ಮಂಗಳವಾರ, ಮಾರ್ಚ್ 2, 2021
19 °C

ವಾರ ಭವಿಷ್ಯ: 17-01-2021ರಿಂದ 23-01-2021 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕಕ್ಕೆ
8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ತಾಯಿಯೊಡನೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಪ್ರತಿಭಾವಂತ ಸ್ತ್ರೀಯರಿಗೆ ವಿಶೇಷ ಗೌರವ ಮನ್ನಣೆ ದೊರೆಯುತ್ತದೆ. ಉದ್ಯೋಗದಲ್ಲಿ ಯಶಸ್ಸು. ವಿದ್ಯಾರ್ಥಿಗಳಿಗೆ ಶ್ರಮ ಹೆಚ್ಚಾಗುವುದು. ಪೂರ್ವಿಕರ ಆಸ್ತಿ ಬರುವ ಸಾಧ್ಯತೆ ಇದೆ. ವಿದ್ಯುತ್ ಗುತ್ತಿಗೆದಾರರಿಗೆ ಕೆಲಸಗಾರರಿಂದ ಇದ್ದ ತೊಂದರೆಗಳು ನಿವಾರಣೆಯಾಗುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಧನಲಾಭದ ಸಾಧ್ಯತೆ ಇದೆ. ಬಂಗಾರದ ಒಡವೆಗಳ ಸಗಟು ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ. ಶೃಂಗಾರ ಸಾಮಗ್ರಿಗಳ ತಯಾರಕರಿಗೆ ಹೊಸ ತಯಾರಿಕಾ ಆದೇಶಗಳು ದೊರೆಯುತ್ತವೆ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ತೋಟದ ಹಾಗೂ ವಾಣಿಜ್ಯ ಬೆಳೆ ಬೆಳೆಯುವವರಿಗೆ ಉತ್ತಮ ಲಾಭವಿದೆ. ಅರಣ್ಯ ರಕ್ಷಕರಿಗೆ ಮತ್ತು ವನ ಪಾಲಕರಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತವೆ. ಕೆಲವು ಕ್ರೀಡಾಪಟುಗಳಿಗೆ ಹಂತಹಂತವಾಗಿ ಮೇಲಿರುವ ಅವಕಾಶವಿದೆ. ಆದಾಯ ಹುಡುಕಾಟದಲ್ಲಿ ಇರುವವರಿಗೆ ಅಲ್ಪ ಯಶಸ್ಸು ಸಿಗಲಿದೆ. ಕಲಾವಿದರು ಮತ್ತು ನಟರಿಗೆ ಬಾಕಿ ಸಂಭಾವನೆಯ ಹಣ ಬರುತ್ತದೆ. ದ್ರವರೂಪದ ಆಹಾರವಸ್ತುಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಲಾಭವಿದೆ. ಹಿರಿಯರ ಆಸ್ತಿಗಳ ದಾಖಲೆಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಹಿರಿಯರು ಒಪ್ಪಲಿದ್ದಾರೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವೃತ್ತಿಯಲ್ಲಿ ಸ್ವಲ್ಪ ಒದ್ದಾಟ ಎನಿಸಿದರೂ ಏನೂ ತೊಂದರೆ ಇಲ್ಲ. ಹಣಕಾಸಿನ ಪರಿಸ್ಥಿತಿಯಲ್ಲಿ ಯಾವುದೇ ಏರಿಳಿತವು ಇರುವುದಿಲ್ಲ. ವಿದ್ಯಾರ್ಥಿಗಳು ಕಲಿಕೆಗಾಗಿ ಹೆಚ್ಚಿನ ಕಷ್ಟಪಡಬೇಕಾದ ಸಂದರ್ಭವಿದೆ. ರೈತಾಪಿ ವರ್ಗದವರಿಗೆ ಬೆಳೆ ಮಾರಾಟದಿಂದ ಬರಬೇಕಾದ ಹಣ ಬರುವುದು ಸ್ವಲ್ಪ ನಿಧಾನ ಅನಿಸಿದರೂ ಬಂದೇ ಬರುತ್ತದೆ. ಕೋರ್ಟುಗಳಲ್ಲಿ ಇದ್ದ ದಾವೆಗಳು ನಿಮ್ಮ ಪರವಾಗಿ ವಾಲುತ್ತವೆ. ಆರ್ಥಿಕ ರಂಗದಲ್ಲಿ ಸೂಕ್ತ ಸಹಕಾರ ದೊರೆಯುತ್ತದೆ. ಧಾರ್ಮಿಕ ಅಥವಾ ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಗೌರವ ದೊರೆಯುತ್ತದೆ. ಭೂವ್ಯವಹಾರ ಮಾಡುವವರಿಗೆ ಉತ್ತಮ ಕಮಿಷನ್ ಇರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ವ್ಯವಹಾರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬಹುದು. ಸಂಶೋಧನಾ ಕಾರ್ಯದಲ್ಲಿ ತೊಡಗಿರುವವರ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮಕ್ಕಾಗಿ ಪ್ರಶಂಸೆ ಗಿಟ್ಟಿಸಲಿದ್ದೀರಿ. ಖರ್ಚಿಗೆ ಕಡಿವಾಣ ಹಾಕಿ, ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು. ಧಾನ್ಯಗಳ ಸಗಟು ವ್ಯಾಪಾರಗಾರರಿಗೆ ಹಣದಲ್ಲಿ ಮೋಸ ಆಗುವ ಸಾಧ್ಯತೆ ಇದೆ ಎಚ್ಚರ. ನಡವಳಿಕೆಯ ವಿಚಾರದಲ್ಲಿ ಹಿರಿಯರ ಕೋಪಕ್ಕೆ ತುತ್ತಾಗುವಿರಿ. ಉದ್ಯೋಗರಂಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಿವಾಹದ ವಿಷಯದಲ್ಲಿ ಮಧ್ಯವರ್ತಿ ಬಿಟ್ಟು ನೇರವಾಗಿ ಮಾತಾಡಿದರೆ ಕಾರ್ಯಸಾಧನೆ ಆಗುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಉನ್ನತ ವ್ಯಾಸಂಗ ಮಾಡುವವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಒಂದೆಡೆ ಸಾಲ ಮಾಡಿ ಉಳಿದ ಕೈ ಸಾಲಗಳನ್ನು ತೀರಿಸಬಹುದು. ಬಂಧುಗಳೊಂದಿಗೆ ಸಂಬಂಧಗಳು ಸುಧಾರಿಸುತ್ತವೆ. ರಾಜಕೀಯ ನಾಯಕರಿಗೆ ಗಂಭೀರ ಚಿಂತನೆಯ ಕಾಲ, ಹೇಳಿಕೆಗಳನ್ನು ಕೊಡುವಾಗ ಬಹಳ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲಕರ ವಾತಾವರಣವಿದೆ. ಆಸ್ತಿ ಖರೀದಿಯ ವಿಷಯಕ್ಕೆ ಕೈಹಾಕುವುದು ಬೇಡ. ಪ್ರೀತಿ-ಪ್ರೇಮದ ವಿಷಯದಲ್ಲಿ ಸಫಲತೆ ಕಾಣಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅಭಿವೃದ್ಧಿ ಇದೆ. ವೃದ್ಧರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಾಣಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಶೃಂಗಾರ ಸಾಮಗ್ರಿಗಳನ್ನು ಮಾರುವವರಿಗೆ ಉತ್ತಮ ಲಾಭ. ರಾಜಕೀಯ ನಾಯಕರಿಗೆ ತಮ್ಮ ವಿರೋಧಿಗಳಿಂದ ತೀವ್ರ ತರಹದ ತೊಂದರೆಗಳು ಬರಬಹುದು. ಭೂ ವ್ಯವಹಾರಗಳಲ್ಲಿ ನಿಮಗೆ ಜಯ ಪ್ರಾಪ್ತಿ. ಮಕ್ಕಳ ದ್ವಂದ್ವ ನಡವಳಿಕೆಯಿಂದ ಹಿರಿಯರಿಗೆ ಬೇಸರವಾಗುವ ಸಾಧ್ಯತೆ ಇದೆ. ಶೀತ ಬಾಧೆ ಅಥವಾ ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿ. ಸಂಗಾತಿಯು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಸಹಾಯ ಮಾಡುವವರು. ವಾಹನ ಚಲಾಯಿಸುವಾಗ ಎಚ್ಚರ ವಹಿಸಿ. ಹೈನುಗಾರಿಕೆ ಮಾಡುವವರ ಆದಾಯ ಮಧ್ಯಮ ಸ್ಥಿತಿಯಲ್ಲಿರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಜಂಟಿ ವ್ಯವಹಾರಗಳಲ್ಲಿ ಗೊಂದಲಗಳು ಆಗಬಹುದು. ಸಹೋದರಿಯರೊಡನೆ ಸಂಬಂಧಗಳು ಸುಧಾರಿಸುತ್ತವೆ. ಹಣದ ಒಳಹರಿವು ಕಡಿಮೆ. ಆಸ್ತಿ ಖರೀದಿಯಲ್ಲಿ ಮೇಲುಗೈ ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಸಂತಸದ ಸುದ್ದಿ ಬರುತ್ತದೆ. ಸಾಲ ತೀರಿಸಲು ಹೆಚ್ಚಿನ ಕಾಲಾವಕಾಶ ಸಿಗುತ್ತದೆ. ಉದ್ಯೋಗಸ್ಥರಿಗೆ ಕಿರಿಕಿರಿಗಳು ದೂರವಾಗುತ್ತವೆ. ಆದಾಯ ಮತ್ತು ಖರ್ಚುಗಳ ಸಮತೋಲನ ಸಾಧಿಸಿ. ಮಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಸುಸ್ಥಿತಿ ಕಾಣಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಧಾರ್ಮಿಕ ಕಾರ್ಯಗಳ ಬಗ್ಗೆ ಒಲವು ಹೆಚ್ಚುತ್ತದೆ. ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಗೌರವ ಮತ್ತು ಆದರಗಳು ಸಿಗುತ್ತವೆ. ಸಾಧಕರು ಪ್ರಶಸ್ತಿಗಳಿಗೆ ಭಾಜನರಾಗುವ ಸಾಧ್ಯತೆಗಳಿವೆ. ಹಣದ ಒಳಹರಿವು ಏರಿಕೆಯಾಗಲಿದೆ. ಒಡಹುಟ್ಟಿದವರಿಂದ ಅತಿ ಹೆಚ್ಚು ಸಹಾಯ ಒದಗಲಿದೆ. ತಾಯಿಯ ಮನೆಯಿಂದ ಕೆಲವರಿಗೆ ಆಸ್ತಿ ಒದಗುವ ಸಾಧ್ಯತೆ ಇದೆ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ವಾಯು ಪ್ರಕೋಪ ಉಂಟಾಗಬಹುದು. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿರುವವರಿಗೆ ಉತ್ತಮ ಫಲಿತಾಂಶ ಬರುವ ಸಾಧ್ಯತೆ ಇದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಯೋಜಿಸಿದ ಕಾರ್ಯಗಳಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಸರ್ಕಾರದಿಂದ ಬರಬೇಕಿದ್ದ ಸಾಲ ಸೌಲಭ್ಯಗಳು ಒದಗಿಬರುತ್ತವೆ. ಎಣ್ಣೆ ಮತ್ತು ಇತರೆ ಎಣ್ಣೆ ಕಾಳುಗಳ ವ್ಯಾಪಾರಿಗಳಿಗೆ ಲಾಭವಿರುತ್ತದೆ. ಕಳೆದುಹೋದ ವಸ್ತುವೊಂದು ದೊರಕುವ ಸಾಧ್ಯತೆ ಇದೆ. ಹಣದ ಒಳಹರಿವು ಸುಸ್ಥಿತಿ. ವಕೀಲರಿಗೆ ಸಂಪಾದನೆ ಹೆಚ್ಚಲಿದೆ. ರಾಜಕೀಯ ವ್ಯಕ್ತಿಗಳು ಚುರುಕಾಗಿ ತಮ್ಮ ಕ್ಷೇತ್ರ ದರ್ಶನ ಮಾಡಿ, ಜನಾಕರ್ಷಣೆ ಹೆಚ್ಚಿಸಿಕೊಳ್ಳುವ ಅವಕಾಶವಿದೆ. ಕ್ರೀಡಾಕ್ಷೇತ್ರದಲ್ಲಿ ಬೆಳೆಯುತ್ತಿರುವವರಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತವೆ. ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸಾಂಪ್ರದಾಯಿಕ ಕೃಷಿಕರಿಗೆ ಉತ್ತಮ ಆದಾಯ. ರಾಜಕಾರಣಿಗಳಿಗೆ ಜನರನ್ನು ಮರುಳು ಮಾಡುವ ಕಲೆ ಒದಗಿಬರುತ್ತದೆ. ಉಪಾಧ್ಯಾಯರಿಗೆ ಮತ್ತು ಪಂಡಿತರಿಗೆ ಉತ್ತಮ ಶಿಷ್ಯರು ದೊರೆತು, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅವಿವಾಹಿತರಿಗೆ ವಿವಾಹ ಒದಗುವ ಸಂದರ್ಭ. ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳು ಇದ್ದರೂ ಅವರನ್ನು ಎದುರಿಸಿ ಗೆಲುವು ಸಾಧಿಸುವಿರಿ. ನಿಮ್ಮ ಮಾತಿನ ಕಲೆಯಿಂದ ಬಂದ ಸಂಕಷ್ಟಗಳನ್ನು ಸರಾಗವಾಗಿ ನಿವಾರಿಸಿಕೊಳ್ಳುವಿರಿ. ತಾಯಿಂದ ಧನಸಹಾಯ ಮತ್ತು ಪ್ರೋತ್ಸಾಹ ದೊರೆಯುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಆರಂಭದಲ್ಲಿ ಮನಸ್ಸಿಗೆ ಸ್ವಲ್ಪ ಉಲ್ಲಾಸಕರ ವಾತಾವರಣವಿರುತ್ತದೆ. ಸ್ವಲ್ಪ ಖರ್ಚು ಹೆಚ್ಚಿಗೆ ಇರುತ್ತದೆ. ಚುರುಕಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ವಿದೇಶದಲ್ಲಿರುವವರು ಸ್ವದೇಶದಲ್ಲಿ ಆಸ್ತಿ ಮಾಡಬಹುದು. ಧನದ ಒಳಹರಿವು ಸಾಮಾನ್ಯ. ನಿಮ್ಮ ತಂದೆಯ ಜೊತೆ ಕಾವೇರಿದ ಮಾತುಗಳು ಆಗಬಹುದು. ಸಂತಾನ ಅಪೇಕ್ಷಿತರಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ಸಾರ್ವಜನಿಕ ಕೆಲಸ ಮಾಡುತ್ತಿರುವವರಿಗೆ ಮನ್ನಣೆ ದೊರೆಯುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಏಳಿಗೆ ಇದೆ. ಆಭರಣದ ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗುವುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ನಿವೇಶನ ಅಥವಾ ಜಮೀನಿನ ಮೇಲೆ ಹಣ ಹೂಡುವಿರಿ. ಭೂವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುವುದು. ಕಚೇರಿಯ ವ್ಯವಹಾರಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸಿ. ನಾನಾ ಮೂಲಗಳಿಂದ ಸಂಪತ್ತನ್ನು ಕ್ರೋಡೀಕರಿಸಲು ಪ್ರಯತ್ನಿಸುವಿರಿ. ಲೇವಾದೇವಿದಾರರು ಎಚ್ಚರ ವಹಿಸಬೇಕು, ಇಲ್ಲವಾದಲ್ಲಿ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಏಳಿಗೆ ಇದೆ. ಸರ್ಕಾರಿ ಸಂಸ್ಥೆಗಳೊಡನೆ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚಲಿದೆ. ಒಡವೆ ಖರೀದಿಸುವ ಯೋಗವಿದೆ. ಸಿದ್ಧಪಡಿಸಿದ ಆಹಾರ ತಯಾರಿಸಿ ಮಾರುವವರ ವ್ಯವಹಾರ ವಿಸ್ತರಿಸುತ್ತದೆ. ಆರೋಗ್ಯ ಕಾಳಜಿ ಅಗತ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.