ಬಾದಾಮಿ: ಉತ್ತರ ಕರ್ನಾಟಕದ ಧಾರ್ಮಿಕ ಪುಣ್ಯ ಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ರಥೋತ್ಸವವು ಬನದ ಹುಣ್ಣಿಮೆಯ ದಿನ ಜ. 3 ರಂದು ಸಂಜೆ 5ಕ್ಕೆ ವಿಜೃಂಭಣೆಯಿಂದ ನಡೆಯಲಿದೆ.

ಇದು ಒಂದು ತಿಂಗಳವರೆಗೆ ನಿರಂತರವಾಗಿ ನಡೆಯುವ ದೊಡ್ಡ ಜಾತ್ರೆಯಾಗಿದೆ. ಭಕ್ತರು ಇದನ್ನು ನಾಡ ಹಬ್ಬದಂತೆ ಸಂಭ್ರಮದಿಂದ ಆಚರಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದಲೂ ಅಪಾರ ಭಕ್ತರು ಸಾಗರೋಪಾದಿಯಲ್ಲಿ ಬರುವರು.

ಬನಶಂಕರಿದೇವಿ ಇತಿಹಾಸ: ಕನ್ನಡ ನಾಡಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಕ್ತಿ ದೇವತೆಯನ್ನು ಆರಾಧಿಸುವ ಸಂಪ್ರದಾಯ ಅನೇಕ ಶತಮಾನಗಳಿಂದ ಬಂದಿದೆ. ಚಾಲುಕ್ಯರ ಕಾಲದಿಂದ ಪೂಜಿಸಲಾಗುವ ಬನಶಂಕರಿ ಮೂರ್ತಿ ಬಾದಾಮಿ ನಗರದ ನೇಕಾರ ಓಣಿಯಲ್ಲಿ ಇತ್ತೆಂದು ಹಿರಿಯರು ಹೇಳುವರು.

‘ಮೇಣಬಸದಿ ಸಮೀಪದ ದುರ್ಗದ ಒಳಗೆ ಬನಶಂಕರಿ ಮೂರ್ತಿ ಇತ್ತು. ದೇವಾಂಗ ಸಮಾಜದವರು ಪೂಜೆ ಮಾಡುತ್ತಿದ್ದೆವು. ಮೂರ್ತಿ ಭಗ್ನವಾದ ಕಾರಣ ಪೂಜಿಸಲು ಬಾರದ ಕಾರಣ ಮಲಪ್ರಭಾ ನದಿಯಲ್ಲಿ ಬಿಟ್ಟು ಬಂದೆವು’ ಎಂದು ದೇವಾಂಗ ಸಮಾಜದ ಹಿರಿಯರು ಹೇಳಿದರು.

ಈಗಿನ ಬನಶಂಕರಿ ದೇವಾಲಯದ ಉತ್ತರದಲ್ಲಿ ಭೂಮಿಯಲ್ಲಿ ಅರ್ಧಹೂತಂತಿರುವ ರಾಷ್ಟ್ರಕೂಟರ ಕಾಲದ ಬನಶಂಕರಿ ದೇವಾಲಯವಿದೆ. 11 ನೇ ಶತಮಾನದ ಶಾಸನದಲ್ಲಿ ‘ಬನದ ದೇವಿ’, ‘ಬನದ ಮಹಾಮಾಯಿ’ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ಸಂಶೋಧಕ ಅ.ಸುಂದರ ಉಲ್ಲೇಖಿಸಿದ್ದಾರೆ.

ಈಗಿರುವ ದೇವಾಲಯವನ್ನು 17ನೇ ಶತಮಾನದಲ್ಲಿ ಸಾತಾರೆಯ ಪರಶುರಾಮ ನಾಯಿಕ ಆನಗಳೆ ಎಂಬವರು ನಿರ್ಮಿಸಿದರೆಂದು ಮತ್ತು ವಿಗ್ರಹ ಕಪ್ಪುಶಿಲೆಯ ಸಿಂಹಾರೂಢಳಾಗಿರುವ ಮೂರ್ತಿಯನ್ನು ಮರಾಠಾ ಶಿಂಧೆ ಮನೆತನದವರು ಪ್ರತಿಷ್ಠಾಪಿಸಿದರೆಂದು ಪೀಠದಲ್ಲಿ ಶಾಸನವು ಹೇಳುತ್ತಿದೆ.

ಈಗಿನ ಬನಶಂಕರಿ ದೇವಾಲಯವು ಚೊಳಚಗುಡ್ಡ ಗ್ರಾಮದ ಸೀಮೆಯಲ್ಲಿರುವ ಶಕ್ತಿದೇವತೆ ಬಾದಾಮಿ ಬನಶಂಕರಿದೇವಿ ಎಂದು ಪ್ರಸಿದ್ಧಳು. ದೇವಾಲಯ ನಿರ್ಮಾಣ ಕಾಲದಿಂದ ಕಣ್ವ ಬ್ರಾಹ್ಮಣ ಶ್ರೀವತ್ಸ ಗೋತ್ರದವರು ಅರ್ಚಕರಾಗಿದ್ದಾರೆ.

ಬನಶಂಕರಿದೇವತೆಗೆ ಸ್ಕಂದ ಪುರಾಣದಲ್ಲಿ ‘ಶಾಖಾಂಬರಿ’ ಎಂದು ಉಲ್ಲೇಖವಿದೆ. ಮಳೆಯಾಗದೇ ಭೀಕರ ಬರ ಬಿದ್ದು ಲೋಕದ ಜನರು ತತ್ತರಿಸುವಾಗ ಜೀವಿಗಳನ್ನು ಸಂರಕ್ಷಿಸಲು ದೇವಿ ತನ್ನ ತನುವಿನಿಂದ ಸಸ್ಯವನ್ನು ಸೃಷ್ಟಿಸಿದಳೆಂದು ಉಲ್ಲೇಖಿಸಿದ್ದರಿಂದ ರಥೋತ್ಸವದ ಹಿಂದಿನ ದಿನ ದೇವಿಗೆ 108 ಬಗೆಯ ತರಕಾರಿಯನ್ನು ಉಡುಗೆಯನ್ನಾಗಿ ಮಾಡಿ ಅರ್ಚಕರು ಪೂಜಿಸುವರು. ಸುತ್ತಲಿನ ಭಕ್ತರು ‘ಪಲ್ಯೇದ ಹಬ್ಬ’ ಎಂದು ಆಚರಿಸುವರು.

ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ವಿಶಾಲವಾದ ಪುಷ್ಕರಣಿ, ಉತ್ತರ, ಪೂರ್ವ ಮತ್ತು ದಕ್ಷಿಣದಲ್ಲಿ ಶಿಲಾ ಮಂಟಪವನ್ನು ಮತ್ತು ಮೂರು ಅಂತಸ್ತಿನ ದೀಪಸ್ತಂಭವನ್ನು ನಿರ್ಮಿಸಿದ್ದಾರೆ.

ಸಾಂಸ್ಕೃತಿಕ, ಕರಕುಶಲ ಕಲೆ: ನಿತ್ಯ ಲಕ್ಷಾಂತರ ಭಕ್ತರು ಬಂದು ಇಡೀ ದಿನ ಜಾತ್ರೆಯಲ್ಲಿ ಪಾಲ್ಗೊಳ್ಳುವರು. ಭಕ್ತರಿಗೆ ರಾತ್ರಿ ಸಮಯದಲ್ಲಿ ಇಳಿದುಕೊಳ್ಳಲು ಸ್ಥಳದ ಅಭಾವದಿಂದಾಗಿ ಇಡೀ ರಾತ್ರಿ ನಾಟಕಗಳ ಪ್ರದರ್ಶನ ನಡೆಯುತ್ತವೆ.

ಹೊಳೆ ಆಲೂರಿನ ಕಲಾತ್ಮಕ ಬಾಗಿಲು ಚೌಕಟ್ಟು, ಜಾಲಿಹಾಳ ಗ್ರಾಮದ ಕಲಾವಿದರು ಗೋಮಯದಿಂದ ರೂಪಿಸಿದ ಕಿಟ್ಟದ ಬೊಂಬೆಗಳು ಅಧಿಕವಾಗಿ ಮಾರಾಟವಾಗುತ್ತವೆ. ಬೊಂಬೆಗಳನ್ನು ಕೊಟ್ಟವರಿಗೆ ಮತ್ತು ಪಡೆದವರಿಗೆ ಬೇಗ ಮದುವೆ ಮತ್ತು ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಬಾದಾಮಿ, ಗದಗ, ಶಿವಪುರ, ಶಿವಯೋಗಮಂದಿರ ರಸ್ತೆಯಲ್ಲಿ ಸಾವಿರಾರು ಅಂಗಡಿಗಳನ್ನು ವರ್ತಕರು ಸಿಂಗರಿಸಿ ವ್ಯಾಪಾರ ವಹಿವಾಟಿಗೆ ಸಜ್ಜಾಗಿದ್ದಾರೆ.

ಪತಿಯ ಮನೆಗೆ ತೆರಳಿದ ಮಹಿಳೆಯರು, ಬೀಗರು ಪ್ರತಿವರ್ಷ ಜಾತ್ರೆಗೆ ಬರುತ್ತಾರೆ. ಬೀಗರಿಗೆ ಸುತ್ತಲಿನ ಗ್ರಾಮದ ಮಹಿಳೆಯರು ಮನೆಯಲ್ಲಿ ಖಡಕ್ ಜೋಳ, ಸಜ್ಜೆ ರೊಟ್ಟಿ, ಥರಥರದ ಚಟ್ನಿ, ಶೇಂಗಾ ಹೋಳಿಗೆ, ಕರಚಿಕಾಯಿ ತಯಾರಿಸುವರು. ಐದು ದಿನಗಳವರೆಗೆ ಮನೆಯಲ್ಲಿ ಸಿಹಿ ಊಟ ಸವಿಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.