ಗುರುವಾರ , ಮೇ 13, 2021
22 °C

ರಾಜಕುಮಾರ ಹೆಬ್ಬಾಳೆ ಬಿರುಸಿನ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಕುಮಾರ ಹೆಬ್ಬಾಳೆ ನಗರದ ವಿವಿಧ ಕಾಲೊನಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಮತದಾರರ ಮನೆಗಳಿಗೆ ತೆರಳಿ ಮತಯಾಚಿಸಿದರು. ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ, ಸುಬ್ರಹ್ಮಣ್ಯ ಪ್ರಭು ಅವರ ಮನೆಗಳಿಗೆ ಭೇಟಿ ಕೊಟ್ಟು ಬೆಂಬಲ ಕೋರಿದರು.

ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ಡಾ. ರಾಜಕುಮಾರ ಹೆಬ್ಬಾಳೆ ಅವರು ಕಲ್ಯಾಣ ಕರ್ನಾಟಕದಲ್ಲಿ ಜನಪದದ ಅರಿವು ಮೂಡಿಸಿದ್ದಾರೆ ಎಂದು ಉಷಾ ಪ್ರಭಾಕರ ಹೇಳಿದರು.

ರಾಜಕುಮಾರ ಅವರು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್, ಸಾಂಸ್ಕøತಿಕ ಸಂಪನ್ಮೂಲ ತರಬೇತಿ ಕೇಂದ್ರದ ಸದಸ್ಯರಾಗಿ ಹಲವು ಕಲಾವಿದರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವೇದಿಕೆ ಒದಗಿಸಿದ್ದಾರೆ. ಯುವ ಶಿಷ್ಯವೇತನ ಮಂಜೂರು ಮಾಡಿಸಿದ್ದಾರೆ. ಸಿನಿಯರ್, ಜೂನಿಯರ್ ಫೆಲೋಶಿಪ್ ಕೊಡಿಸಿದ್ದಾರೆ. ಕೇಂದ್ರ ಕೇಂದ್ರ ಸರ್ಕಾರದ ಮಾಸಾಶನ ಸೇರಿ ಸಾವಿರಾರು ಕಲಾವಿದರಿಗೆ ಮಾಸಾಶನ ಮಾಡಿಸಿದ್ದಾರೆ. ಅಕಾಡೆಮಿ ಅವರಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಎ.ಎಸ್. ಪ್ರಭಾಕರ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಪ್ರೊ. ಎಸ್.ಬಿ. ಬಿರಾದಾರ, ನಿಜಲಿಂಗಪ್ಪ ತಗಾರೆ, ಮಹಾನಂದ ಮಡಕಿ, ಡಾ. ಸುನಿತಾ ಕೂಡ್ಲಿಕರ್, ಮಲ್ಲಮ್ಮ ಸಂತಾಜಿ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಎಸ್.ಬಿ. ಕುಚಬಾಳ, ಅಶೋಕ ಹೆಬ್ಬಾಳೆ, ಶ್ರೀಕಾಂತ ಪಾಟೀಲ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು