ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ನೇ ದಿನಕ್ಕೆ ಕಾಲಿಟ್ಟ ಸಿಎಎ ವಿರೋಧಿ ಧರಣಿ

Last Updated 25 ಫೆಬ್ರುವರಿ 2020, 14:49 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ’ನಾವು ಭಾರತೀಯರು‘ ಸಂಘಟನೆಯಿಂದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿರುವ ಹೋರಾಟ ಧರಣಿ ಸತ್ಯಾಗ್ರಹ ಮಂಗಳವಾರ 17ನೇ ದಿನಕ್ಕೆ ಕಾಲಿಟ್ಟಿತು.

ಧರಣಿಯಲ್ಲಿ ಜೈನಪೇಟೆ ಹಾಗೂ ಸೆಕ್ಟರ್ ನಂ.33 ರ ನಿವಾಸಿಗಳು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೈನುದ್ದೀನ ನಬಿವಾಲೆ, ಬಿಟಿಡಿಎ ಮಾಜಿ ಅಧ್ಯಕ್ಷ ಎ.ಡಿ.ಮೊಕಾಶಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಕಾಯ್ದೆಯನ್ನು ತಕ್ಷಣ ಹಿಂಪಡೆದು ದೇಶದಲ್ಲಿ ಅರಾಜಕತೆ, ಅಸುರಕ್ಷತೆಯ ಭಾವವನ್ನು ತೊಡೆದು ಹಾಕಬೇಕು ಎಂದು ಒತ್ತಾಯಿಸಿದರು.

ಧರಣಿ ನಿರತರನ್ನು ಉದ್ದೇಶಿಸಿ ಇಸಾಕ್ ದಂಡಿಯಾ ಮಾತನಾಡಿ, ಕೇಂದ್ರ ಸರ್ಕಾರದ ಕರಾಳ ಕಾಯ್ದೆಯಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆದು ದೇಶದ ಅಖಂಡತೆಯನ್ನು ಕಾಪಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಿ.ಎಂ.ತರಫದಾರ. ಎ.ಎ.ದಂಡಿಯಾ, ಅಕ್ಬರ್ ಮುಲ್ಲಾ, ಕುತುಬುದ್ದೀನ್ ಖಾಜಿ, ಮಹಮ್ಮದ್ ಮುಜಾವರ್, ಸತ್ತಾರಸಾಬ್ ಗಲಗಲಿ, ಬುಡ್ಡೇಸಾಬ್ ಗಲಗಲಿ, ಸಿಕಂದರ್ ಅಥಣಿ, ಹುಸೇನ್ ಕೆರೂರ, ನಗರಸಭೆ ಮಾಜಿ ಸದಸ್ಯೆ ಮಮ್ತಾಜ್ ಆರಿ, ಚಾಂದಬೀಬಿ ಮುಜಾವರ್, ಬೀಬಿಜಾನ್ ತಾಳಿಕೋಟಿ, ಜೈಬುನ ಇಳಕಲ್ಲ, ಜಮೇಲಾ ಮನಿಯಾರ್, ಎಂ.ಎಂ.ಬಿಳೇಕುದರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT