ಭಾನುವಾರ, ಆಗಸ್ಟ್ 14, 2022
20 °C

ತಾಳಿಕಟ್ಟದೆ ಹೆಸರು ಹೇಳಕಾಗಲ್ಲ: ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತಾಳಿಕಟ್ಟದೆ ಹೆಸರು ಹೇಳಲು ಆಗುವುದಿಲ್ಲ‌ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಕಾಂಗ್ರೆಸ್, ಬಿಜೆಪಿ ಹಲವು ನಾಯಕರು ಜುಲೈ ಅಂತ್ಯಕ್ಕೆ ಜೆಡಿಎಸ್ ಸೇರ್ಪಡೆ‌ ಆಗಲಿದ್ದಾರೆ ಎಂಬ ಅವರ‌ ಮಾತಿಗೆ, ಯಾರ್ಯಾರು ಸೇರಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಸೇರ್ಪಡೆಗೆ ವೇದಿಕೆ ಸಿದ್ದವಾಗುತ್ತದೆ. ಅವರು ಸೇರ್ಪಡೆಗೊಳ್ಳುವವರೆಗೆ ಹೆಸರು ಹೇಳಲಾಗುವುದಿಲ್ಲ ಎಂದರು.

ಅರೆಂಜ್ ಮ್ಯಾರೇಜ್ ನಲ್ಲಿ ನಂಬಿಕೆ ಇಟ್ಟಿದ್ದೇವೆ. ಕಿಡ್ನಾಪ್ ಮಾಡಿ ಮದುವೆಯಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರಸ್ ನವರು ಕ್ಯಾಬರೆ ಮಾಡುತ್ತಿದ್ದರೆ, ಬಿಜೆಪಿಯವರು ಆಂಗ್ಲೊ ಇಂಡಿಯನ್ ಡ್ಯಾನ್ಸ್ ಮಾಡುತ್ತಿದ್ದಾರೆ. ಜೆಡಿಎಸ್ ನವರದ್ದು ಭರತ ನಾಟ್ಯವಾಗಿದೆ ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು