ಭಾನುವಾರ, ನವೆಂಬರ್ 29, 2020
20 °C

ವಾರ ಭವಿಷ್ಯ: 22-11-2020ರಿಂದ 28-11-2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ರಾಜಕೀಯ ವಿಷಯದಲ್ಲಿ ಅತಿಯಾದ ಆಸಕ್ತಿ ಬೆಳೆದು ರಾಜಕೀಯ ಪ್ರವೇಶಿಸಲು ನಾಯಕರ ಹಿಂದೆ ಓಡಾಡುವಿರಿ. ಹಣದ ಒಳಹರಿವು ಸ್ವಲ್ಪ ಮಂದಗತಿ. ಖರ್ಚಿಗೆ ಕಡಿವಾಣದ ಅನಿವಾರ್ಯತೆ ಇರಲಿದೆ. ಸಿಹಿ ತಿಂಡಿ ವ್ಯಾಪಾರಿಗಳಿಗೆ ವ್ಯಾಪಾರ ಭರ್ಜರಿಯಾಗಿರಲಿದೆ. ಆರ್ಥಿಕ ಸಂಪನ್ಮೂಲಗಳ ಹುಡುಕಾಟ ನಡೆಸುವಿರಿ. ಸಮೂಹದಲ್ಲಿ ಮಾತನಾಡುವಾಗ ಎಚ್ಚರದಿಂದಿರಿ,  ಟೀಕೆಗೆ ಒಳಗಾಗದಂತೆ ಎಚ್ಚರ ವಹಿಸಿ. ವಿದೇಶಿ ಹಣದ ವಿನಿಮಯ ವ್ಯವಹಾರ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇರಲಿದೆ. ನೆಚ್ಚಿಕೊಂಡ ಕೃಷಿ ಬೆಳೆಗಳಲ್ಲಿ ಕಡಿಮೆ ಲಾಭ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಒತ್ತಡಕ್ಕೆ ಮಣಿಯದೆ ದೃಢ ಸಂಕಲ್ಪದಿಂದ ಕಾರ್ಯ ಮುಂದುವರಿಸಿ, ಇದು ನಿಮಗೆ ಉತ್ತಮ ಫಲ ಕೊಡುತ್ತದೆ. ವೃತ್ತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ, ಅದರಲ್ಲೂ ಅಧಿಕಾರಿ ವರ್ಗದವರ ವಿರುದ್ಧ ತಿರುಗಿ ಬೀಳಬೇಡಿ. ಕವಿಗಳಿಗೆ ಪುರಸ್ಕಾರ ದೊರೆಯುವ ಸಾಧ್ಯತೆ ಇದೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು ಎಚ್ಚರದಿಂದ ಇರಬೇಕು, ಇಲ್ಲವಾದಲ್ಲಿ ಆಪಾದನೆ ಬರುವ ಸಾಧ್ಯತೆ ಇದೆ. ಕಮಿಷನ್ ಏಜೆಂಟರಿಗೆ ನಿರೀಕ್ಷೆಗೂ ಮೀರಿ ಕಮಿಷನ್ ಹಣ ಬರಬಹುದು. ಕೃಷಿಕರಿಗೆ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. ಕೃಷಿಯ ಬಗ್ಗೆ ಬೇಕಾದ ಮಾಹಿತಿಗಳು ದೊರೆಯುತ್ತವೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಕ್ಕಳಿಂದ ನಿಮಗೆ ಗೌರವ ಆದರದ ಜೊತೆಗೆ ಧನಸಹಾಯವೂ ಇರುತ್ತದೆ. ಅಪೇಕ್ಷಿತ ನಿವೇಶನ ಪಡೆಯಲು ಈಗ ಸಕಾಲ. ಕಣ್ಣಿನ ಸೋಂಕಿನ ಬಗ್ಗೆ ಎಚ್ಚರ ವಹಿಸಿ. ಸಂಗಾತಿಯ ಕಷ್ಟಗಳಿಗೆ ಸ್ವಲ್ಪ ಧನಸಹಾಯ ಮಾಡಬೇಕಾ್ ಅನಿವಾರ್ಯತೆ ಬರಲಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಅಭಿವೃದ್ಧಿಯಲ್ಲಿ ಚೇತರಿಕೆ ಇರಲಿದೆ. ವ್ಯವಹಾರದಲ್ಲಿ ಎಲ್ಲರ ಸಹಾಯವು ದೊರೆತು ಸೂಕ್ತ ಸ್ಥಾನ ದೊರೆಯುತ್ತದೆ. ಹಿರಿಯರ ಮಾರ್ಗದರ್ಶನದಿಂದ ಆಗುತ್ತಿದ್ದ ನಷ್ಟಗಳು ತಪ್ಪುತ್ತವೆ. ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಿಸಿ ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಅನಿರೀಕ್ಷಿತ ಮೂಲಗಳಿಂದ ಧನ ಸಹಾಯ ಒದಗಿಬರುತ್ತದೆ. ಸಂಸಾರದಲ್ಲಿ ನಡೆಯುವ ಕಾವೇರಿದ ಮಾತುಗಳಿಗೆ ತಾಯಿಯ ಮೂಲಕ ಪರಿಹಾರ ಸಿಗಲಿದೆ. ಸಹೋದರಿಯರೊಡನೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ದೊರೆತು ಹೆಚ್ಚಿನ ಫಲಿತಾಂಶ ಸಿಗಲಿದೆ. ಮಕ್ಕಳ ಅಭಿವೃದ್ಧಿಯನ್ನು ಕಂಡು ಸಂತೋಷಿಸುವಿರಿ. ನಿಮ್ಮ ಹಿತಶತ್ರುಗಳ ಯಾರೆಂದು ಗೊತ್ತಾಗಿ ಅವರನ್ನು ಮಟ್ಟ ಹಾಕುವಿರಿ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ  ಅನಿರೀಕ್ಷಿತ  ಧನ ಲಾಭವಿರುತ್ತದೆ. ವಿದೇಶಗಳಲ್ಲಿ ಹಂಗಾಮಿ ಉದ್ಯೋಗದಲ್ಲಿರುವ ಕೆಲವರಿಗೆ ಉದ್ಯೋಗ ಖಾಯಮಾತಿ ಆಗುವ ಬಗ್ಗೆ ಸೂಚನೆ ಸಿಗುವುದು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಚುರುಕು ಮತ್ತು ಸಮಯೋಚಿತ ವ್ಯವಹಾರಗಳಿಂದಾಗಿ ಪ್ರಭಾವಿ ವ್ಯಕ್ತಿಗಳ ಒಡನಾಟ ದೊರೆಯುತ್ತದೆ. ಮೇಲಧಿಕಾರಿಗಳಿಂದ ನಿಮ್ಮ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತದೆ. ಉದ್ಯೋಗದಲ್ಲಿ ಏರಿಳಿತಗಳು ಕಂಡುಬಂದರೂ ಯಾವುದೇ ತೊಂದರೆಗಳಿರುವುದಿಲ್ಲ. ಆರ್ಥಿಕ ಸ್ಥಿತಿಯು ಉತ್ತಮ ಚೇತರಿಕೆ ಕಾಣಲಿದೆ. ಕಬ್ಬಿಣ ಮತ್ತು ಸ್ಟೀಲ್ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಬಂಧುಗಳಿಂದ ತಗಾದೆ ಬರಬಹುದು, ಇದನ್ನು ಮಾತಿನ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಶತ್ರುಗಳನ್ನು ನಿಗ್ರಹಿಸುವ ಅವಕಾಶವಿದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಧನದ ಒಳಹರಿವು ಉತ್ತಮವಾಗಿರಲಿದೆ. ನಿರೀಕ್ಷಿಸಿದ ಮೂಲಗಳಿಂದ ಧನ ಒದಗಿ ಬರುತ್ತದೆ. ಸವಿ ಮಾತುಗಳನ್ನಾಡಿ ಕೆಲಸಗಾರರಿಂದ ಕೆಲಸಗಳನ್ನು ಮಾಡಿಸುವಿರಿ. ಸ್ಥಿರಾಸ್ತಿ ಕೊಳ್ಳಲು ತಯಾರಿ ನಡೆಸುವಿರಿ. ಇದಕ್ಕೆ ತಾಯಿಯಿಂದ ಧನಸಹಾಯ  ದೊರೆಯುವುದು. ಸಂತಾನ ಅಪೇಕ್ಷಿತರಿಗೆ ಸ್ವಲ್ಪನಿರಾಸೆ ಇರುವುದು. ಸೀತಭಾದೆ ನಿರ್ಲಕ್ಷ್ಯ ಬೇಡ. ಕೋರ್ಟು ಕಚೇರಿ ಕೆಲಸಗಳಲ್ಲಿ ತೊಡಕು ಎದುರಾಗಬಹುದು. ತಂದೆಯೊಂದಿಗೆ ಸಂಬಂಧಗಳು ವ್ಯತ್ಯಾಸವಾಗಬಹುದು. ಉದ್ಯೋಗದಲ್ಲಿ ವೇತನ ಏರಿಕೆ ನಿರೀಕ್ಷಿಸಬಹುದು. ಹೈನುಗಾರಿಕೆ ಮಾಡುವವರಿಗೆ ಬರಬೇಕಿದ್ದ ಸಹಾಯಧನ ಬರಲಿದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ರಾಜಕೀಯ ವ್ಯಕ್ತಿಗಳಿಂದ ಕಿರುಕುಳ ಬರಬಹುದು. ಕೆಲವು ಪಾಲುದಾರರು ಹಾಗೂ ನಿಮ್ಮ ದ್ವಂದ್ವ ನಿಲುವಿನಿಂದಾಗಿ ವ್ಯವಹಾರದಲ್ಲಿ ಹಿನ್ನಡೆ ಕಾಣಬೇಕಾಗುತ್ತದೆ, ಆದರೂ ವ್ಯವಹಾರ ನಿಲ್ಲುವುದಿಲ್ಲ. ಬಂಧುಗಳ ಮಧ್ಯೆ ಇದ್ದ ವೈಷಮ್ಯ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರಲಿದೆ. ಹರಿತ ವಸ್ತುಗಳನ್ನು ಉಪಯೋಗಿಸುವಾಗ, ಬಂಧುಗಳೊಡನೆ ಮಾತನಾಡುವಾಗ ಎಚ್ಚರ ಇರಲಿ. ದೂರ ಪ್ರಯಾಣಕ್ಕೆ ನೀವು ವಾಹನ ಚಲಾಯಿಸುವುದು ಅಷ್ಟು ಒಳಿತಲ್ಲ. ಹಣದ ಒಳಹರಿವು ಮಂದಗತಿ.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ ಜೇಷ್ಠ)
ವೃತ್ತಿಯಲ್ಲಿ ನಿಮಗೆ ದೊರೆತ ಗೌರವ ಕಂಡು ನಿಮ್ಮ ಮೇಲಧಿಕಾರಿಗಳು ನಿಮಗೆ ಕಿರುಕುಳ ಕೊಡಬಹುದು. ವೈಯಕ್ತಿಕ  ಆದಾಯವು ನಿಧಾನ ಏರಿಕೆಯಾಗುತ್ತದೆ. ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಎದುರಾಗಬಹುದು. ವ್ಯವಹಾರಗಳ   ಜಂಜಾಟದಿಂದ ಬಿಡುಗಡೆ ಹೊಂದಲು ಯತ್ನಿಸುವಿರಿ. ವೈಯಕ್ತಿಕ ಗೌರವಕ್ಕೆ ಅತಿಯಾದ ಮಹತ್ವ ಕೊಡದೆ ಇರುವುದು ಬಹಳ ಉತ್ತಮ. ಹೊಸ ರೀತಿಯ ಕೃಷಿ ಮಾಡಲು ಉತ್ಸಾಹ ತೋರಿ, ಅದಕ್ಕೆ ಬೇಕಾದ ಮಾಹಿತಿ ಕಲೆ ಹಾಕುವಿರಿ. ಕ್ರೀಡಾಪಟುಗಳಿಗೆ ತರಬೇತಿ ದೊರೆತು ಉತ್ತಮ ಪ್ರದರ್ಶನ ನೀಡುವ ಯೋಗವಿದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)  
ವಿದ್ಯಾರ್ಥಿಗಳ ಅತಿಯಾದ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯುತ್ತದೆ. ಅಪರೂಪದ ಪುರಾತನ ವಸ್ತುಗಳನ್ನು ಖರೀದಿಸಲು ಆಸಕ್ತಿ ಬೆಳೆಯುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ಹಿರಿಯರ ಕಠಿಣ ಮಾತು ಮನೆಯಲ್ಲಿ ಗೊಂದಲ ಮೂಡಿಸುತ್ತದೆ. ಹಿರಿಯರಿಂದ ಬರಬೇಕಾಗಿದ್ದ ಆಸ್ತಿಗಳು ಒದಗುವ ಸಂಭವ ಇದೆ. ನಿಮ್ಮ ಆರ್ಥಿಕ ಸವಾಲುಗಳನ್ನು ಎದುರಿಸಲು ಕುಟುಂಬದಲ್ಲಿ  ಎಲ್ಲರೊಂದಿಗೆ ಚರ್ಚಿಸಿ ಸರಿಯಾದ ಯೋಜನೆಗಳನ್ನು ರೂಪಿಸಿರಿ. ವೃತ್ತಿಯಲ್ಲಿ ಸ್ತ್ರೀಯರಿಗೆ ಅಭಿವೃದ್ಧಿ ಹೆಚ್ಚಿರಲಿದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ತಪ್ಪು ಕಲ್ಪನೆಯಿಂದ ಕುಟುಂಬದಲ್ಲಿ ಉಂಟಾದ ತೊಂದರೆಗಳು ನಿವಾರಣೆಯಾಗುವ ಕಾಲ ಬಂದಿದೆ. ವ್ಯವಹಾರಗಳಲ್ಲಿ ಸ್ವಲ್ಪ ಅನುಕೂಲ ಉಂಟಾಗಿ ಆದಾಯದಲ್ಲಿ ಏರಿಕೆ ಕಾಣಬಹುದು. ಮಧ್ಯವರ್ತಿ ಕೆಲಸ ನಿರ್ವಹಿಸುವವರಿಗೆ ನಿರೀಕ್ಷಿತ ಫಲಿತಾಂಶ ದೊರೆತು ಆದಾಯ ಹೆಚ್ಚುತ್ತದೆ. ಮಹಿಳೆಯರೊಂದಿಗೆ ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ. ತಾಯಿಯಿಂದ ನಿಮ್ಮ ಕಷ್ಟದ ಸಮಯದಲ್ಲಿ ಧನಸಹಾಯ ಒದಗುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸುಲಭ ಜಯ ಇರುತ್ತದೆ. ಮಕ್ಕಳೊಡನೆ ಕಿರಿಕಿರಿ  ಹೆಚ್ಚಾಗಬಹುದು. ಬಟ್ಟೆ ವ್ಯಾಪಾರಿಗಳಿಗೆ ಆದಾಯ ಹೆಚ್ಚಲಿದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಈ ವಾರ ಸ್ವಲ್ಪ ಉಲ್ಲಾಸದಿಂದ ಇರುವಿರಿ. ಕೆಲಸಗಾರ ಬಳಿ ಸ್ವಲ್ಪ ಕಾಠಿಣ್ಯದಿಂದ ಇದ್ದಲ್ಲಿ ನಿಮ್ಮ ಕೆಲಸಗಳು ಸರಾಗವಾಗಿ ಆಗುವುವು. ತರಕಾರಿ ಬೆಳೆಗಾರರಿಗೆ ಉತ್ತಮ ಲಾಭ ಸಿಗುವ ಸಾಧ್ಯತೆಯಿದೆ. ಕೃಷಿಕರು ತಮ್ಮ ಕೃಷಿ ಆಯುಧಗಳನ್ನು ಬಳಸುವಾಗ ಎಚ್ಚರ ವಹಿಸಿ. ಸಹದ್ಯೋಗಿಗಳೊಡನೆ ಸಣ್ಣಪುಟ್ಟ ವಿರಸ ಬರಬಹುದು, ಅದನ್ನು ಆರಂಭದಲ್ಲಿ ನಿವಾರಿಸಿಕೊಳ್ಳುವುದು ಉತ್ತಮ. ಶೀತಸಂಬಂಧಿ ಖಾಯಿಲೆಗಳು ಕಾಡಬಹುದು. ಸಂಗಾತಿಯ ಉದ್ಯೋಗದಲ್ಲಿ ಸ್ಥಿರತೆ ಕಾಣಬಹುದು. ಆದಾಯ ಮತ್ತು ಖರ್ಚು ಸಮವಿರಲಿದೆ. ವಾರಾಂತ್ಯಕ್ಕೆ ಸವಿ ಭೋಜನದ ಯೋಗವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಎಲೆಕ್ಟ್ರಾನಿಕ್ ಉದ್ಯಮಗಳನ್ನು ನಡೆಸುವವರಿಗೆ ಉತ್ಪಾದನೆ ಹೆಚ್ಚುತ್ತದೆ. ಧನಾದಾಯವು ಹೆಚ್ಚಾಗಿ ಆರ್ಥಿಕ ಸ್ಥಿರತೆ ಮೂಡುತ್ತದೆ. ಲೋಹದ ಆಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಆದಾಯ ಹೆಚ್ಚಲಿದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಮಾತಿನ ಚಕಮಕಿ ನಡೆದು ಲಾಭಾಂಶ ಕಡಿಮೆಯಾಗುವ ಸಂದರ್ಭವಿದೆ. ಅತಿ ಉನ್ನತ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳು ದುಂದು ವೆಚ್ಚಕ್ಕೆ  ಸಂಬಂಧಿಸಿದ ಆಪಾದನೆ ಎದುರಿಸಬೇಕಾದ ಸಂದರ್ಭವಿದೆ. ವಾಹನ ಮಾರಾಟಗಾರರು ನಿಧಾನಗತಿಯ ಪ್ರಗತಿ ಕಾಣಬಹುದು. ವಿದ್ಯಾಭ್ಯಾಸದಲ್ಲಿ ನಿಮ್ಮ ಆಯ್ಕೆಯು ಉತ್ತಮವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.