ಸೋಮವಾರ, ಆಗಸ್ಟ್ 2, 2021
21 °C

ವಾರ ಭವಿಷ್ಯ | 21–06–2020 ರಿಂದ 27–06–2020 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 
***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಆತ್ಮಸ್ಥೈರ್ಯ ಕಡಿಮೆ ಇರುತ್ತದೆ. ಸಂಗಾತಿ ನಿಮಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳುವರು. ಬಂದು ಬಾಂಧವರಿಂದ ಜಾಣತನದಿಂದ ಸಹಾಯ ಪಡೆಯುವಿರಿ. ಆಸ್ತಿ ಬಗ್ಗೆ ತೊಂದರೆ ಕೊಡುತ್ತಿದ್ದ ಸೋದರಿಯರು ಈಗ ತಾವಾಗಿಯೇ ಸುಮ್ಮನಾಗುವರು. ಚರ್ಮದ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ. ಸಂಗಾತಿಗೆ ಅವರ ಕಡೆಯವರಿಂದ ಧನಸಹಾಯಬರಬಹುದು. ವೃತ್ತಿಯಲ್ಲಿ ಸ್ವಲ್ಪ ಒತ್ತಡ ಕಾಣಬಹುದು. ಕೆಲವು ಬರಹಗಾರರ ಕೃತಿಗಳು ಮುದ್ರಣ ಕಾಣುತ್ತವೆ. ಸಿದ್ಧ ಉಡುಪು ತಯಾರಿಸುವವರಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಬಹಳ ಉಲ್ಲಾಸದಿಂದ ಇರುವಿರಿ. ಧನದ ಹರಿವು ಏರುವಿಕೆಯ ಬಗ್ಗೆ ಸಮಾಚಾರ ದೊರೆಯುತ್ತದೆ. ಭಾಷಣಕಾರರಿಗೆ ಉತ್ತಮ ಭಾಷಣದ ವಸ್ತು ಸಿಕ್ಕು ಜನಮನ್ನಣೆ ಗಳಿಸುವರು. ಮಾಡುವ ಕೆಲಸಗಳಲ್ಲಿ ಬಹಳ ಚುರುಕಾಗಿರುವಿರಿ. ಆಸ್ತಿ ಮಾರಾಟದಿಂದ ಧನವನ್ನು ಒಗ್ಗೂಡಿಸುವಿರಿ. ಮಕ್ಕಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಪ್ರಸೂತಿ ತಜ್ಞರಿಗೆ ಬೇಡಿಕೆ ಬರಬಹುದು. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಕೃಷಿಕರಿಗೆ ಬೆಳೆಗೆ ತಕ್ಕ ಲಾಭ ಇರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ವಾರದ ಆರಂಭದಲ್ಲಿ ಜಡತ್ವ ಇರಬಹುದು. ತಾಯಿಗಾಗಿ ಅಥವಾ ಹಿರಿಯ ಅಕ್ಕನಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ. ಹಳೆಯ ಸಾಲಗಳನ್ನು ಈಗ ತೀರಿಸಬಹುದು. ಯಾರದೋ ಮುಲಾಜಿಗಾಗಿ ನಿಮ್ಮತನ ಕಳೆದುಕೊಳ್ಳಬೇಡಿ. ಬೀಜ ಉತ್ಪಾದಕರಿಗೆ ಉತ್ತಮ ಬೇಡಿಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಬೆಳವಣಿಗೆ ಸಹಿಸದವರು ಇರುತ್ತಾರೆ, ಅವರ ಬಗ್ಗೆ ಎಚ್ಚರದಿಂದಿರಿ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಆದಾಯಕ್ಕಿಂತ ಖರ್ಚು ಹೆಚ್ಚು ಬರಬಹುದು ಧನ ಸಮತೋಲನ ಕಾಯ್ದುಕೊಳ್ಳಿ. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಮಾತನಾಡಬಹುದು. ನೀವಾಡುವ ಮಾತು ನಿಮಗೇ ತಿರುಗುಬಾಣವಾಗಬಹುದು. ಒಡಹುಟ್ಟಿದವರು ಕೆಲವು ವಿಚಾರಗಳಲ್ಲಿ ನಿಮಗೆ ವಿರುದ್ಧವಾಗಿ ನಡೆಯುವರು. ಸ್ತ್ರೀಯರು ನಡೆಸುವ ವ್ಯವಹಾರಗಳು ನಿಧಾನವಾಗಿ ವಿಸ್ತರಿಸಿಕೊಳ್ಳುತ್ತವೆ. ಹೊಟ್ಟೆಯಲ್ಲಿ ವಾಯು ಪ್ರಕೋಪ ಕಾಣಬಹುದು. ಕೆಲವರಿಗೆ ಸಂಸಾರ ಭಾಗ್ಯ ಒದಗುವ ಸಾಧ್ಯತೆ ಇದೆ. ಗುರುತು ಪರಿಚಯವದವರಿಂದ ಕ್ರೀಡಾಪಟುಗಳಿಗೆ ಸೌಲಭ್ಯಗಳು ಅಥವಾ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ನಿಂತಿದ್ದ ವ್ಯವಹಾರಗಳು ಈಗ ಪುನಃ ಆರಂಭವಾಗುತ್ತವೆ. ಸರ್ಕಾರಕ್ಕೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಒಳಿತು ಇರುತ್ತದೆ. ಧನದ ಒಳಹರಿವು ನಿಧಾನವಾಗಿ ಆರಂಭವಾಗುತ್ತದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯಿಂದ ನಿಮಗೆ ಸಹಾಯ ಇರುತ್ತದೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಉತ್ತಮ ಕೆಲಸವಿರುತ್ತದೆ. ಮಕ್ಕಳ ನಡುವಿನ ಹೊಂದಾಣಿಕೆ ಕಡಿಮೆ ಇರುತ್ತದೆ. ಮೂಳೆ ನೋವು ಅಥವಾ ಶೀತ ಬಾಧೆ ಕಾಣಬಹುದು. ಸಂಗಾತಿಯು ನಿಮ್ಮೊಡನೆ ಮನಬಿಚ್ಚಿ ಮಾತನಾಡುವರು. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರ ವಿಸ್ತರಿಸುವುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಹಂಗಾಮಿ ವೃತ್ತಿಯಲ್ಲಿದ್ದ ಕೆಲವರಿಗೆ ಕೆಲಸ ಕಾಯಂ ಆಗುವ ಸಂದರ್ಭವಿದೆ. ಹಿರಿಯರ ಬೆಂಬಲದೊಂದಿಗೆ ಕೆಲವರಿಗೆ ಉದ್ಯೋಗದ ಸಾಧ್ಯತೆ. ಒಡಹುಟ್ಟಿದವರೊಡನೆ ವೈರತ್ವ ನಿಮಗೆ ನಷ್ಟ ತರಬಹುದು. ಆಸ್ತಿ ವಿಚಾರದಲ್ಲಿ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಮಕ್ಕಳ ಪ್ರಗತಿ ಮಂದಗತಿ ಎನಿಸಬಹುದು. ಬೆನ್ನು ನೋವು ನಿಮ್ಮನ್ನು ಕಾಡಬಹುದು. ದೂರದ ಬಂಧುಗಳಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಅನಿರೀಕ್ಷಿತ ಅಪಘಾತ ಎದುರಾಗಬಹುದು. ಆದ್ದರಿಂದ ಪ್ರಯಾಣದಲ್ಲಿ ಎಚ್ಚರ. ಕೆಲವು ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ ಇದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವೈಯಕ್ತಿಕ ಅಲಂಕಾರದ ಕಡೆಗೆ ಗಮನ ಹರಿಸುವಿರಿ. ಅತಿ ಮಾತಿನಿಂದ ಸಿಗುವ ಸೌಲಭ್ಯವನ್ನು ಕಳೆದುಕೊಳ್ಳುವಿರಿ, ಆದ್ದರಿಂದ ಮಾತಿನಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವ್ಯವಹಾರದಲ್ಲಿ ದಾಖಲೆಗಳ ಬಗ್ಗೆ ಸರಿಯಾಗಿ ಗಮನ ಕೊಡಿ. ಹರಿತವಾದ ಆಯುಧಗಳನ್ನು ಬಳಸುವವರು ಎಚ್ಚರವಾಗಿರಿ. ಸಂಗಾತಿಯ ಕಡೆಯವರು ಸಾಲಕ್ಕಾಗಿ ಬರಬಹುದು ಎಚ್ಚರ. ಆಭರಣ ವ್ಯಾಪಾರದಲ್ಲಿ ಮಂದಗತಿ. ಪಿತ್ರಾರ್ಜಿತ ಆಸ್ತಿಗಳ ದಾಖಲೆ ಸರಿಯಾಗಿ ಗಮನಿಸಿ. ಸರ್ಕಾರದಿಂದ ಬರಬೇಕಾದ ಸೌಲಭ್ಯ ಒದಗುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಕಳೆದುಹೋಗಿದ್ದ ಮಾನಸಿಕ ಸ್ಥೈರ್ಯವು ಸಂಗಾತಿಯ ಸಲಹೆಯಿಂದ ಪುನಃ ಬರುತ್ತದೆ. ಹಣದ ಒಳಹರಿವು ಅಷ್ಟೇನೂ ಇರುವುದಿಲ್ಲ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟ ಇದ್ದರೂ ಸಮಯದಲ್ಲಿ ನಿಮ್ಮ ಸಹಕಾರಕ್ಕೆ ಬರುವರು. ಕೃಷಿಭೂಮಿಯ ವಿಚಾರದಲ್ಲಿ ಹೊಂದಾಣಿಕೆ ಮೂಡುವುದು. ಮಕ್ಕಳಿಂದ ಸೂಕ್ತ ಸಹಾಯ ದೊರೆಯುವುದು. ಕೆಲವು ಪ್ರಮುಖ ಕೆಲಸಗಳು ನಿಧಾನವಾಗಬಹುದು. ತಾಯಿಗಾಗಿ ಅನಿರೀಕ್ಷಿತವಾಗಿ ಖರ್ಚು ಮಾಡಬೇಕಾಗಬಹುದು. ವೃತ್ತಿಯಲ್ಲಿ ಅಂತಹ ಒದ್ದಾಟಗಳಿರುವುದಿಲ್ಲ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಧಾರ್ಮಿಕ ಚಿಂತನೆಯ ಬಗ್ಗೆ ಗಮನ ಹರಿಯುತ್ತದೆ. ಹಣದ ಹರಿವು ಕಡಿಮೆಯಿದ್ದರೂ ಸಾಲ ಮಾಡುವಷ್ಟು ಕಡಿಮೆಯಾಗದು. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟವಿದ್ದರೂ ಸೂಕ್ತಸಮಯದಲ್ಲಿ ಅವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ಆಸ್ತಿ ಖರೀದಿಯ ವಿಚಾರದಲ್ಲಿ ಹಣ ಒಗ್ಗೂಡಿಸಿದ ನಂತರ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಶೀತ ಬಾಧೆ ಕಾಣಿಸಬಹುದು. ಸಂಗಾತಿಯ ಕೋಪಕ್ಕೆ ತಾಳ್ಮೆಯ ಉತ್ತರ ಒಳ್ಳೆಯದು. ಹಿರಿಯರೊಡನೆ ಅನುಬಂಧ ಉತ್ತಮ. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಹಣಕಾಸಿನ ಸ್ಥಿತಿ ಕೊಂಚ ಸುಧಾರಿಸುವ ಲಕ್ಷಣ ಕಾಣತೊಡಗುತ್ತದೆ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಅವರೊಡನೆ ವ್ಯವಹಾರ ಬೇಡ. ಇದ್ದುದರಲ್ಲೇ ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡುತ್ತದೆ. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಸರು ಬರುವ ಸಾಧ್ಯತೆಯಿದೆ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಸ್ವಲ್ಪ ಧೈರ್ಯ ಕಡಿಮೆಯಾದಂತೆ ಅನಿಸುತ್ತದೆ. ಹಣದ ಒಳಹರಿವು ಕಡಿಮೆ ಇರುತ್ತದೆ. ಖರ್ಚು–ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ನಿಂದನೆ ಇರಬಹುದು. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ. ಸಂಗಾತಿಯು ನಿಮ್ಮ ಚಟುವಟಿಕೆಗಳಿಗೆ ಸಹಕಾರ ನೀಡುವರು. ಉದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗಬಹುದು. ವಾರಾಂತ್ಯಕ್ಕೆ ಮನಸ್ಸಿನಲ್ಲಿ ಹುಮ್ಮಸ್ಸು ಬಂದು ಹೆಚ್ಚು ಕೆಲಸದಲ್ಲಿ ತೊಡಗುವಿರಿ. ಧರ್ಮಕಾರ್ಯ ಮಾಡುವವರಿಗೆ ಹೆಸರು ಬರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಣದ ಒಳಹರಿವು ಸುಧಾರಣೆಯತ್ತ ಸಾಗುವುದು. ಕೊಂಕು ಮಾತಿನಿಂದ ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಸಮೂಹದಲ್ಲಿ ಎಲ್ಲರ ಕೇಂದ್ರಬಿಂದುವಾಗಲು ಶ್ರಮಿಸುವಿರಿ. ನಿಮ್ಮ ವರ್ತನೆಯ ಬಗ್ಗೆ ನಿಮ್ಮವರಲ್ಲೇ ಅಸಮಾಧಾನ ಇರುತ್ತದೆ. ಕಣ್ಣಿನ ಸೋಂಕಿನ ಬಗ್ಗೆ ಎಚ್ಚರವಾಗಿರಿ. ವ್ಯವಹಾರದಲ್ಲಿ ಸಾಲಗಾರರು ವಸೂಲಿಗೆ ಬರುವರು, ಸಂಗಾತಿಯ ಸಹಕಾರದೊಂದಿಗೆ ಸಾಲ ತೀರಿಸಬಹುದು. ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ವ್ಯವಹಾರದಲ್ಲಿ ನಿಮಗೆ ಲಾಭವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.