ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೂರ: ವಿಷ ಸೇವಿಸಿದ್ದ ರೈತ ಸಾವು

Published 11 ಜುಲೈ 2024, 13:00 IST
Last Updated 11 ಜುಲೈ 2024, 13:00 IST
ಅಕ್ಷರ ಗಾತ್ರ

ಕೆರೂರ: ಸಾಲ ಬಾಧೆಯಿಂದ ಈಚೆಗೆ ವಿಷ ಸೇವಿಸಿದ್ದ ಲಕ್ಕಸಕೊಪ್ಪ ಗ್ರಾಮದ ರೈತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ.

ರೈತ ಹನಮಂತ ಭೀಮಪ್ಪ ಮುರನಾಳ (52) ಅವರು ಜಮ್ಮನಕಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನಲ್ಲಿ ₹ 50 ಸಾವಿರ ಹಾಗೂ ಕಟಗೇರಿ ಗ್ರಾಮದ ಕೆವಿಜಿ ಬ್ಯಾಂಕ್‌ನಲ್ಲಿ ₹ 1 ಲಕ್ಷ ಸಾಲ ಮಾಡಿದ್ದರು.

ಸರಿಯಾಗಿ ಮಳೆ ಹಾಗೂ ಬೆಳೆ ಬಾರದ ಕಾರಣ ಸಾಲ ತೀರಿಸಲಾಗದೇ ನೊಂದು ಜುಲೈ 7 ರಂದು ತಮ್ಮ ಜಮೀನಿನಲ್ಲಿ ವಿಷ ಸೇವನೆ ಮಾಡಿದ್ದರು. ಚಿಕಿತ್ಸೆಗಾಗಿ ಬಾಗಲಕೋಟೆಯ ದಡ್ಡೆನ್ನವರ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತರ ಪತ್ನಿ ರೇಣವ್ವ ಮುರನಾಳ ಕೆರೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT