ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಪ್ರಿಯರ ಮನಗೆದ್ದ ಶ್ವಾನ ಪ್ರದರ್ಶನ

Published 10 ಮಾರ್ಚ್ 2024, 14:20 IST
Last Updated 10 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಮುಧೋಳ: ‘ಮಾ ತುಝೆ ಸಲಾಂ’ ಎಂದಾಗ ಮುಂಗಾಲು ಎತ್ತಿ ಭಾರತಾಂಬೆಗೆ ಸೆಲ್ಯೂಟ್ ಹೊಡೆಯುವ ಶ್ವಾನಗಳು, ಕುಳಿತುಕೋ ಎಂದರೆ ಕೂರುವ, ನಿಲ್ಲು ಎಂದರೇ ನಿಲ್ಲುವ... ಮಾಲೀಕನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಶ್ವಾನಗಳ ಪ್ರದರ್ಶನ ಪ್ರಾಣಿ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ತರಬೇತಿ ಪಡೆದ ದೇಸಿ ಹಾಗೂ ವಿದೇಶಿ ಶ್ವಾನಗಳ ನೃತ್ಯ ನೋಡುಗರಿಗೆ ಅಚ್ಚರಿಯನ್ನುಂಟುಮಾಡಿತು. ಬಾಗಲಕೋಟೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮುಧೋಳದ ಪಶು ಆಸ್ಪತ್ರೆ, ಅಸೋಸಿಯೇಶನ್ ಆಫ್ ಆಲೈನ್ಸ್ ಕ್ಲಬ್ಸ್ ಇಂಟರನ್ಯಾಷನಲ್ ಸಹಯೋಗದಲ್ಲಿ ಶನಿವಾರ ಸ್ಥಳೀಯ ರನ್ನ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಗಮನ ಸೆಳೆಯಿತು.

ಮುಧೋಳದ ಬೇಟೆ ನಾಯಿ, ಲ್ಯಾಬ್ರಡಾರ್, ಡಾಬರ್ಮನ್, ಬೀಗಲ್, ಜರ್ಮನ್ ಶಫರ್ಡ್, ಪೋಮೆರಿಯನ್, ಪಗ್‌, ಹೈರಿಸ್ ಸೆಟ್ಟರ್, ಕೋಕರ್‌ ಸ್ಪೇನಿಯಲ್‌, ರೋಟ್ ವೇಲರ್‌, ಮೆಸ್ಟಿಫ್‌, ಬುಲ್ಡಾಗ್, ಗ್ರೇ ಹೌಂಡ್‌, ಶಿ ಹ್ವಾಹ್ವಾ, ಸೈಬಿರಿಯನ್ ಹಸ್ಕಿ, ಡ್ಯಾಶ್‌ ಹೌಂಡ್‌, ಸೇಂಟ್‌ ಬರ್ನಾಡ್ ಸೇರಿದಂತೆ ವಿವಿಧ ತಳಿಯ ನಾಯಿಗಳು ಗಮನ ಸೆಳೆದವು.

ಪಶು ಇಲಾಖೆ ಮತ್ತು ಪಶು ಆಸ್ಪತ್ರೆಯ ವೈದ್ಯರು, ವಿವಿಧ ಕ್ಷೇತ್ರದ ನಾಯಕರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮುಧೋಳ ರನ್ನ ಕ್ರೀಡಾಂಗಣದಲ್ಲಿ ಶನಿವಾರ ನಡದ ಶ್ವಾನ ಪ್ರದರ್ಶನದಲ್ಲಿ ಮುಧೋಳ ತಳಿಯ ನಾಯಿಗಳು
ಮುಧೋಳ ರನ್ನ ಕ್ರೀಡಾಂಗಣದಲ್ಲಿ ಶನಿವಾರ ನಡದ ಶ್ವಾನ ಪ್ರದರ್ಶನದಲ್ಲಿ ಮುಧೋಳ ತಳಿಯ ನಾಯಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT