ಬುಧವಾರ, ಜುಲೈ 28, 2021
27 °C

ಅಮೀನಗಡ: ವಿವಿಧೆಡೆ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೀನಗಡ: ಸತತ ಮೂರು ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿದೆ. ಅಮೀನಗಡ ಪಟ್ಟಣ ಸೇರಿದಂತೆ ಗುಡೂರು, ಐಹೊಳೆ, ಸೂಳೆಬಾವಿ ಹಾಗೂ ಕಮತಗಿ ಗ್ರಾಮಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಧಾರಾಕಾರ ಮಳೆಯಾಗುತ್ತಿರುವುದರಿಂದ ರೈತಾಪಿ ವರ್ಗ ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದು ಕೃಷಿ ಹೊಂಡಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಸತತ ಮಳೆಯಿಂದಾಗಿ ಹಳ್ಳ ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ರೈತರಿಗೆ ಖುಷಿ ನೀಡಿದೆ.

ಮಳೆ ಉತ್ತಮವಾಗಿ ಬರುತ್ತಿರುವುದರಿಂದ ಹೊಲದಲ್ಲಿ ಕೃಷಿ ಹೊಂಡಗಳು ತುಂಬುತ್ತಿವೆ. ಮತ್ತು ಕೃಷಿ ಚಟುವಟಿಕೆಗಾಗಿ ಮಣ್ಣು ಫಲವತ್ತಾಗಿ ಸಿದ್ಧವಾಗಿದೆ ಎಂದು ರೈತ ರಮೇಶ ಭಗವತಿ ಹೇಳಿದರು.

ಅಮೀನಗಡ ಹೋಬಳಿಯಲ್ಲಿರುವ ಕೆರೆಗಳಿಗೆ ನೀರು ಬರುತ್ತಿದ್ದು ಕೆಲವು ಕೆರೆಗಳು ತುಂಬಿ ಹರಿಯುತ್ತಿವೆ. ಅಮೀನಗಡ ಸಮೀಪದ ಕೆಲೂರ ಗ್ರಾಮದಲ್ಲಿರುವ ಹೊಂಡ ತುಂಬಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು