ಬಾಗಲಕೋಟೆ: ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ಪ್ರತಿ ಕೆ.ಜಿ.ಗೆ ರೂ.1ರ ದರದಲ್ಲಿ 30 ಕೆ.ಜಿ. ಆಹಾರಧಾನ್ಯ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಅನ್ನ ಭಾಗ್ಯ' ಯೋಜನೆಯಡಿ ಜಿಲ್ಲೆಯ 2,54,740 ಕುಟುಂಬಗಳು ಪ್ರಯೋಜನ ಪಡೆದುಕೊಳ್ಳಲಿವೆ.

`ಅನ್ನಭಾಗ್ಯ' ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಗೆ ಈ ತಿಂಗಳು 8,760 ಮೆಟ್ರಿಕ್ ಟನ್ ಆಹಾರಧಾನ್ಯ ಬಿಡುಗಡೆಯಾಗಿದೆ. ಅಂದರೆ, ಹೆಚ್ಚವರಿಯಾಗಿ 2987 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. ಈ ಹಿಂದೆ ಜಿಲ್ಲೆಗೆ ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಸುಮಾರು 5713 ಮೆಟ್ರಿಕ್ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು.

ಈ ತಿಂಗಳಿಂದ ಯುನಿಟ್ ಪದ್ಧತಿಯಲ್ಲಿ ಪಡಿತರ ವಿತರಣೆ ಆಗಲಿರುವುದರಿಂದ ಜಿಲ್ಲೆಯಲ್ಲಿ 14,879 ಕುಟುಂಬಗಳಿಗೆ ತಿಂಗಳಿಗೆ 10 ಕೆ.ಜಿ., 25,455 ಕುಟುಂಬಳಿಗೆ 20 ಕೆ.ಜಿ. ಮತ್ತು 2,13,871 ಕುಟುಂಬಗಳಿಗೆ (ಒಟ್ಟು 2,54,740 ಬಿಪಿಎಲ್ ಕುಟುಂಬ) 30 ಕೆ.ಜಿ. ಅಕ್ಕಿಯನ್ನು ್ಙ1ಕ್ಕೆ ವಿತರಣೆ ಮಾಡಲಾಗುತ್ತದೆ.

`ಅನ್ನ ಭಾಗ್ಯ' ಯೋಜನೆ ಜಾರಿಯಿಂದ ಬಿಪಿಎಲ್ ಪಡಿತರದಾರರಿಗೆ ಈ ತಿಂಗಳಿಂದ ಗೋದಿ ವಿತರಣೆ ಸ್ಥಗಿತವಾಗಲಿದೆ. ಅಲ್ಲದೇ, ಅನಿಲ ರಹಿತ ಎಲ್ಲ ಪಡಿತರದಾರರಿಗೂ ಪ್ರತಿ ತಿಂಗಳಿಗೆ 5 ಲೀಟರ್ ಸೀಮೆಎಣ್ಣೆ ವಿತರಣೆಯಾಗಲಿದೆ.

ಜಿಲ್ಲೆಯಲ್ಲಿ 46,537 ಕುಟುಂಬಗಳು ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯ ಫಲಾನುಭವಿಗಳಿದ್ದು, ಈ ಮೊದಲು ಪ್ರತಿ ಕೆ.ಜಿ.ಗೆ ರೂ.3 ನೀಡುತ್ತಿದ್ದ ಅಂತ್ಯೋದಯ ಫಲಾನುಭವಿಗಳು ಇದೀಗ ಅನ್ನಭಾಗ್ಯ ಯೋಜನೆಯ ಜಾರಿಯಿಂದ ರೂ.3 ರ ಬದಲು ರೂ 1ಕ್ಕೆ ಅಕ್ಕಿ ವಿತರಿಸಲಾಗುತ್ತದೆ.

`ಅನ್ನ ಭಾಗ್ಯ' ಯೋಜನೆ ಬಿಪಿಎಲ್ ಪಡಿತರದಾರರಿಗೆ ಅನುಕೂಲವಾದರೇ ಎಪಿಎಲ್ ಪಡಿತರದಾರರಿಗೆ ಅನಾನುಕೂಲವಾಗಲಿದೆ. ಜಿಲ್ಲೆಯ 1,06,229 ಎಪಿಎಲ್ ಕುಟುಂಬಗಳಿಗೆ ಈ ತಿಂಗಳಿನಿಂದ ಪಡಿತರ ಅಕ್ಕಿ ವಿತರಣೆ ಸ್ಥಗಿತವಾಗಲಿದೆ.

`ಅನ್ನಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿದ್ಧತೆ ಪೂರ್ಣಗೊಂಡಿದೆ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.

`ಜಿಲ್ಲೆಯ 677 ನ್ಯಾಯಬೆಲೆ ಅಂಗಡಿಗಳು, 802 ಚಿಲ್ಲರೆ ಸೀಮೆ ಎಣ್ಣೆ ಮಳಿಗೆಗಳು, 12 ಆಹಾರಧಾನ್ಯ ಸಗಟು ಮಳಿಗೆಗಳು ಮತ್ತು 11 ಸೀಮೆ ಎಣ್ಣೆ ಸಗಟು ಮಳಿಗೆಗಳಿಗೆ ಈಗಾಗಲೇ ಅಗತ್ಯ ಆಹಾರಧಾನ್ಯ ಮತ್ತು ಸೀಮೆ ಎಣ್ಣೆಯನ್ನು ಪೂರೈಕೆ ಮಾಡಲಾಗಿದೆ' ಎಂದರು.
`ಹೊಸದಾಗಿ ಪಡಿತರ ಚೀಟಿ ಹೊಂದಲು ಅವಕಾಶವಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.