ಕೆರೂರ (ಬಾಗಲಕೋಟೆ): ‘ಉಗಲವಾಟ ಗ್ರಾಮದಲ್ಲಿ ದ್ಯಾಮವ್ವನ ಗುಡಿಗೆ ಹೋಗಿದ್ದಕ್ಕೆ ಕೆಲವರು ನನ್ನನ್ನು ನಾಲ್ಕು ದಿನದ ಹಿಂದೆ ಕಂಬಕ್ಕೆ ಕಟ್ಟಿ ಬಡಿದಿದ್ದಾರೆ’ ಎಂದು ಅರ್ಜುನ ಮಾದರ ಎಂಬುವರು ಕೆರೂರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
‘ದಲಿತನಾದ ನೀನು ದ್ಯಾಮವ್ವನ ಗುಡಿಯ ಗರ್ಭ ಗುಡಿಯೊಳಕ್ಕೆ ಏಕೆ ಹೋಗಿದ್ದಿ ಎಂದು ಕಂಬಕ್ಕೆ ಕಟ್ಟಿ ಹೊಡೆದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಮುದಿಗೌಡ ಸತ್ಯಣ್ಣವರ, ಮಂಜುನಾಥ ಮೂಲಿಮನಿ, ತುಳಸಿಗೇರಪ್ಪ ತಳವಾರ ಇನ್ನೂ 18 ಜನರು ಸೇರಿ ಅವ್ಯಾಚ್ಯವಾಗಿ ಬೈದಿದ್ದಾರೆ’ ಎಂದು ದೂರಿನಲ್ಲಿ ಹೆಸರಿಸಲಾಗಿದೆ.
‘ಕೇರಿ ಜನರು ನಮ್ಮ ಏರಿಯಾಕ್ಕೆ ಬರಬೇಡಿ. ನೀವು ನಿಮ್ಮ ಏರಿಯಾದಲ್ಲಿರಿ. ನಾವು ನಮ್ಮ ಏರಿಯಾದಲ್ಲಿರುತ್ತೇವೆ ಎಂದು ಡಂಗುರ ಸಾರಲಾಗಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.