ಬಾಗಲಕೋಟೆ: ಬಾಗಲಕೋಟೆ ಹೋಳಿ ಹಬ್ಬ ಆಚರಣಾ ಸಮಿತಿಯು ಮಾರ್ಚ್ 3ರಂದು ಸಂಜೆ 7ಕ್ಕೆ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹೋಳಿ ಉತ್ಸವ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಮಾರುತಿ ಶಿಂಧೆ, ಬಾಬುದಾರ ನರಸಿಂಹ ಕುಲಕರ್ಣಿ, ಪತ್ರಕರ್ತ ರವಿ ಹಳ್ಳೂರ, ಉಪನ್ಯಾಸಕ ಮೋಹನ ದೇಶಪಾಂಡೆ ಪಾಲ್ಗೊಳ್ಳಿದ್ದಾರೆ ಎಂದರು.

ಬಾಗಲಕೋಟೆ ಹೋಳಿ ಪ್ರಸಿದ್ಧಿ ಪಡೆದಿದ್ದು, ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಶಾನೆ, ತುರಾಯಿ, ಬೆಂಕಿ ತರುವ ಕಾರ್ಯವನ್ನು ಹಿಂದಿನಿಂದ ನಡೆದುಕೊಂಡು ಬಂದಂತೆ ಪರಿಪಾಲಿಸಿಕೊಂಡು ಬರಲಾಗುತ್ತಿದೆ ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ ಗುಡಗುಂಟಿ ಮಾತನಾಡಿ, ಮಾರ್ಚ್ 4 ರಂದು ಕಾಮದಹನ ಆಗುತ್ತದೆ. 5ರಿಂದ ಮೂರು ದಿನಗಳ ಕಾಲ ಬಣ್ಣದೋಕುಳಿ ಜರುಗಲಿದೆ. 5ರಂದು ಕಿಲ್ಲಾ, ನವನಗರ ಹಾಗೂ ವಿದ್ಯಾಗಿರಿ, 6ರಂದು ಹಳಪೇಟೆ, ಜೈನ ಪೇಟೆ ಹಾಗೂ ವೆಂಕಟಪೇಟೆ, 7 ರಂದು ಹೊಸಪೇಟೆ ಓಣಿಯಲ್ಲಿ ಬಣ್ಣದೋಕುಳಿ ನಡೆಯಲಿದೆ ಎಂದರು.

ಇದರ ಜೊತೆಗೆ ಸೋಗಿನ ಬಂಡಿ ಮೆರವಣಿಗೆ ಕೂಡ ಜರುಗಲಿದ್ದು, 4ರಂದು ಕಿಲ್ಲಾ, 5ಕ್ಕೆ ಹಳಪೇಟೆ, 6ಕ್ಕೆ ಹೊಸಪೇಟಿ, 7ಕ್ಕೆ ಜೈನ ಪೇಟೆ, 8ಕ್ಕೆ ವೆಂಕಟಪೇಟೆ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಮೆರವಣಿಗೆ ನಡೆಯಲಿದೆ.

ಮಾರ್ಚ್ 6 ರಂದು ಬಸವೇಶ್ವರ ವೃತ್ತದ ಬಳಿ ಇರುವ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ರೇನ್ ಡ್ಯಾನ್ಸ್ ಆಯೋಜಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದರು.

ಹೋಳಿ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಿಸೋಣ. ಬೇರೆ, ಬೇರೆ ಕಡೆಗಳಿಂದ ಬಾಗಲಕೋಟೆ ಹೋಳಿ ನೋಡಲು ಜನರು ಬರುತ್ತಾರೆ. ಆದ್ದರಿಂದ, ಸ್ಥಳೀಯರು ಬೇರೆ ಊರುಗಳಿಗೆ ಹೋಗದೇ ಬಣ್ಣದಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸಂಜೀವ ವಾಡ್ಕರ್, ಶಿವುಕುಮಾರ ಮೇಲ್ನಾಡ, ವೀರಣ್ಣ ಬಂಗಾರಶೆಟ್ಟರ್, ರಾಜು ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.