ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಹಟ್ಟಿ ಸೀರೆಗೆ ಭಾರೀ ಬೇಡಿಕೆ: ಆಂಧ್ರ, ತೆಲಂಗಾಣದಲ್ಲಿ ಹೆಚ್ಚು ಮಾರಾಟ

Last Updated 18 ಡಿಸೆಂಬರ್ 2022, 5:09 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಇಲ್ಲಿನ ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಯಾರಾಗುವ ಆನೆ ಮತ್ತು ನವಿಲು ಚಿತ್ರ ಮತ್ತು ದೊಡ್ಡಗಾತ್ರದ ಬಾರ್ಡರ್ ಹೊಂದಿದ ಸೀರೆಗಳಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದೆ.

ಎರಡೂ ರಾಜ್ಯಗಳಲ್ಲಿ ಈ ಸೀರೆಗಳು ನಾರಾಯಣಪೇಟ ಸೀರೆಗಳೆಂದು ಪ್ರಸಿದ್ಧಿ ಪಡೆದುಕೊಂಡಿವೆ. ನಾಲ್ಕು ತಿಂಗಳಿಂದ ಬೇಡಿಕೆ ಹೆಚ್ಚಿದೆ. ಆನೆ, ನವಿಲು ಚಿತ್ರಗಳನ್ನು ಒಳಗೊಂಡ ಬೃಹತ್ ಬಾರ್ಡರೇ ಈ ಸೀರೆಯ ವಿಶೇಷ.

ಆಂಧ್ರಪ್ರದೇಶದ ಗಾಯಕಿ ಮಂಗ್ಲಿ ಈ ಸೀರೆಯನ್ನುಟ್ಟು,ಇದೇ ಬಟ್ಟೆಯಲ್ಲಿ ತಯಾರಿಸಿರುವ ಲಂಗ ದಾವಣಿ ಧರಿಸಿ ಸಂಗೀತ ಕಾರ್ಯಕ್ರಮದ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ದಕ್ಷಿಣ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ ಧರಿಸಿದ್ದ ಸೀಎಯನ್ನು ಈಗ ಅಭಿಮಾನಿಗಳು ಖರೀದಿಸಲಾರಂಭಿಸಿದ್ದಾರೆ.

ಆರಂಭದಲ್ಲಿ ಕೆಲವೇ ಕೆಲವು ಸೀರೆಗಳನ್ನು ಉತ್ಪಾದಕರು ಎರಡೂ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದ್ದರು. ಬೇಡಿಕೆ ಉಂಟಾಗಿದ್ದರಿಂದ ನಾಲ್ಕು ತಿಂಗಳುಗಳಿಂದ ಬನಹಟ್ಟಿಯಿಂದ ದಿನಕ್ಕೆ ಸಾವಿರಕ್ಕಿಂತ ಹೆಚ್ಚು ಸೀರೆಗಳು ಮಾರಾಟವಾಗುತ್ತಿವೆ. ಇದೇ ರೀತಿಯ ಸೀರೆಗಳನ್ನು ಬೆಳಗಾವಿ, ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ ನೇಯ್ಗೆ ಮಾಡಲಾಗುತ್ತದೆ.

ಆರಂಭದಲ್ಲಿ ಒಂದು ಸೀರೆ ₹1,000 ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಈಗ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ₹800 ರಿಂದ ₹900 ಬೆಲೆಗೆ ಮಾರಾಟವಾಗುತ್ತಿವೆ.

ಕೋವಿಡ್‍ನಿಂದಾಗಿ ಮತ್ತು ಕಚ್ಚಾ ಸರಕುಗಳ ಬೆಲೆಗಳಲ್ಲಿ ಏರಿಕೆಯಿಂದಾಗಿ ಇಲ್ಲಿಯ ಜವಳಿ ಉದ್ಯಮಕ್ಕೆ ಹಿನ್ನಡೆಯಾಗಿತ್ತು. ಸೀರೆಗಳ ಬೇಡಿಕೆ ಹೆಚ್ಚಳದಿಂದ ಇಲ್ಲಿಯ ನೇಕಾರರು ಸ್ವಲ್ಪ ಪ್ರಮಾಣದಲ್ಲಿ ಲಾಭ ಪಡೆಯುತ್ತಿದ್ದಾರೆ‌.

*
ಬನಹಟ್ಟಿಯಲ್ಲಿ ತಯಾರಾಗುವ ಸೀರೆಗೆ ಉತ್ತಮ ಬೇಡಿಕೆ ಹೆಚ್ಚಿದೆ. ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ
–ಗೋಕುಲ ಕಾಬರಾ, ಸೀರೆ ಉತ್ಪಾದಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT