ಬೀಳಗಿ: ಸ್ಥಳೀಯ ನೇಕಾರ ಗಲ್ಲಿಯ ಗೌರಿಶಂಕರ ಗಜಾನನ ಯುವಕ ಮಂಡಳದವರ ಗಣೇಶೋತ್ಸವ ಆಚರಣೆ ಪ್ರತಿ ವರ್ಷವೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಚಿಕ್ಕದಾದರೂ ಈ ಗಜಾನನ ಮಂಡಳಿಯವರು ಪ್ರದರ್ಶಿಸುವ ವೈವಿಧ್ಯಮಯ ಕಥಾರೂಪಕಗಳು ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ತರುತ್ತವೆ.
ಧಾರ್ಮಿಕ, ಐತಿಹಾಸಿಕ ಹಿನ್ನೆಲೆಯ ಈ ಕಥಾರೂಪಕಗಳನ್ನು ಪ್ರತಿದಿನ ಸಂಜೆ 6.30ರಿಂದ ರಾತ್ರಿ 10 ರ ವರೆಗೆ ಪ್ರದರ್ಶಿಸಿದರು. 12 ವರ್ಷಗಳಿಂದ ಈ ಕಥಾರೂಪಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದು, ಈ ಬಾರಿ ಭಕ್ತ ಸಿರಿಯಾಳ ದಂಪತಿಗಳ ಭಕ್ತಿಯ ಪರಾಕಾಷ್ಟೆಯನ್ನು ಬಿಂಬಿಸುವ ಕಥಾ ರೂಪಕವನ್ನು ಆಯ್ಕೆ ಮಾಡಿಕೊಂಡಿದ್ದರು.
ಪಾತ್ರಧಾರಿಗಳು ಶಿವ-ಆದಿತ್ಯ ಕೋಟಿ , ಸಿರಿಯಾಳ-ಸಂಗಮೇಶ ಹಲಗನಿ, ಮಂಗಲಾ- ಸಾಕ್ಷಿ ಶೆಟ್ಟೆಪ್ಪನವರ, ಮಗ-ಸಾತ್ವಿಕ ಶೆಟ್ಟೆಪ್ಪನವರ, ಸಾವಕಾರ-ಪೃಥ್ವಿ ದೇಶಟ್ಟಿ, ಸೇವಕ-ಸಮನ್ವಿತಾ ಕೋಟಿ ಪಾತ್ರ ನಿರ್ವಹಿಸಿದರು.