ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ

ಜಿಲ್ಲೆಯ ನೇಕಾರರ ಒಕ್ಕೂಟದಿಂದ ಸರ್ಕಾರಕ್ಕೆ ಆಗ್ರಹ
Last Updated 4 ಫೆಬ್ರುವರಿ 2021, 16:15 IST
ಅಕ್ಷರ ಗಾತ್ರ

ಬಾಗಲಕೋಟೆ: ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಜಿಲ್ಲೆಯ ನೇಕಾರ ಸಮುದಾಯದ ಒಕ್ಕೂಟ ಗುರುವಾರ ಒತ್ತಾಯಿಸಿತು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಎಂ.ಎಂ.ಹಂಡಿ, ನೇಕಾರ ಸಮುದಾಯವರು ಕಡುಬಡವ
ರಾಗಿದ್ದಾರೆ. ಸೀಮಿತ ಆದಾಯದಲ್ಲಿ ಬದುಕುತ್ತಿದ್ದಾರೆ ಈಗಲೂ ವಾರಕ್ಕೆ ಮೂರು ಸೀರೆ ನೇಯ್ದು ಅದರಲ್ಲಿ ಸಿಗುವ ಮಜೂರಿ ₹600ರಲ್ಲಿ ಬದುಕುವುದನ್ನು ಕಾಣಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದರೆ ಅದರಿಂದ ಸಮುದಾಯದ ಸರ್ವಾಂಗೀಣಅಭಿವೃದ್ಧಿಗೆ ನೆರವಾಗಲಿದೆ. ಸರ್ಕಾರದ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪಲು ನೆರವಾಗಲಿದೆ ಎಂದು ತಿಳಿಸಿದರು.

ನೇಕಾರರ ಒಕ್ಕೂಟದಲ್ಲಿ ಕುರುಹಿನಶೆಟ್ಟಿ, ಪಸ್ಮಸಾಲಿ, ಸ್ವಕುಳಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಶಿಂಪಿ, ಪಟ್ಟಸಾಲಿ, ಮಗ್ಗ, ಬಳಿಮಗ್ಗ, ಜಾಡ, ಕುರ್ಣಿ, ಕೋಷ್ಠಿ, ತೊಗಟವೀರ, ದೇವಾಂಗ ಸಮಾಜದವರು ಇದ್ದಾರೆ. ಈ ಸಮುದಾಯಗಳನ್ನು ಪ್ರವರ್ಗ 2ಎ ಮೀಸಲಾತಿ ಅಡಿಯಲ್ಲಿ ಗುರುತಿಸಿ ಸವಲತ್ತುಗಳನ್ನು ಕೊಡಲಾಗುತ್ತಿದೆ. ಆದರೆ ಆ ಪ್ರವರ್ಗದಲ್ಲಿ ಪ್ರಬಲ ಸಮುದಾಯದವರು ಇದ್ದು, ನೇಕಾರ ಸಮುದಾಯದವರು ಸವಲತ್ತು ವಂಚಿತರಾಗುತ್ತಿದ್ದಾರೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಈ ಅಸಮತೋಲನ ತಪ್ಪಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ಕುಪ್ಪಸ್ತ, ಶಿರಗಣ್ಣವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT