ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಅಗತ್ಯ: ಶ್ವೇತಾ ಬೀಡಿಕರ್

Published 1 ಡಿಸೆಂಬರ್ 2023, 14:26 IST
Last Updated 1 ಡಿಸೆಂಬರ್ 2023, 14:26 IST
ಅಕ್ಷರ ಗಾತ್ರ

ಗುಳೇದಗುಡ್ಡ: ‘ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರ ಹಾಗೂ ಪುರಸಭೆ ಚುನಾಯಿತ ಸದಸ್ಯರ ಸಹಕಾರ, ಸಲಹೆಗಳು ಅಗತ್ಯವಾಗಿವೆ’ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದರು.

ಇಲ್ಲಿನ ಪುರಸಭೆಯ 2024-25 ನೇ ಸಾಲಿನ ಬಜೆಟ್ ತಯಾರಿಸುವ ಕುರಿತು ಈಚೆಗೆ ಜರುಗಿದ ಮೊದಲನೆ ಹಂತದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಾಧಿಕಾರಿಗಳು ಬೀದಿ ದೀಪಗಳ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮುಂಜಾಗ್ರತೆ ವಹಿಸಿದ್ದಾರೆ. ಪಟ್ಟಣದ ಯಾವುದೇ ವಾರ್ಡ್‍ಗಳಲ್ಲಿ ಸಾರ್ವಜನಿಕ ಸಮಸ್ಯೆಗಳಿದ್ದರೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ’ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ಪ್ರಾಸ್ತಾವಿಕವಾಗಿ ಮಾತನಾಡಿ, ಗುಳೇದಗುಡ್ಡ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸಾರ್ವಜನಿಕರಿಂದ ಮತ್ತು ಪುರಸಭೆ ಸದಸ್ಯರಿಂದ ಸಲಹೆಗಳನ್ನು ಪಡೆದು ಬಜೆಟ್ ತಯಾರಿಸುವ ಸಂದರ್ಭದಲ್ಲಿ ಅಳವಡಿಸಿಕೊಂಡು ಬಜೆಟ್ ತಯಾರಿಸಬೇಕೆಂಬುದು ನಮ್ಮ ಉದ್ದೇಶ. ಆದ್ದರಿಂದ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.

ಸಾರ್ವಜನಿಕರು ನೀಡಿದ ಹಲವಾರು ಸಲಹೆಗಳನ್ನು, ಸಾರ್ವಜನಿಕ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಬಜೆಟ್ ತಯಾರಿಸುವಾಗ ಪರಿಗಣಿಸಲು ನಿರ್ದಾರ ಕೈಗೊಳ್ಳಲಾಯಿತು.

ಸಾರ್ವಜನಿಕರಾದ ರಾಮಣ್ಣ ಚಂದರಗಿ, ವಿರುಪಾಕ್ಷಪ್ಪ ಹೆಗಡೆ, ಕೆಲೂಡಿ, ಬೆಣ್ಣಿ, ಲಕ್ಷ್ಮವ್ವ ತಳವಾರ, ಚಳ್ಳಮರದ ಸೇರಿದಂತೆ ಇತರರು ಸಭೆಗೆ  ಸಲಹೆಗಳನ್ನು ನೀಡಿದರು.

ಪುರಸಭೆ ಸದಸ್ಯರಾದ ವಿದ್ಯಾ ಮುರಗೋಡ, ವಿನೋದ ಮದ್ದಾನಿ, ಉಮೇಶ ಹುನಗುಂದ, ಪ್ರಶಾಂತ ಜವಳಿ, ಕಾಶೀನಾಥ ಕಲಾಲ ಇದ್ದರು.

ಒಟ್ಟು 23 ಸದಸ್ಯ ಬಲವಿರುವ ಪುರಸಭೆಗೆ ಮಹತ್ವದ ಬಜೆಟ್ ಸಭೆಯಲ್ಲಿ ಕೇವಲ 5 ಜನ ಮಾತ್ರ ಹಾಜರಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT