ಸೋಮವಾರ, ಮೇ 17, 2021
30 °C

ನಾಲ್ವರು ಕಳ್ಳರ ಬಂಧನ; 16 ಬೈಕ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ನಾಲ್ವರು ಕುಖ್ಯಾತ ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿರುವ ಜಮಖಂಡಿ ಶಹರ ಠಾಣೆ ‍ಪೊಲೀಸರು ಆರೋಪಿಗಳಿಂದ 16 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಮಖಂಡಿ ತಾಲ್ಲೂಕು ಕೊಣ್ಣೂರಿನ ಮಂಜುನಾಥ ಕಾಂಬಳೆ, ನಾಗ‍ಪ್ಪ ಮೇತ್ರಿ ಹಾಗೂ ಹುಣಸಿಕಟ್ಟಿಯ ರವಿ ಹೆಗ್ಗಣ್ಣವರ, ಗಣೇಶ ಇಂಗಳಗಿ ಬಂಧಿತರು.

ಪ್ರಕರಣದ ವಿವರ: ಜಮಖಂಡಿಯ ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಕಳುವಾಗಿರುವ ಬಗ್ಗೆ ಗೋಠೆ ಗ್ರಾಮದ ಯಲ್ಲಪ್ಪ ಮೋರೆ ಅಕ್ಟೋಬರ್ 9ರಂದು ಶಹರ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಡಿಸೆಂಬರ್ 5ರಂದು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳವು ಜಾಲ ಪತ್ತೆಯಾಗಿದೆ.

ಆರೋಪಿಗಳು ಜಮಖಂಡಿ ನಗರದಲ್ಲಿ ಐದು, ಹಿಪ್ಪರಗಿಯಲ್ಲಿ ಒಂದು, ಮುಧೋಳದಲ್ಲಿ ಎರಡು, ಲೋಕಾಪುರದಲ್ಲಿ ಒಂದು, ಬಲಬಲೇಶ್ವರದಲ್ಲಿ ಒಂದು, ಬೀಳಗಿ ಪಟ್ಟಣದಲ್ಲಿ ಎರಡು, ಬಿಸನಾಳದಲ್ಲಿ ಒಂದು, ಗಲಗಲಿ ಎರಡು ಹಾಗೂ ಗೋಕಾಕ ತಾಲ್ಲೂಕಿನ ಯರಗುದ್ರಿಯಲ್ಲಿ ಒಂದು ಬೈಕ್ ಕಳವು ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ.

ಎಸ್ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಜಮಖಂಡಿ ಪಿಎಸ್‌ಐ ಜಿ.ಎಸ್.‍ಪಾಟೀಲ, ಸಿ‍‍ಪಿಐ ಡಿ.ಕೆ.ಪಾಟೀಲ ಹಾಗೂ ಡಿವೈಎಸ್‌ಪಿ ಆರ್.ಕೆ.ಪಾಟೀಲ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು