ಇಳಕಲ್: ನಗರದ ಜೋಶಿಗಲ್ಲಿಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬಿಇ ಪದವೀಧರ ಅರುಣಕುಮಾರ ವೀರಣ್ಣ ಜೀರಗಿ (30) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮನೆಯ ಚಾವಣಿಯಿಂದ ಕಬ್ಬಿಣದ ಸರಳೊಂದನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ ಮನೆಯಿಂದ ಕೇವಲ 3 ಅಡಿ ಅಂತರದಲ್ಲಿ ಹಾಯ್ದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ಆಕಸ್ಮಿಕವಾಗಿ ಸರಳಿಗೆ ತಗುಲಿದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ.
ಇವರು ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ.ಜೀರಗಿ ಹಾಗೂ ಬಾಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನಾಗರತ್ನಾ ಕಾಚೆಟ್ಟಿಯವರ ಏಕೈಕ ಪುತ್ರ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಪ್ರದೇಶದಲ್ಲಿ ಎಚ್‌ಟಿ ಲೈನ್ ಒಂದನ್ನು ಮನೆಗಳಿಂದ 2–3 ಅಡಿಗಳ ಅಂತರದಲ್ಲಿ ಹಾಕಿರುವ ಹೆಸ್ಕಾಂ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಸತಿ ಪ್ರದೇಶದಲ್ಲಿ ಹಾಯ್ದಿರುವ ಎಚ್‌ಟಿ ಲೈನ್‌ಗಳ ಬಗ್ಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.