ಕೂಡಲಸಂಗಮ: ಶ್ರಾವಣದ ಮೊದಲ ಸೋಮವಾರ, ಕೂಡಲಸಂಗಮಕ್ಕೆ ಭಕ್ತರ ದಂಡೇ ಹರಿದುಬಂದಿತ್ತು.
ಭಾನುವಾರ ಶ್ರಾವಣ ಅಮಾವಾಸ್ಯೆ ಇದ್ದ ಅಂಗವಾಗಿ ಕೆಲವು ಭಕ್ತರು ದೇವಾಲಯ ಆವರಣದಲ್ಲಿ ವಾಸ್ತವ್ಯ ಮಾಡಿ ಸೋಮವಾರ ಬೆಳಿಗ್ಗೆ ಸಂಗಮದಲ್ಲಿ ಪುಣ್ಯ ಸ್ನಾನಮಾಡಿ ಶ್ರಾವಣದ ಮೊದಲ ಸೋಮವಾರ ಆಚರಿಸಿ ಸಂಭ್ರಮಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾನುವಾರ ಸಂಗಮನಾಥನಿಗೆ 157 ರುದ್ರಾಭಿಷೇಕ, 73 ಪಂಚಾಮೃತ ಅಭಿಷೇಕ ಮಾಡಿಸಿದರು. ಶ್ರಾವಣದ ಮೊದಲ ಸೋಮವಾರ 110 ರುದ್ರಾಭಿಷೇಕ, 66 ಪಂಚಾಮೃತ ಅಭಿಷೇಕ ಮಾಡಿಸಿದರು. ಎರಡು ದಿನದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಬಂದು ಸಂಗಮನಾಥನ ದರ್ಶನ ಪಡೆದರು.