ಬುಧವಾರ, ಮೇ 27, 2020
27 °C

ವಾರ ಭವಿಷ್ಯ| 26–1–2020ರಿಂದ 1–2–2020ರ ವರೆಗೆ

ಡಾ. ಎಂ.ಎನ್. ಲಕ್ಚ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

Weekly Horoscopes

ಮೇಷ
ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ

ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆಯಾಗುವುದು. ಕಾರ್ಖಾನೆಯನ್ನು ನಡೆಸುವವರಿಗೆ ಉತ್ತಮ ಅವಕಾಶವಿದ್ದು ಅವರ ಉದ್ದಿಮೆಯ ವ್ಯವಹಾರಗಳಲ್ಲಿ ಚೇತರಿಕೆಯನ್ನು ಕಾಣುವುದು. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಹಿಂದೆ ನಿಮ್ಮ ಬಗ್ಗೆ ಮಾತಾಡಿಕೊಳ್ಳುವರು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಪ್ರಾಮಾಣಿಕ ಕೆಲಸಗಾರರಿಗೆ ಉದ್ಯೋಗ ನಷ್ಠದ ಭೀತಿ ಇರುವುದಿಲ್ಲ ಹಾಗೂ ಅವರ ಪ್ರಾಮಾಣಿಕತೆಗೆ ತಕ್ಕ ‍ಪ್ರತಿಫಲ ದೊರೆತೇ ದೊರೆಯುತ್ತದೆ.

ವೃಷಭ
ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1,2

ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿಯ ಮೇಲೆ ವಿದೇಶದಲ್ಲಿನ ಕಚೇರಿಗಳಿಗೆ ವರ್ಗಾವಣೆಯ ಸಾಧ್ಯತೆಗಳಿವೆ. ಇದು ಅವರ ಬಹುದಿನದ ಕನಸಾಗಿರುತ್ತದೆ. ಒಡಹುಟ್ಟಿದವರೊಡನೆ ಉತ್ತಮ ಭಾಂಧವ್ಯ ಏರ್ಪಡುತ್ತದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರುವವರು ಸ್ವಲ್ಪ ಎಚ ್ಚರವಾಗಿರಿ, ನಿಮಗೆ ಬರುವ ದಾಸ್ತಾನುಗಳ ಬಗ್ಗೆ ಗಮನವಿಡಿರಿ. ನಕಲಿ ಮಾಲುಗಳು ಸಹ ಬರುತ್ತದೆ. ನಿಮ್ಮ ಮಕ್ಕಳ ಬಗ್ಗೆ ನೀವು ಶುಭವಾರ್ತೆಗಳು ಕೇಳಿ ಬರುತ್ತದೆ. ಅವರ ವಿದ್ಯಾಭ್ಯಾಸ ಉತ್ತಮವಾಗಿ ನಡೆಯುತ್ತದೆ.

ಮಿಥುನ
ಮೃಗಶಿರಾ 3,4, ಆರಿದ್ರಾ, ಪುನರ್ವಸು 1,2,3

ಯಾವುದೇ ವಿಷಯದಲ್ಲೂ ಇತರರ ಮೇಲೆ ಅವಲಂಬನೆಯು ಒಳ್ಳೆಯದಲ್ಲ. ನಿಮ್ಮ ಮೇಲೆ ನಂಬಿಕೆ ಇಟ್ಟು ದೃಢವಾಗಿ ನಡೆಯಿರಿ. ಇಂತಹ ಕೆಲಸದಲ್ಲಿ ನಿಮಗೆ ಜಯವಿರುತ್ತದೆ. ಅವಿವಾಹಿತರಿಗೆ ವಿವಾಹ ಒದಗುವ ಸಾಧ್ಯತೆಗಳಿರುತ್ತವೆ. ಸಂಗಾತಿಯ ಆದಾಯದಲ್ಲಿ ಏರಿಕೆ ಆಗುವ ಸಾಧ್ಯತೆ ದಟ್ಟವಾಗುತ್ತವೆ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಅವರ ಲಾಭ ಹೆಚ್ಚಾಗಿ ಹೊಸ ಶಾಖೆ ತೆರೆಯಬಹುದು.

ಕಟಕ
ಪುನರ್ವಸು 4, ಪುಷ್ಯ, ಆಶ್ಲೇಷ

ನಿಮ್ಮ ವ್ಯಕ್ತಿಗತ ಹಿಂಜರಿಕೆಯು ಕೆಲವು ಕೆಲಸಗಳಲ್ಲಿ ಸಿಗುವ ಫಲವನ್ನು ಮುಂದೂಡುತ್ತವೆ. ವೃತ್ತಿಯಲ್ಲಿದ್ದ ಗೋಜಲುಗಳು ನಿವಾರಣೆಯಾಗುತ್ತವೆ. ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳಿಗೆ ಬಡ್ತಿಯ ಸೂಚನೆ ಇದೆ. ನಿಲ್ಲ ಪಾಲುದಾರರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡಲ್ಲಿ ಹೊಸ ವ್ಯಾಪಾರಿಗಳಿಗೆ ಪಾಲುದಾರರಾಗಲು ಸಾಕಷ್ಠು ಅವಕಾಶಗಳು ದೊರೆಯುತ್ತವೆ. ಸರ್ಕಾರಿ ಸಾಲಗಳನ್ನು ಪಡೆದು ಕೈಸಾಲಗಳನ್ನು ತೀರಿಸಲು ಉತ್ತಮ ಅವಕಾಶವಿದೆ. ಇದನ್ನು ಸರಿಯಾಗಿ ಬಳಸಿರಿ.

ಸಿಂಹ
ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1

ನಿಮ್ಮ ಯಶಸ್ಸಿಗೆ ಸಾಕಷ್ಠು ಜನರು ಕೈ ಸೇರಿಸಿ ಸಹಕಾರವನ್ನು ನೀಡುವರು. ವ್ಯಾಪಾರದಲ್ಲಿ ನಿಧಾನದ ಅಭಿವೃದ್ಧಿ ಇದೆ. ಸ್ತ್ರೀಯರು ನಡೆಸುವ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಠು ಅಭಿವೃದ್ಧಿ ಇದೆ. ದಿನಸೀ ವ್ಯಾಪಾರಿಗಳಿಗೆ ವ್ಯಾಪಾರ ಜೋರಾಗಿರುತ್ತದೆ ಮತ್ತು ಹೆಚ್ಚು ದಾಸ್ತಾನು ಒದಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನವನ್ನು ಹರಿಸುವುದು ಅತೀ ಒಳ್ಳೆಯದು, ಇಲ್ಲವಾದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದೆ ಪರಿಸ್ಥಿತಿ ಗೋಜಲಾಗಿ ಪರಿಣಮಿಸುವುದು.

ಕನ್ಯಾ
ಉತ್ತರ ಫಲ್ಗುಣಿ 2,3,4, ಹಸ್ತ, ಚಿತ್ತಾ 1,2

ನಿಮ್ಮ ಜ್ಞಾನ ಸಂವರ್ಧನೆಯನ್ನು ಮಾಡಿಕೊಳ್ಳಲು ಉತ್ತಮ ಕಾಲ. ಈ ಜ್ಞಾನ ನಿಮ್ಮ ಬದುಕಿನ ಕೈದೀಪವಾಗಲಿದೆ. ಈಗ ನಿಮ್ಮ ಬಾಕಿ ಕೆಲಸಗಳನ್ನು ಮಾಡಿ ಮುಗಿಸಬಹುದು. ಬರೀ ನಿರೀಕ್ಷೆಯಲ್ಲಿ ಕಾಲ ಕಳೆಯದೆ ಸ್ವಪ್ರಯತ್ನದಿಂದ ಮುನ್ನುಗ್ಗಿರಿ ಫಲಿತಾಂಶ ನಿಮ್ಮದಾಗುವುದು. ಹಲವಾರು ವ್ಯವಹಾರಗಳಿಗೆ ಒಮ್ಮೆಲೇ ಕೈ ಹಾಕುವುದು ಬೇಡ. ಅವುಗಳ ಸಾಧಕ ಬಾಧಕಗಳನ್ನು ನೋಡಿ ತಿಳಿದು ಕೈಹಾಕಿರಿ. ಆಗ ಲಾಭವಿರುತ್ತದೆ.

ತುಲಾ
ಚಿತ್ತಾ 3,4, ಸ್ವಾತಿ, ವಿಶಾಖೆ 1,2,3

ಸಿಟ್ಟಿನಿಂದ ಕೂಗಾಡುವುದು ಮತ್ತು ಇತರರನ್ನು ದೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ನಿಮಗೆ ಸಿಗುವ ಸಹಕಾರ ಕಡಿಮೆಯಾಗುತ್ತದೆ. ನಿಮ್ಮ ವರ್ತನೆಯನ್ನು ಬದಲಾಯಿಸಿಕೊಂಡಲ್ಲಿ ನಿಮಗೇ ಒಳಿತು. ದೈವಕ್ಕೆ ಮೊರೆ ಹೋಗುವುದು ಮತ್ತು ದೈವ ನಂಬಿಕೆ ಹೆಚ್ಚಾಗುವುದು ನಿಮ್ಮ ಮಕ್ಕಳ ಅಭಿವೃದ್ಧಿಯು ನಿರೀಕ್ಷೆಗೂ ಮೀರಿ ಇರುವುದು. ಸಂಗಾತಿಯ ಕಡೆಯಿಂದ ಧನ ಸಹಾಯದ ಆಶ್ವಾಸನೆ ದೊರೆತು ನಿಮ್ಮ ಮನಸ್ಸು ಸ್ವಲ್ಪ ನಿರಾಳವಾಗುವುದು.

ವೃಶ್ಚಿಕ
ವಿಶಾಖ 4, ಅನುರಾಧ, ಜ್ಯೇಷ್ಠ

ನಿಮ್ಮ ಪ್ರಯಾಣಕ್ಕೆ ನಿರಾಳವಾಗುವ ವಾತಾವರಣವೊಂದು ಸೃಷ್ಠಿಯಾಗಿ ನಿಮಗೆ ಅನುಕೂಲವಾಗಲಿದೆ. ಈ ಪ್ರಯಾಣದಿಂದ ನಿಮ್ಮ ವ್ಯಾಪಾರ ವ್ಯವಹಾರಗಳು ವಿಸ್ತರಣೆಯಾಗಲಿದೆ. ಸರಿಯಾಗಿ ನಡೆಯುತ್ತಿರುವ ಕೆಲಸಗಳಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡದಿರಿ. ಮಾಡಿದಲ್ಲಿ ಕೆಲಸ ನಿಲ್ಲುವ ಸಂಭವವಿದೆ. ನಿಮ್ಮ ಸೌಮ್ಯತೆಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳಬಹುದು ಸ್ವಲ್ಪ ಗಮನವಿರಲಿ. ಈ ಬಗ್ಗೆ ಕುಟುಂಬ ಸದಸ್ಯರ ಮಾಹಿತಿ ಉಪಯೋಗವಾಗುತ್ತದೆ.

ಧನಸ್ಸು
ಮೂಲ, ಪೂರ್ವಾಷಾಢ, ಉತ್ತರಾಷಾಡ 1

ಶ್ರಮವಹಿಸಿ ಪಡೆದ ಪದೋನ್ನತಿಯಲ್ಲಿ ಆನಂದವನ್ನು ಕಾಣುವಿರಿ. ತಾಯಿಯಿಂದ ಅಥವಾ ಹಿರಿಯರಿಂದ ಅಮೂಲ್ಯ ಉಡುಗೊರೆಯೊಂದು ನಿಮಗೆ ದೊರೆಯುವ ಸಾಧ್ಯತೆ ಇದೆ. ಹಿರಿಯರು ಸಂಬಂಧಿಗಳಲ್ಲಿ ಹಿಂದೆ ಆದ ತಪ್ಪುಗಳನ್ನು ಪುನಃ ಆಗದಂತೆ ಎಚ್ಚರವನ್ನು ವಹಿಸಿರಿ. ಹೆಣ್ಣು ಮಕ್ಕಳು ಧನ ಸಹಾಯಕ್ಕಾಗಿ ಕೇಳಲು ಬರಬಹುದು ಸ್ವಲ್ಪ ಎಚ್ಚರವಾಗಿರಿ. ಕೃಷಿಯ ವಿಚಾರದಲ್ಲಿ ನಿಮಗೆ ಸಂತಸದ ಸುದ್ದಿ ಬರುತ್ತದೆ. ಭೂಮಿ ಅಥವಾ ನಿವೇಶನಗಳನ್ನು ಕೊಳ್ಳಲು ಈಗ ಸಕಾಲ. 

ಮಕರ
ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1, 2

ವ್ಯಾಪಾರ ವ್ಯವಹಾರದಲ್ಲಿ ಬಂದಿದ್ದ ಲಾಭಗಳನ್ನು ಸ್ವಲ್ಪ ಸ್ಥಿರ ಠೇವಣಿಯಾಗಿ ಇಟ್ಟುಕೊಳ್ಳುವುದು ನಿಮಗೇ ಒಳಿತು. ಸ್ವಲ್ಪ ಚುರುಕಾಗಿ ಕೆಲಸವನ್ನು ಮಾಡಿ ಎಲ್ಲರ ಗಮನವನ್ನು ಸೆಳೆಯುವಿರಿ. ಮಹಿಳೆಯರ ಉಡುಪನ್ನು ಮಾರುವವರಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ನಿಮಗೆ ಕಾಯುತ್ತಿದ್ದ ಮನೆ, ನಿವೇಶನ ದೊರೆಯಲು ಅವಕಾಶ ಒದಗುವ ಸಾಧ್ಯತೆಗಳಿವೆ. ವಿದೇಶಿ ಕಂಪೆನಿಗಳಿಂದ ಬರಬೇಕಾಗಿದ್ದ ಬಾಕಿ ಹಣ ದೊರೆಯುತ್ತದೆ. ಅನಿರೀಕ್ಷಿತವಾಗಿ ಭೇಟಿಯಾದವರು ಪ್ರೀತಿ ಪ್ರೇಮದಲ್ಲಿ ಸಿಲುಕುವರು.

ಕುಂಭ
ಧನಿಷ್ಠ 3,4, ಶತಭಿಷ, ಪೂರ್ವಾಭಾದ್ರ 1,2,3

ಹಣಕಾಸಿಗೆ ಇದ್ದ ಸಂಕಷ್ಠಗಳು ದೂರವಾಗಿ ಹಣದ ಹರಿವು ಹೆಚ್ಚಾಗುವುದು. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಲಾಭ ವೃದ್ಧಿಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಧಾರ್ಮಿಕ ಮುಖಂಡರು ಅವರ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸಬಹುದು. ದೂರದ ದೇವತಾ ದೃರ್ಶನಕ್ಕೆ ಹೋಗಲು ಸುಖವಾದ ವ್ಯವಸ್ಥೆ ಇರುತ್ತದೆ. ಯುವಕರು ಇತರರ ಮೇಲೆ ಮಾಡುವ ಆಪಾದನೆಗಳು ಅವರಿಗೆ ತಿರುಗುಬಾಣವಾಗುತ್ತವೆ. ಪರೋಪಕಾರಿಯಾದ ಹಿರಿಯರನ್ನು ಎಲ್ಲರೂ ಬಳಸಿಕೊಳ್ಳುವರು.

ಮೀನ
ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ

ಮಕ್ಕಳ ಹಠಮಾರಿತನದ ಧೋರಣೆಯು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.ಅವರ ನಡತೆಯಲ್ಲಿ ಆತಂಕ ಹುಟ್ಟಿ ಅದು ನಿಜವೆನಿಸುತ್ತದೆ. ನಿಮ್ಮ ಸ್ವಂತ ನಿರ್ಣಯದ ಜೊತೆಗೆ ಇತರರ ನಿರ್ಣಯಗಳನ್ನು ಗೌರವಿಸಿರಿ. ಗಂಟಲು ಅಥವಾ ಶ್ವಾಸಕೋಶದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿರಿ. ಈಗ ಹಿಂದೆ ನಿಮ್ಮಿಂದ ತೊಂದರೆಯನ್ನು ಅನುಭವಿಸಿದ್ದ ಜನರೇ ಈಗ ನಿಮ್ಮ ವಿರುದ್ಧ ತೊಂದರೆ ಮಾಡಲು ಸಿದ್ಧರಾಗುವರು. ವೃತ್ತಿಯಲ್ಲಿದ್ದ ಮುಸುಕಿನ ಗುದ್ದಾಟಗಳು ನಿವಾರಣೆಯಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು