ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಇ ಮೇಲ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ ತಪಾಸಣೆ ನಡೆಸಿದರು.

ಬೆಳಿಗ್ಗೆ ಬಾಂಬ್ ಇಟ್ಟಿರುವ ಮೇಲ್ ವಿಷಯ ತಿಳಿಯುತ್ತಿದ್ದಂತೆಯೇ ಕಲಾಪವನ್ನೂ ಮುಂದೂಡಲಾಯಿತು. ಎಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಯಿತು. ತಪಾಸಣೆ ನಂತರ ಹುಸಿ ಬೆದರಿಕೆ ಇ ಮೇಲ್ ಎಂಬುದು ಗೊತ್ತಾಯಿತು. ನಂತರ ಕಲಾಪಗಳು ಎಂದಿನಂತೆ ನಡೆದವು.

ನ್ಯಾಯಾಲಯದ ಇ–ಮೇಲ್ ಐಡಿಗೆ ಮೊಹಮ್ಮದ್ ವಿಕ್ರಂ ರಾಜಗುರು ಎನ್ನುವ ಹೆಸರಿನ ಐಡಿಯಿಂದ ಬಾಂಬ್ ಬೆದರಿಕೆ ಬಂದಿದೆ. ಮಧ್ಯಾಹ್ನ 1 ರಿಂದ 2ರೊಳಗೆ ರಿಮೋಟ್ ಮೂಲಕ ಬಾಂಬ್ ಸ್ಫೋಟ ಮಾಡಲಾಗುವುದು ಎಂದು ಬರೆಯಲಾಗಿತ್ತು

ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳಿಂದ ದೂರು ಪಡೆದುಕೊಂಡು ಕೇಸ್ ದಾಖಲಿಸಿಕೊಳ್ಳಲಾಗಿದೆ. ಇ– ಮೇಲ್ ಎಲ್ಲಿಂದ, ಯಾರಿಂದ ಬಂದಿದೆ ಎಂದು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಯಾರೂ ಭಯಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ಧಾರ್ಥ ಗೋಯಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.