಮಕಾರಕನಾದ ಶನಿ ತಪ್ಪುಗಳನ್ನು ತಿದ್ದುವ ಗುರುವಿನ ಸ್ಥಾನವುಳ್ಳವನು. ಒಳ್ಳೆಯವರಿಗೆ ಒಳಿತು ಮಾಡುವುದು, ತಪ್ಪು ಹೆಜ್ಜೆ ಇಟ್ಟವರನ್ನು ಸರಿದಾರಿಗೆ ತರುವುದು ಶನಿಯ ವಿಶೇಷತೆ. ಧರ್ಮಮಾರ್ಗದಲ್ಲಿ ನಡೆಸುವುದು ಅವನ ಕಾಯಕ.

ಶನಿ ಮಕರ ಪ್ರವೇಶದಿಂದಾಗಿ ಧನು, ಮಕರ, ಕುಂಭ ರಾಶಿಗಳಿಗೆ ಸಾಡೇಸಾತ್ ಇರಲಿದೆ. ಕುಂಭಕ್ಕೆ ಸಾಡೇಸಾತ್‌ ಆರಂಭವಾದರೆ, ಮಕರಕ್ಕೆ ಮಧ್ಯಮ ಕಾಲವಾಗಿರುತ್ತದೆ. ಧನುಗೆ ಅಂತಿಮ ಕಾಲವಾಗಿದ್ದು ಇನ್ನೂ ಎರಡೂ ವರ್ಷಗಳ ಕಾಲ ಸಾಡೇಸಾತ್‌ ಇರಲಿದೆ. ಮಕರದಲ್ಲಿ ಶನಿ ಎರಡೂವರೆ ವರ್ಷಗಳ ಕಾಲ ಸ್ಥಿತನಾಗಿರಲಿದ್ದಾನೆ. 

ಈ ಬೆಳವಣಿಗೆಯಿಂದಾಗಿ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಇಲ್ಲಿ ದ್ವಾದಶ ರಾಶಿಗಳ ಫಲಾಫಲಗಳನ್ನು ಮಾತ್ರ ವಿಶ್ಲೇಷಿಸಲಾಗುತ್ತಿದೆ. 

ಯಾವ ರಾಶಿಗೆ ಏನು ಫಲ? 

ಮೇಷ 
ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುತ್ತದೆ. ಹೊಸ ಕೆಲಸದಿಂದ ಹೆಚ್ಚಿನ ಲಾಭವನ್ನು ಕಾಣುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಚಿಂತೆ ಮತ್ತು ಭೂಮಿ ವಿಚಾರದಲ್ಲಿ ನಿಮಗೆ ಜಯ ಉಂಟಾಗಲಿದೆ. 
ಪರಿಹಾರ: ದೇವಿ ದೇವಸ್ಥಾನಕ್ಕೆ ಕುಂಬಳಕಾಯಿ ದೀಪ ಹಚ್ಚುವುದರಿಂದ ಶುಭಫಲ ಕಾಣಬಹುದು. 

***

ವೃಷಭ ‌
ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ತೀರ್ಥಕ್ಷೇತ್ರದ ದರ್ಶನದಿಂದ ಮನಸ್ಸಿಗೆ ಸಂತೋಷ ಉಂಟಾಗಲಿದೆ. ಹಿರಿಯರ ಆರೋಗ್ಯದ ವಿಚಾರದ ಕಡೆ ಗಮನ ನೀಡಿ 
ಪರಿಹಾರ: ಶೃಂಗೇರಿ ಜಗದ್ಗುರುಗಳ ಪಾದಪೂಜೆ, ಕಾಳಹಸ್ತಿ ದೇವಸ್ಥಾನದ ದರ್ಶನದಿಂದ ಲಾಭ

***

ಮಿಥುನ
ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಚಿಂತೆ ಕಾಡಲಿದೆ. ಕೆಲಸದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಮುಂದಿನ ದಿನಗಳಲ್ಲಿ ವಿದೇಶ ಪ್ರಯಾಣದ ಸಾಧ್ಯತೆಗಳಿವೆ. 
ಪರಿಹಾರ: ರಾಮೇಶ್ವರದ ದರ್ಶನ, ಪಳನಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದರ್ಶನದಿಂದ ಸೌಖ್ಯ

***

ಕಟಕ 
ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ನಿಮಗೆ ದೊರಕಲಿವೆ. ಹೊಸ ಉದ್ಯಮ, ನೂತನ ಕೆಲಸಗಳಿಂದ ನಿಮಗೆ ಹೆಚ್ಚಿನ ಲಾಭ ಉಂಟಾಗಲಿದೆ. ವಿದೇಶ ಪ್ರಯಾಣ ಯೋಗವು ನಿಮಗೆ ಪ್ರಾಪ್ತಿಯಾಗಲಿದೆ. ತಂದೆ-ತಾಯಿಯರ ಆರೋಗ್ಯದಲ್ಲಿ ಹೆಚ್ಚಿನ ಗಮನ ಕೊಡುವುದು ಉತ್ತಮ
ಪರಿಹಾರ: ತಿರುಪತಿ ತಿಮ್ಮಪ್ಪನ ದರ್ಶನ, ಶೃಂಗೇರಿ ಜಗದ್ಗುರುಗಳ ಪಾದಪೂಜೆ, ಅನ್ನಪೂರ್ಣೇಶ್ವರಿ ದೇವಿಯ ಪ್ರಾರ್ಥನೆ ಮಾಡಿ. 

***

ಸಿಂಹ
ಉನ್ನತ ವ್ಯಾಸಂಗ ಮತ್ತು ಹೊಸ ಕೆಲಸವನ್ನು ನೀವು ಪಡೆಯುವಿರಿ. ನಿಮ್ಮಿಂದ ತಂದೆ-ತಾಯಿಯರಿಗೆ ಹೆಚ್ಚಿನ ಕೀರ್ತಿ ಮತ್ತು ಸಂತೋಷ ಉಂಟಾಗುವುವು. ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು. ಭೂಮಿ ಮತ್ತು ಮನೆ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. 
ಪರಿಹಾರ: ದೇವಿ ದರ್ಶನ, ಸುಬ್ರಹ್ಮಣ್ಯೇಶ್ವರ ದರ್ಶನದಿಂದ ಹೆಚ್ಚಿನ ಲಾಭವಿದೆ. 

***

ಕನ್ಯಾ 
ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆ ಉಂಟಾಗಲಿದೆ. ಭೂಮಿ ಅಥವಾ ಮನೆ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ತೊಂದರೆ ಉಂಟಾಗಲಿದೆ. ಮಕ್ಕಳ ಮತ್ತು ಹಿರಿಯರ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಚಿಂತೆ ಕಾಡಲಿದೆ. 
ಪರಿಹಾರ: ಏಕವಾರ ರುದ್ರಾಭಿಷೇಕ, ಶನಿ ಶಾಂತಿ ಮಾಡಿಸಿ

***

ತುಲಾ 
ತಂದೆ-ತಾಯಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಕಾಣುವಿರಿ. ವಾಹನದಲ್ಲಿ ಓಡಾಡುವಾಗ ಹೆಚ್ಚಿನ ಗಮನ ಕೊಡಬೇಕು. 
ಪರಿಹಾರ: ಮನೆ ದೇವರ ದರ್ಶನ, ಆಂಜನೇಯನ ಆರಾಧನೆ ಮಾಡುವುದು ಒಳಿತು. 

***

ವೃಶ್ಚಿಕ
ಕೆಲಸದಲ್ಲಿ ಬದಲಾವಣೆ ಸ್ವಲ್ಪಮಟ್ಟಿನ ಚಿಂತೆಯನ್ನು ಕಡಲಿಗೆ. ಕೋರ್ಟ್ ಮತ್ತು ಸರ್ಕಾರಿ ಕೆಲಸವನ್ನು ಮುಂದೂಡುವುದು ಉತ್ತಮ. ಬಂಧು-ಮಿತ್ರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. 
ಪರಿಹಾರ: ರಾಘವೇಂದ್ರ ಸ್ವಾಮಿಗಳ ಆರಾಧನೆ, ಆಂಜನೇಯನ ಆರಾಧನೆ ಮಾಡಿ. 

***

ಧನು
ಇಷ್ಟು ದಿನ ಧನು ರಾಶಿಯಲ್ಲಿದ್ದ ಶನಿ ಈಗ ಮಕರಕ್ಕೆ ಹೋಗುತ್ತಿದ್ದಾನೆ. ಸಾಡೇಸಾತ್‌ ಈಗ ಅಂತಿಮ ಹಂತಕ್ಕೆ ತಲುಪಿದೆ. ಮನೆ ಅಥವಾ ಆಸ್ತಿ ಖರೀದಿಯನ್ನು ಮುಂದೂಡುವುದು ಬಹಳಷ್ಟು ಉತ್ತಮ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಯೋಗವು ಪ್ರಾಪ್ತಿಯಾಗಲಿದೆ. ಕೆಲಸಕಾರ್ಯಗಳಲ್ಲಿ ಸುಮ್ಮನೆ ತಿರುಗಾಟ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಉಂಟಾಗಲಿದೆ. 
ಪರಿಹಾರ: ನಂಜುಂಡೇಶ್ವರನ ದರ್ಶನ ಮತ್ತು ಉಪ್ಪಿನ ತುಲಾಭಾರದಿಂದ ಒಳಿತಾಗಲಿದೆ. 

***

ಮಕರ 
ಶನಿಗೆ ಇದು ಸ್ವಕ್ಷೇತ್ರ. ಸಾಡೇಸಾತ್‌ ಮಧ್ಯಮ ಕಾಲದಲ್ಲಿದೆ. ನಿಮ್ಮ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಯಾಗಬಹುದು. ಏಪ್ರಿಲ್ ತಿಂಗಳ ನಂತರ ನಿಮಗೆ ಆರೋಗ್ಯ ಸುಧಾರಣೆಯಾಗಲಿದೆ. ಕೆಲಸಕಾರ್ಯಗಳಲ್ಲಿ ಜಯವನ್ನು ಕಾಣುತ್ತೀರಿ. ಮಕ್ಕಳ ವಿಚಾರದಲ್ಲಿ ಸಂತೋಷ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಯೂ ನಿಮಗೆ ಎದುರಾಗಲಿದೆ. 
ಪರಿಹಾರ: ಸಮುದ್ರ ಸ್ನಾನ, ಈಶ್ವರನ ದರ್ಶನ, ಅಮ್ಮನವರ ಆರಾಧನೆಯಿಂದ ಹೆಚ್ಚಿನ ಶುಭಫಲಗಳಿವೆ. 

***

ಕುಂಭ 
ಶನಿಯ ಚಲನೆಯಿಂದಾಗಿ ಕುಂಭಕ್ಕೆ ಸಾಡೇಸಾತ್‌ ಆರಂಭವಾಗಲಿದೆ. ಇದರಿಂದ ಕೆಡುಕುಂಟಾಗಲಿದೆ ಎಂದು ಭಾವಿಸಬೇಕಿಲ್ಲ. ಶನಿ ಒಳ್ಳೆಯದನ್ನೇ ಮಾಡುತ್ತಾನೆ. ಪಿತ್ರಾರ್ಜಿತ ಆಸ್ತಿಯ ನಿಮಗೆ ಪ್ರಾಪ್ತಿಯಾಗಲಿದೆ. ಸ್ನೇಹಿತರ ಸಹಾಯದಿಂದ ಹೊಸ ಉದ್ಯೋಗವು ಪ್ರಾಪ್ತಿಯಾಗುವ ಸಂಭವವಿದೆ. ವ್ಯಾಪಾರ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ಪುಣ್ಯಕ್ಷೇತ್ರಗಳ ದರ್ಶನ ಪ್ರಾಪ್ತಿಯಾಗಲಿದೆ. ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಕಂಡು ಉನ್ನತ ಸ್ಥಾನ ಮಾನಗಳು ಪ್ರಾಪ್ತಿಯಾಗಲಿವೆ. 
ಪರಿಹಾರ: ಏಕವಾರ ರುದ್ರಾಭಿಷೇಕ, ಆಂಜನೇಯನಿಗೆ ಪವಮಾನ ಅಭಿಷೇಕ, ದುರ್ಗಾಸಪ್ತಶತಿ ಶತ್ರು ಸಂಹಾರ ಪೂಜೆಯಿಂದ ಹೆಚ್ಚಿನ ಲಾಭ

***

ಮೀನ 
ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಜಯವನ್ನು ಕಾಣುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಮನಸ್ಸಿಗೆ ಚಿಂತೆ ಉಂಟುಮಾಡಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಒತ್ತಡವು ಕಂಡುಬರಲಿದೆ
ಪರಿಹಾರ: ಸುಂದರಕಾಂಡ ಪಾರಾಯಣ ಮತ್ತು ಶೃಂಗೇರಿ ಜಗದ್ಗುರುಗಳ ಪಾದಪೂಜೆ,  ಸೌಂದರ್ಯಲಹರಿ ಪಠಣದಿಂದ ಹೆಚ್ಚಿನ ಲಾಭವನ್ನು ಕಾಣುತ್ತೀರಿ

***

– ಸುಬ್ರಹ್ಮಣ್ಯ, ಮೈಸೂರು, 

ಮೊಬೈಲ್‌: 7022036917

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.