ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಲನ ಸಂಘದ ಹಣ ಅಕ್ರಮ ವರ್ಗಾವಣೆ: ಆರೋಪ

ಲೆಕ್ಕಪರಿಶೋಧಕ ಪರಾರಿ: ಮನೆ ಮುಂದೆ ಮಂಗಳಮುಖಿಯರ ಪ್ರತಿಭಟನೆ
Published : 28 ಸೆಪ್ಟೆಂಬರ್ 2024, 16:23 IST
Last Updated : 28 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಗುಳೇದಗುಡ್ಡ: ಬಾಗಲಕೋಟೆಯ ಮಿಲನ ಸಂಘದ ಸಿಬ್ಬಂದಿ ವೇತನದ ಹಣ ಹಾಗೂ ಮಂಗಳಮುಖಿಯರ ಪರಿಕರಗಳ ವಿತರಣೆ ಹಣವನ್ನು ನಕಲಿ ಸಹಿ ಮಾಡಿ, ಲಕ್ಷಾಂತರ ಹಣ ಗುಳಂ ಮಾಡಿದ್ದಾರೆ ಎಂದು ಆರೋಪಿಸಿ ಸಂಘದ ಪಟ್ಟಣದ ಲೆಕ್ಕಾಧಿಕಾರಿ ಮನೆ ಮುಂದೆ ಮಂಗಳಮುಖಿಯರು ಹಾಗೂ ಸಿಬ್ಬಂದಿ ಪ್ರತಿಭಟನೆ ಮಾಡಿದ ಘಟನೆ ಶನಿವಾರ ನಡೆದಿದೆ.

ಕಾರ್ಯಕ್ರಮ ವ್ಯವಸ್ಥಾಪಕ ಸಮೀರ ಕರಜಗಿ ಮಾತನಾಡಿ, ಕರ್ನಾಟಕ ಏಡ್ಸ್ ಪ್ರೀವೇನ್ಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಬಾಗಲಕೋಟೆಯ ಮಿಲನ ಸಂಘದಲ್ಲಿ ಗುಳೇದಗುಡ್ಡದ ವಿರುಪಾಕ್ಷಪ್ಪ ಮಂಟೂರು ಎಂಬುವರು ಕಖೆದ ಎರಡು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಅಕೌಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಸೆ.21ರಿಂದ ಒಟ್ಟು ₹ 10.34 ಲಕ್ಷ  ಹಣವನ್ನು ಮಿಲನ ಸಂಘದ ಖಾತೆಯಿಂದ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾನೆ.

ದುರುಪಯೋಗಪಡಿಸಿಕೊಂಡಿರುವ ನಮ್ಮ ಹಣವನ್ನು ಮಂಟೂರ ಅವರಿಂದ ವಸೂಲಿ ಮಾಡಿ ನಮ್ಮ ಸಂಘದ ಖಾತೆಗೆ ಹಣ ಜಮೆ ಮಾಡಿಸಿ, ನಮಗೆ ನ್ಯಾಯಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಘದ ಅಧ್ಯಕ್ಷೆ ಸುರೇಖಾ ವಡ್ಡರ ಮಾತನಾಡಿ, ನಮ್ಮ ಸಂಘವು ಕರ್ನಾಟಕ ಏಡ್ಸ್ ಪ್ರೀವೇನ್ಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿದೆ. ಸಂಘದ ಸಿಬ್ಬಂದಿ ವೇತನ ₹ 6.50 ಲಕ್ಷ, ಮಂಗಳಮುಖಿಯರ ಸದಸ್ಯರಿಗೆ ಪರಿಕರ ವಿತರಿಸಲು ಕಾಯ್ದಿರಿಸಿದ್ದ ಹಣವನ್ನು ಅಧ್ಯಕ್ಷರ ಹಾಗೂ ಯೋಜನಾ ನಿರ್ದೇಶಕರ ಸಹಿಯನ್ನು ನಕಲು ಮಾಡಿ ಮಂಟೂರು ವರ್ಗಾಯಿಸಿಕೊಂಡಿದ್ದಾರೆ. ನಮಗೆ ಅನ್ಯಾಯವಾಗಿದೆ. ಸಿಬ್ಬಂದಿ ಹೇಗೆ ಜೀವನ ನಡೆಸಬೇಕು. ಆತ ಲಪಾಟಿಯಿಸಿದ ಹಣವನ್ನು ನಮಗೆ ಮರಳಿ ಕೊಡಿಸಬೇಕು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಹುಚ್ಚಮ್ಮ ಹಡಪದ, ಸಂಗಮ್ಮ ಹಂಜಿ, ಸಂಗೀತಾ ಬಿಸನಾಳ, ರಂಗಮ್ಮ ಬನ್ನಿದಿನ್ನಿ, ಪರಶು ನಾಯ್ಕರ, ಅರ್ಪಿತಾ ಮೆಟ್ಟಿನ, ನಕ್ಷತ್ರಾ ಜಾಧವ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT