ಮಂಗಳವಾರ, ಮಾರ್ಚ್ 28, 2023
23 °C

ವಾರ ಭವಿಷ್ಯ: 6-9-2020ರಿಂದ 12-9-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ ಅವರ ಸಂಪರ್ಕಕ್ಕೆ 81973 04680

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ವ್ಯವಹಾರವು ಅನಿರೀಕ್ಷಿತ ತಿರುವು ಪಡೆದು ಅಭಿವೃದ್ಧಿಯ ಪಥಕ್ಕೆ ಬರಲಿದೆ. ನಿರೀಕ್ಷಿತ ಆದಾಯ. ಸರ್ಕಾರದಿಂದ ಆಗಬೇಕಾದ ಕೆಲಸಗಳಲ್ಲಿ ವಿಳಂಬ. ಸಂಗಾತಿಯ ಸಲಹೆಗಳು ಅತಿ ಉಪಯುಕ್ತ. ವಾರದ ಆರಂಭದಲ್ಲಿ ತಾಳ್ಮೆಯಿಂದ ಇದ್ದು, ವಾರದ ಮಧ್ಯದಲ್ಲಿ ಅತ್ಯಂತ ಕಠಿಣವಾಗಿರುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಅವರ ಆಸೆ ಆಕಾಂಕ್ಷಿಗಳು ಈಡೇರುತ್ತವೆ. ಕಣ್ಣಿನ ತೊಂದರೆ ನಿರ್ಲಕ್ಷ್ಯ ಬೇಡ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕೆಲವು ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ವಾಹನ ದುರಸ್ತಿಯ ಬಗ್ಗೆ ಗಮನ ಕೊಡುವಿರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗಾಗಿ ಪ್ರಶಂಸೆ ದೊರೆಯುತ್ತದೆ. ಹೊಸದಾಗಿ ಉದ್ಯಮ ಆರಂಭಿಸಿರುವವರಿಗೆ ಸೂಕ್ತ ರಿಯಾಯಿತಿಗಳು ದೊರೆಯುತ್ತವೆ. ರಾಜಕೀಯದಲ್ಲಿರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ. ಮಕ್ಕಳ ಅಭಿವೃದ್ಧಿ ಉತ್ತಮವಾಗಿರುತ್ತದೆ. ಹಿರಿಯರ ಆರೋಗ್ಯ ಸುಧಾರಣೆಯಿಂದ ಮನೆಯಲ್ಲಿ ನೆಮ್ಮದಿ. ಗಣಿ ಉದ್ಯಮ ನಡೆಸುವವರಿಗೆ ಇದ್ದ ತೊಂದರೆಗಳು ನಿವಾರಣೆಯಾಗುತ್ತವೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಹಿಳೆಯರ ಬಹಳ ದಿನಗಳ ಬೇಡಿಕೆ ಈಡೇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಹಿರಿಯ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಲಿದೆ. ವಿಜ್ಞಾನಿಗಳಿಗೆ ಅವರ ಸಂಶೋಧನೆಯ ಬಗ್ಗೆ ನಂಬಿಕೆ ಹೆಚ್ಚುತ್ತದೆ. ಕಿರಿಯ ವಿಜ್ಞಾನಿಗಳಿಗೆ ಸಂಶೋಧನಾ ಭತ್ಯೆಗಳು ದೊರೆಯುತ್ತವೆ. ಸಂಗಾತಿಯ ಜೊತೆಗೆ ಕಾವೇರಿದ ಮಾತಾಗಬಹುದು. ಆಸ್ತಿ ದಾಖಲಾತಿಯ ಬಗ್ಗೆ ಇದ್ದ ತಾಕಲಾಟಗಳು ನಿವಾರಣೆ ಆಗುತ್ತವೆ. ಧಾನ್ಯ ಬೀಜಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಲಿದೆ. ಒಡಹುಟ್ಟಿದವರಿಗೆ ಸಹಾಯಮಾಡಿ ಸಂತೋಷಪಡುವಿರಿ.

**
ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ದೂರಾಲೋಚನೆಯಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು. ದೂರಪ್ರಯಾಣ ಮಾಡಬೇಡಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ತರಕಾರಿ ಮತ್ತು ಹೂವಿನ ಬೆಳೆಗಾರರಿಗೆ ಆದಾಯದಲ್ಲಿ ಏರಿಕೆ. ಸಂಗಾತಿಯ ಮನಸ್ಸಿನ ತೃಪ್ತಿಗಾಗಿ ಮನೆಯಲ್ಲಿ ದೇವತಾ ಕಾರ್ಯ ಮಾಡುವಿರಿ. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣಗಳು ಬಂದೇ ಬರುತ್ತವೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯದ ಸಾಧ್ಯತೆ ಇದೆ. ಹೈನುಗಾರಿಕೆಯ ಉತ್ಪನ್ನಗಳನ್ನು ಮಾರುವವರಿಗೆ ಆದಾಯದಲ್ಲಿ ಏರಿಕೆ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಮಕ್ಕಳೊಂದಿಗೆ ವಾದ-ವಿವಾದ ಮಾಡದಿರುವುದು ಉತ್ತಮ. ಸ್ತ್ರೀಯರಿಗೆ ಸಾಲ ಕೊಡುವುದು ಬೇಡ. ಸ್ತ್ರೀಯರೊಂದಿಗೆ ವ್ಯವಹಾರ ಮಾಡುವಾಗ ಬಹಳ ಎಚ್ಚರವಿರಲಿ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ವ್ಯವಹಾರ ಕಡಿಮೆಯಿದ್ದರೂ ಲಾಭಕ್ಕೆ ಕೊರತೆ ಇಲ್ಲ. ಉಸಿರಾಟದ ತೊಂದರೆ ಇರುವವರು ಸ್ವಲ್ಪ ಎಚ್ಚರದಿಂದಿರಿ. ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸಾಮಾಜಿಕ ಕಾರ್ಯಕರ್ತರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಾನ ಭದ್ರತೆ ಇರುತ್ತದೆ.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಪಡೆದು ಕಾರ್ಯಸಾಧನೆ ಮಾಡುವಿರಿ. ಹಿರಿಯ ಅಧಿಕಾರಿಗಳಿಂದ ಪ್ರಸಂಶೆಯ ಮಾತುಗಳನ್ನು ಕೇಳುವಿರಿ. ನದಿ ಸಮುದ್ರ ಮುಂತಾದ ಕಡೆಗಳಲ್ಲಿ ಕೆಲಸ ಮಾಡುವವರು ಎಚ್ಚರದಿಂದಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ವ್ಯವಹಾರ ವೃದ್ಧಿಸಿ, ಆದಾಯ ಹೆಚ್ಚುತ್ತದೆ. ಮಕ್ಕಳಿಗೆ ಆರ್ಥಿಕ ಅನುಕೂಲತೆಗಳು ಹೆಚ್ಚುತ್ತವೆ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡುತ್ತದೆ. ಮಿತ್ರರ ಸಹಕಾರದಿಂದ ವ್ಯವಹಾರಗಳು ಸರಿಯಾಗಿ ಮುನ್ನಡೆಯುತ್ತದೆ. ಲೋಹದ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ವೃದ್ಧಿ.

**
ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3).
ದೈನಂದಿನ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ಆಸ್ತಿ ವಿಷಯದಲ್ಲಿ ಸ್ವಲ್ಪ ಗೊಂದಲಗಳು ಏಳಬಹುದು. ನಿಮ್ಮ ವ್ಯವಹಾರದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇದ್ದು, ಲಾಭ ತರುತ್ತವೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಕೃಷಿಗೆ ಸಂಬಂಧಿತ ಯಂತ್ರಗಳನ್ನು ಇಟ್ಟಿರುವವರಿಗೆ ಅದರಿಂದ ಆದಾಯ ಬರುತ್ತದೆ. ಕೃಷಿ ಚಟುವಟಿಕೆಗಳು ಆರಂಭಗೊಂಡು, ರೈತಾಪಿಗಳಿಗೆ ಸಂತೋಷವಿರುತ್ತದೆ. ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚುವುದು. ಸ್ತ್ರೀಯರ ಆಲಂಕಾರಿಕ ವಸ್ತುಗಳನ್ನು ಮಾರುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ.

**
ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಕೃಷಿ ಸಾಧನ ತಯಾರಿಕಾ ಅಥವಾ ಬೀಜೋತ್ಪಾದನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ತಾಳ್ಮೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಸಿದ್ಧಪಡಿಸಿದ ಆಹಾರ ವಸ್ತುಗಳ ಮಾರಾಟದಲ್ಲಿ ಲಾಭ ಇರಲಿದೆ. ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಉದ್ಯೋಗದ ಭಾಗ್ಯವು ಕೆಲವು ದಿನಗಳ ನಂತರ ಸಿಗುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಹಣದ ಹರಿವು ನಿಧಾನ ಏರಿಕೆಯ ಹಂತ ತಲುಪುತ್ತದೆ.

**
ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಯಂತ್ರೋಪಕರಣ ತಜ್ಞರಿಗೆ ಹೊಸ ಅವಕಾಶಗಳು ಒದಗುತ್ತವೆ. ಬಿಡುವಿಲ್ಲದ ಕೆಲಸ ದೊರೆತು ಆದಾಯಕ್ಕೆ ದಾರಿಯಾಗುತ್ತದೆ. ಯಂತ್ರ ಸ್ಥಾಪಕರು, ಯಂತ್ರಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಅವಕಾಶ ಬರುತ್ತವೆ. ಕೃಷಿಭೂಮಿ ಕೊಳ್ಳಲು ತಯಾರಿ ಮಾಡುವಿರಿ. ತಂದೆಯಿಂದ ವ್ಯವಹಾರದ ಸೂಕ್ಷ್ಮತೆಗಳು ತಿಳಿಯಲಿವೆ. ತೆರಿಗೆ ತಜ್ಞರಿಗೆ ಹೆಚ್ಚಿನ ಕೆಲಸಗಳು ಒದಗಿಬರುತ್ತವೆ. ಹೊಸ ಬಗೆಯ ಆಭರಣ ತಯಾರಿಸುವವರಿಗೆ ಬೇಡಿಕೆ ಬರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವಿರಿ. ಸಂಸಾರದಲ್ಲಿ ಇದ್ದ ಕಿರಿಕಿರಿ ಹೋಗಿ, ಪ್ರಶಾಂತತೆ ನೆಲೆಸಲಿದೆ.

**
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) 
ರಾಜಕೀಯ ವ್ಯಕ್ತಿಗಳಿಗೆ ಅದರಲ್ಲೂ ಮಹಿಳಾ ರಾಜಕಾರಣಿಗಳಿಗೆ ಸ್ಥಾನಮಾನಗಳು ಸಿಗುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಮನೆಯಲ್ಲಿ ಚರ್ಚೆ ಆಗಬಹುದು, ಸಂಯಮದಿಂದ ಇದ್ದಲ್ಲಿ ಸುಗಮವಾಗಿ ಬಗೆಹರಿಯುತ್ತದೆ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಗಣಿಯಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಿ. ಸರ್ಕಾರಿ ಸಾಲಗಳನ್ನು ಪಡೆದು ಕೈ ಸಾಲಗಳನ್ನು ತೀರಿಸಬಹುದು. ವೈಯಕ್ತಿಕ ದಾಖಲೆಗಳನ್ನು ಜೋಪಾನಮಾಡಿ.

**
ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ದ್ವಿದಳ ಧಾನ್ಯಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿ. ಕಟ್ಟಿದ ಮನೆ ಕೊಳ್ಳುವ ಬಗ್ಗೆ ಹುಡುಕಾಟ ನಡೆಸುವಿರಿ. ರಾಜಕೀಯಕ್ಕೆ ಸೇರಲು ಉತ್ಸುಕರಾಗಿರುವವರಿಗೆ ಉತ್ತಮ ಅವಕಾಶ ಒದಗಿ ಬರುತ್ತದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಸ್ತ್ರೀಯರಿಗೆ ಗೌರವಾದರಗಳು ದೊರೆಯುತ್ತವೆ. ಬಹಳ ದಿನಗಳಿಂದ ನಿಂತಿದ್ದ ಸರ್ಕಾರಿ ಕೆಲಸಗಳು ಪರಿಚಿತರ ಸಹಾಯದಿಂದ ವೇಗ ಪಡೆಯಲಿವೆ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದೇ ಇರುತ್ತದೆ. ವಾರ್ತಾ ವಾಚಕರಿಗೆ ಬೇಡಿಕೆ ಹೆಚ್ಚುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ದಟ್ಟವಾಗಿದೆ.

**
ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ).
ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅತೀ ಅಗತ್ಯ. ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಹೆಣಗಾಡುವಿರಿ. ಔಷಧಿ ವ್ಯಾಪಾರಿಗಳಿಗೆ ಪ್ರಗತಿ. ನಿಂತಿದ್ದ ವಿವಾಹದ ಪ್ರಸ್ತಾಪಗಳು ಪುನಃ ಆರಂಭಗೊಂಡು ಸಂತೋಷ ನೆಲೆಸಲಿದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಉತ್ತಮ ಮಟ್ಟದಲ್ಲಿ ಇರುತ್ತದೆ. ಶೀತ ಸಂಬಂಧಿ ಕಾಯಿಲೆಗಳು ಸ್ವಲ್ಪ ಬಾಧಿಸಬಹುದು. ವೃತ್ತಿಯಲ್ಲಿದ್ದ ಜಂಜಾಟಗಳು ಪರಿಹಾರವಾಗುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಮಾನಸಿಕ ನೆಮ್ಮದಿಗಾಗಿ ದೈವ ಧ್ಯಾನ ಮಾಡಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.