ಗುರುವಾರ , ಅಕ್ಟೋಬರ್ 21, 2021
21 °C

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಧುರಖಂಡಿಯ ಮುದರಡ್ಡಿ ಕುಟುಂಬದ ಸಹೋದರರಾದ ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ(37), ಈಶ್ವರ ಮುದರಡ್ಡಿ (35) ಹಾಗೂ ಮಲ್ಲು ಮುದರಡ್ಡಿ (33)  ಕೊಲೆಯಾದವರು.

ರಾತ್ರಿ ಗ್ರಾಮದ ಸಮೀಪದ  ಸಣ್ಣೇರಿ  ರಸ್ತೆಯ ತೋಟದ ಮನೆಯಲ್ಲಿ  ಈ ಘಟನೆ ನಡೆದಿದೆ.

ಮಧುರಖಂಡಿಯ ಮುದರಡ್ಡಿ ಹಾಗೂ ಪುಟಾಣಿ ಕುಟುಂಬದವರ ನಡುವೆ ಜಮೀನಿನ ವ್ಯಾಜ್ಯದ ಕಾರಣ ಹಲವಾರು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಈ ಹಿಂದೆಯೂ ಹಲವಾರು ಬಾರಿ ಹೊಡೆದಾಟ ನಡೆದಿತ್ತು ಎನ್ನಲಾಗಿದೆ. ಈಗ ಹೊರಗಿನವರನ್ನು ಕರೆಸಿ ಕೊಲೆ ಮಾಡಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ  ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು