ಸಾವಳಗಿ (ಬಾಗಲಕೋಟೆ ಜಿಲ್ಲೆ): ಗ್ರಾಮದ ಬ್ಯಾಡಗಿ ವಸ್ತಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಅವರನ್ನು ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮರ್ಥ ಹಣಮಂತ ಅಟ್ಯಾಳ (4) ಹಾಗೂ ಅದ್ವಿಕ್ ಹಣಮಂತ ಅಟ್ಯಾಳ (3) ಗಾಯಗೊಂಡ ಮಕ್ಕಳು. ಈ ಘಟನೆಯಲ್ಲಿ ಒಂದು ಮಗುವಿನ ಕಿವಿಗೆ ಹಾಗೂ ಇನ್ನೊಂದು ಮಗುವಿನ ತಲೆಗೆ ಹೆಚ್ಚು ಗಾಯಗಳಾಗಿವೆ.

‘ಅಂಗನವಾಡಿ ಕೇಂದ್ರದಲ್ಲಿದ್ದವರ ನಿರ್ಲಕ್ಷ್ಯದಿಂದ ಕುಕ್ಕರ್ ಸ್ಫೋಟಗೊಂಡಿದೆ. ಇಷ್ಟೆಲ್ಲ ಆಗಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಪೋಷಕ ಹಣಮಂತ ಅಟ್ಯಾಳ ಒತ್ತಾಯಿಸಿದರು.

‘ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ ಅಷ್ಟೆ. ಅಂಗನವಾಡಿ ಸಹಾಯಕಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳಿಗೆ ಕುಕ್ಕರ್ ಬಡಿದಿಲ್ಲ; ಮಕ್ಕಳು ಗಾಬರಿಗೊಂಡು ಗೋಡೆಗೆ ಡಿಕ್ಕಿ ಹೊಡೆದು ಗಾಯಗಳಾಗಿರಬಹುದು’ ಎಂದು ಜಮಖಂಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನುರಾಧಾ ಹಾದಿಮನಿ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.