ಶನಿವಾರ, ಮಾರ್ಚ್ 6, 2021
19 °C
ಜಮಖಂಡಿ: ಒಟ್ಟು 10 ಮಂದಿಗೆ ಕೋವಿಡ್–19 ಧೃಢ

ಸೋಂಕಿತರ ಸಂಖ್ಯೆ ಏರಿಕೆ, ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ನಗರದಲ್ಲಿ 10 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿರುವುದು ತಾಲ್ಲೂಕಿನ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ನಗರದ ಮೊದಲಿಗೆ ಪೊಲೀಸ್ ಕ್ವಾಟ್ರಸ್‌ ನಿವಾಸಿಯೊಬ್ಬರಿಗೆ (ಪಿ-263) ಸೋಂಕು ಕಾಣಿಸಿಕೊಂಡಿತ್ತು. ನಂತರ ಎಟಿಎಂ ಭದ್ರತಾ ಸಿಬ್ಬಂದಿಗೆ (ಪಿ-373) ತಗುಲಿತ್ತು. ನಂತರ ಇಲ್ಲಿನ ಅವಟಿಗಲ್ಲಿಯ ಸೆಂಟ್ರಿಂಗ್ ಗುತ್ತಿಗೆದಾರಗೆ (ಪಿ-381) ಕೋವಿಡ್ 19 ದೃಢಪಟ್ಟಿತ್ತು. ಅವರಿಗೆ ಕೋವಿಡ್-19 ಸೋಂಕು ತಗುಲಿದ ಮೂಲ ಇನ್ನೂ ನಿಗೂಢವಾಗಿದೆ. ರೋಗಿಗಳು ತಮ್ಮ ಚಲನವಲನದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅವರು ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಒಳಗೆ ಹೋಗಿ ವಿಚಾರಣೆ ನಡೆಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ, ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಜಮಖಂಡಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿಜಯಪುರಕ್ಕೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಈಗ ಅವರ 22 ವರ್ಷದ ಮಗ (ಪಿ-523) ಹಾಗೂ ಸಹೋದರನ 20 ವರ್ಷದ ಪುತ್ರಿಗೆ (ಪಿ-521), ಸಹೋದರಿಗೆ (ಪಿ-597)  ಸೋಂಕು ದೃಢಪಟ್ಟಿದೆ. 

ಜಮಖಂಡಿಯ ಕಾಟಕ್ ಗಲ್ಲಿಯ 46 ವರ್ಷದ (ಪಿ-456) ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆದರೆ ಅವರಿಗೆ ಯಾವುದೇ ಪ್ರವಾಸದ ಇತಿಹಾಸವಿಲ್ಲ. ಇನ್ನಷ್ಟೇ ಅವರ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಬೇಕಿದೆ. ರೋಗಿ ಸಂಖ್ಯೆ 456 ಅವರ 32 ವರ್ಷದ ಪತ್ನಿ(ಪಿ-508), ಹಾಗೂ 12 ವರ್ಷದ ಮಗಳಿಗೆ(ಪಿ-509) ಸೋಂಕು ದೃಢಪಟ್ಟಿದೆ. ಮನೆಯ ಪಕ್ಕದ 11 ವರ್ಷದ (ಪಿ-522) ಬಾಲಕನಿಗೂ ಸೋಂಕು ತಗುಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು