ಮಂಗಳವಾರ, ಏಪ್ರಿಲ್ 7, 2020
19 °C

ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಶಿವದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿವಿಡಿ ಭಜನೆ, ಜಾಗರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಹೊರವಲಯದಲ್ಲಿರುವ ಹಸ್ತಾ ಮಲ್ಲಿಕಾರ್ಜುನ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ವಿಶೇಷ ದರ್ಶನ ಪಡೆದರು. ಅಲ್ಲದೆ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಪಟ್ಟಣದಿಂದ ಕುಂಭ ಕಳಸದ ಮೆರವಣಿಗೆಯು ಸಂಭ್ರಮದಿಂದ ಸಾಗಿತು.

ಸಮಿತಿ ಅಧ್ಯಕ್ಷ ಪರಮೇಶ್ವರ ಹತ್ತರಕಿ, ಡಾ.ಶಂಕರ ಸುರವಸೆ, ವಿಠಲ ತಡಕಲ ಮತ್ತಿತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಆಗಮಿಸಿದ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿವೀಡಿ ಭಜನೆ ಜಾಗರಣೆ ಹಮ್ಮಿಕೊಳ್ಳಲಾಗಿತ್ತು.

ಚೆಕ್‌ಪೋಸ್ಟ್‌ ಹತ್ತಿರದ ನಿರಗುಡಿಯ ಮಲ್ಲಯ್ಯ ಮುತ್ತ್ಯಾನ ಆಶ್ರಮ, ಅಮರ್ಜಾ ಅಣೆಕಟ್ಟೆ ಆಶ್ರಮ ಹಾಗೂ ನಿರಗುಡಿ, ಸಾವಳೇಶ್ವರ, ಸಾಲೇಗಾಂವ ಆಶ್ರಮಕ್ಕೆ ದೂರದಿಂದ ಮಲ್ಲಯ್ಯ ಮುತ್ತ್ಯಾನ ಭಕ್ತರು ಆಗಮಿಸಿ ಶ್ರೀಗಳ ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು.

ಪಟ್ಟಣದ ಶರಣಮಂಟಪ, ಮಹಾದೇವಲಿಂಗ, ಹಿರೇಮಠ ಹಾಗೂ ನಿಂಬರ್ಗಾದ ಶರಣಬಸವೇಶ್ವರ ದೇವಸ್ಥಾನ, ರುದ್ರವಾಡಿ, ಸರಸಂಬಾ,ಇಕ್ಕಳಕಿ, ತಡಕಲ ಮಲ್ಲಿಕಾರ್ಜುನ ದೇವಾಲಯ, ನರೋಣಾದ ಕ್ಷೇಮಲಿಂಗೇಶ್ವರ ದೇವಸ್ಥಾನ, ಬಸವಣ್ಣ ಸಂಗೋಳಗಿ, ಧುತ್ತರಗಾಂವ, ಲಾಡ ಚಿಂಚೋಳಿ ಗ್ರಾಮದಲ್ಲಿನ ಶಿವ ದೇವಾಲಯಗಳು ಹಾಗೂ ಮಾದನ ಹಿಪ್ಪರಗಾದ ಶಿವಲಿಂಗೇಶ್ವರ ಮಠ, ಕಡಗಂಚಿ, ಭೂಸನೂರು, ನಿಂಬಾಳ, ಮಾಡಿಯಾಳ ,ಜಿಡಗಾ ಮಠಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುವದು ಕಂಡುಬಂತು. ಮಹಾ ಶಿವರಾತ್ರಿ ನಿಮಿತ್ತ ಉಪವಾಸ ವೃತಾಚರಣೆ ಹಾಗೂ ದೇವಸ್ಥಾನಗಳಲ್ಲಿ ರಾತ್ರಿವೀಡಿ ಸಂಗೀತ ಕಾರ್ಯಕ್ರಮ, ಭಜನೆ ಜಾಗರಣೆ, ಶಿವ ಪಾರಾಯಣ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)