ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಡ್ಕ ಪ್ರಭಾಕರ್ ಭಟ್ಟ ವಿರುದ್ಧ ಕ್ರಮಕ್ಕೆ ಆಗ್ರಹ

Published 28 ಡಿಸೆಂಬರ್ 2023, 15:02 IST
Last Updated 28 ಡಿಸೆಂಬರ್ 2023, 15:02 IST
ಅಕ್ಷರ ಗಾತ್ರ

ಹುನಗುಂದ: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಸಮಿತಿ ಸದಸ್ಯರು ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಚೆನ್ನಯ್ಯ ದೇವೂರು ಅವರಿಗೆ ಬುಧವಾರ ದೂರು ನೀಡಿದರು.

ಸಮಿತಿ ಸದಸ್ಯೆ ರುಬಿನಾಬೇಗಮ್ ನದಾಫ್ ಮಾತನಾಡಿ, ‘ಕಲ್ಲಡ್ಕ ಪ್ರಭಾಕರ್ ಭಟ್ಟ ಅವರು ಅತ್ಯಂತ ಕೀಳಾಗಿ ಬಹಿರಂಗವಾಗಿ ಅವಮಾನಿಸುವ ರೀತಿಯಲ್ಲಿ ಮಾತನಾಡಿ, ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಅವರ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ನೋವಾಗಿದೆ’ ಎಂದರು.

ಜೈನಬ್ ಭನ್ನು, ಶಮಶಾದ್ ಖಾಜಿ, ಹುಸೇನಬಿ ವಾಲಿಕಾರ, ಉಮ್ಮೆ ಬೈತುಲ್ಲಾ ಛಾವಣಿ, ಸ್ವಾಲಿಹಾ ನಧಾಪ್, ರೇಷ್ಮಾ ಚೌದ್ರಿ, ಮಾಲನಬಿ ಲಾಲಕೋಟಿ, ಝುಲೇಖಾ ಕಲ್ಬುರ್ಗಿ, ದಿಲ್ಶಾದ್ ಬಂಗಾರಗುಂಡ್, ಆಶಾ ಪರ್ವಿನ್ ಕಲ್ಬುರ್ಗಿ, ಸುಲ್ತಾನಾ ಲಾಹೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT