ಬಾದಾಮಿ: ‘ ಚಾಲುಕ್ಯ ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವರು. ಉತ್ಸವವು ಯಶಸ್ವಿಯಾಗಲು ಜಿಲ್ಲೆ ಮತ್ತು ತಾಲ್ಲೂಕಿನ ಅಧಿಕಾರಿಗಳು ಸರಿಯಾಗಿ ಕಾರ್ಯವನ್ನು ನಿರ್ವಹಿಸಬೇಕು ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲಿನಲ್ಲಿ ಶನಿವಾರ ಚಾಲುಕ್ಯ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಡಿ 19, 20 ಮತ್ತು 21 ರಂದು ನಡೆಯುವ ಚಾಲುಕ್ಯ ಉತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು ಎಂದರು.

‘ವಿಶ್ವದಲ್ಲಿಯೇ ಚಾಲುಕ್ಯರ ಸ್ಮಾರಕಗಳು ಮಹತ್ವವನ್ನು ಪಡೆದಿವೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಿದೆ. ಚಾಲುಕ್ಯರ ಇತಿಹಾಸ, ಸಂಸ್ಕೃತಿ, ಪರಂಪರೆ ವೈಭವ ಮತ್ತು ದೊರೆಗಳ ಶೌರ್ಯ ಸಾಹಸದ ಬಗ್ಗೆ ಮಾಧ್ಯಮಲ್ಲಿ ಹೆಚ್ಚು ಪ್ರಸಾರ ಮಾಡಿ ’ ಎಂದು ಮಾಧ್ಯಮದವರಿಗೆ ಹೇಳಿದರು.

ಚಾಲುಕ್ಯರ ಲಾಂಛನ, ಆಮಂತ್ರಣ ಪತ್ರಿಕೆ, ಅತಿಥಿಗಳ ಆಹ್ವಾನ, ಕಲಾವಿದರ ಆಯ್ಕೆ, ವೇದಿಕೆ ತಯಾರಿ, ವಸತಿ, ಕುಡಿಯುವ ನೀರು, ಸ್ವಚ್ಛತೆ, ಸಾರಿಗೆ ಸೌಲಭ್ಯ, ಮೆರವಣಿಗೆ, ಆರೋಗ್ಯ, ಕ್ರೀಡೆ, ಗೋಷ್ಠಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

‘ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸಭೆ ಸೇರಿ ವಿವಿಧ ಸಮಿತಿಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಉತ್ಸವವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.

‘ ಉತ್ಸವಕ್ಕೆ ಸರ್ಕಾರದಿಂದ ಅನುದಾನ ತರುವೆ. ಸಾರ್ವಜನಿಕರಿಂದ ಸ್ಥಳೀಯವಾಗಿ ಹಣ ಸಂಗ್ರಹಿಸಿ ಯಾರಿಗೂ ಒತ್ತಾಯ ಮಾಡಬೇಡಿ ’ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಅಧಿಕಾರಿಯೊಬ್ಬರು ಮೊಬೈಲ್ ವೀಕ್ಷಿಸುತ್ತಿರುವುದನ್ನು ನೋಡಿದ ಸಚಿವರು ‘ ಸಭೆ ಎಂದರೆ ಏನು ಹುಡುಗಾಟ ಮಾಡಿದ್ದೀರಿ ಸಭೆಯಲ್ಲಿ ಚರ್ಚೆ ನಡೆದಿದೆ ನೀವು ಮೊಬೈಲ್ ನೋಡುತ್ತಿದ್ದೀರಿ ಹೊರಗೆ ಎದ್ದು ಹೋಗಿ ’ ಎಂದು ತರಾಟೆಗೆ ತೆಗೆದುಕೊಂಡರು.

‘ಹಿಂದೆ ನಡೆದ ಚಾಲುಕ್ಯ ಉತ್ಸವಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕಲಾವಿದರು ಆಗಮಿಸಿದ್ದರು. ಬರ, ಮತ್ತು ನೆರೆ ಪ್ರವಾಹದಿಂದ ದಶಗಳಿಂದ ಸ್ಥಗಿತವಾಗಿತ್ತು. ಚಾಲುಕ್ಯ ಉತ್ಸವ ಯಶಸ್ವಿಯಾಗಿ ನಡೆಯಲಿ ’ ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯಮಠ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲುಕ್ಯ ಉತ್ಸವದ ರೂಪರೇಷೆ ಕುರಿತು ಮಾಹಿತಿ ನೀಡಿದರು.

‘ ಡಿ. 19 ಬಾದಾಮಿ, 20 ಪಟ್ಟದಕಲ್ಲು, 21 ರಂದು ಐಹೊಳೆಯಲ್ಲಿ ಚಾಲುಕ್ಯ ಉತ್ಸವ ನಡೆಯಲಿದೆ. ಎಲ್ಲ ಸಮಿತಿಗಳು ಕಾರ್ಯವನ್ನು ನಿರ್ವಹಿಸುತ್ತಿವೆ ’ ಎಂದು ಬಾಗಲಕೋಟೆ ಉಪವಿಭಾಗ ಅಧಿಕಾರಿ ಸಂತೋಷ ಜಗಲಾಸರ ಸಮಿತಿಗಳ ವಿವರಣೆ ನೀಡಿದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್ ಕಾವ್ಯಶ್ರೀ ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.