ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ | ರೈತರ ಮುತ್ತಿಗೆ: ಜಿಂದಾಲ್ ಕಂಪನಿಗೆ ನೀರು ಪೂರೈಕೆ ಸ್ಥಗಿತ

Published 12 ಡಿಸೆಂಬರ್ 2023, 14:30 IST
Last Updated 12 ಡಿಸೆಂಬರ್ 2023, 14:30 IST
ಅಕ್ಷರ ಗಾತ್ರ

ಹುನಗುಂದ: ಕಾಲುವೆಗಳಿಗೆ ನೀರು ಹರಿಸದೇ ಜಿಂದಾಲ್‌ ಕಂಪನಿಗೆ ನೀರು ಹರಿಸಲಾಗುತ್ತಿದೆ. ಕೂಡಲೇ ನಿಲ್ಲಿಸಬೇಕು ಎಂದು ನೀರು ಪೂರೈಸುವ ಪಂಪ್‌ ಹೌಸ್‌ಗೆ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಾಲ್ಲೂಕಿನ ಮರೋಳ ಗ್ರಾಮದ ಹತ್ತಿರವಿರುವ ಜಿಂದಾಲ್ ಕಂಪನಿಗೆ ನೀರು ಪೂರೈಸುವ ಪಂಪ್ ಹೌಸ್ ಗೇಟಿಗೆ ಹಾಕಲಾಗಿದ್ದ ಬೀಗವನ್ನು ಒಡೆದು ಒಳನುಗ್ಗಿದರು. 

ಪಂಪ್ ಹೌಸ್ ಒಳ ಹೋಗಲು ರೈತರು ಮುನ್ನಗ್ಗಿದಾಗ ಭದ್ರತಾ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಮಾತಿನ ಚಕಮಕಿ ನಡೆಯಿತು. ಗೇಟ್‌ ಮುರಿದು ಒಳನುಗ್ಗಿ, ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲಿನ ಸಿಬ್ಬಂದಿ ಸ್ಥಗಿತಗೊಳಿಸಿದರು.

ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ. ನೀರು ಬಿಡುವಂತೆ ಮನವಿ ಮಾಡಿದರೂ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಆದರೆ, ಜಿಂದಾಲ್‌ಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಗುರು ಗಾಣಿಗೇರ, ರಸೂಲ್‌ ಸಾಬ್‌ ತಹಶೀಲ್ದಾರ್, ಬಸನಗೌಡ ಸೇರಿದಂತೆ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT